ದೇಶ

ಬಿಜೆಪಿ ಕ್ಲೀನ್‌ಸ್ವೀಪ್ ರಾಜ್ಯಗಳು

Published On :

ಈ ಬಾರಿ ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್ ಸಾಧಿಸಿದೆ. ಇತರೆ ಪಕ್ಷಗಳು ಅಧಿಕಾರದಲ್ಲಿರುವ ತಮಿಳುನಾಡು, ಪಶ್ಚಿಮಬಂಗಾಳ, ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಿರುವುದು ಗಮನಾರ್ಹ. ಬಿಜೆಪಿ ಕ್ಲೀನ್‌ಸ್ವೀಪ್ ರಾಜ್ಯಗಳು ಹೀಗಿವೆ


ಗುಜರಾತ್


ಮೋದಿ ಅವರ ತವರುರಾಜ್ಯವಾದ ಗುಜರಾತ್‌ನಲ್ಲಿ ಎಲ್ಲ 26 ಸ್ಥಾನಗಳೂ ಬಿಜೆಪಿ ಪಾಲಾಗಿವೆ. 2009ರಲ್ಲಿ ಇಲ್ಲಿ ಬಿಜೆಪಿ ಕೇವಲ 15 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು.


ರಾಜಸ್ಥಾನ


ಕಳೆದ ವರ್ಷದ ವಿಧಾನಸಭೆ ಚುನಾವಣೆಯ ಟ್ರೆಂಡೇ ಮುಂದುವರಿದಿದೆ. ರಾಜಸ್ಥಾನದ ಎಲ್ಲ 25 ಸ್ಥಾನಗಳೂ ಬಿಜೆಪಿ ಮಡಿಲಿಗೆ ಬಿದ್ದಿದೆ. 2009ರಲ್ಲಿ ಬಿಜೆಪಿಗೆ ಇಲ್ಲಿ ನಾಲ್ಕು ಸ್ಥಾನಗಳಲ್ಲಷ್ಟೇ ಗೆಲ್ಲಲು ಸಾಧ್ಯವಾಗಿತ್ತು.


ಜಾರ್ಖಂಡ್


2009ರಲ್ಲಿ ಜಾರ್ಖಂಡ್‌ನಲ್ಲಿ 14ರ ಪೈಕಿ 8 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದ ಬಿಜೆಪಿ ಈ ಬಾರಿ 13 ಸ್ಥಾನಗಳನ್ನು ಗೆದ್ದಿದೆ.


ಛತ್ತೀಸ್‌ಗಡ


11ರಲ್ಲಿ 10 ಸ್ಥಾನಗಳು ಬಿಜೆಪಿ ಮುಡಿಗೆ. 2009ರಲ್ಲೂ ಬಿಜೆಪಿ ಇದೇ ಸಾಧನೆ ಮಾಡಿತ್ತು.


ದೆಹಲಿ


ಕಳೆದ ಚುನಾವಣೆಯಲ್ಲಿ ಖಾತೆಯೇ ತೆರೆಯದ ಬಿಜೆಪಿ ಈ ಬಾರಿ ಕ್ಲೀನ್ ಸ್ವೀಪ್. ಎಲ್ಲ 7 ಸ್ಥಾನಗಳೂ ಕಮಲದ ತೆಕ್ಕೆಗೆ ಬಂದಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ಈ ಬಾರಿ ಲೋಕಸಭೆಯಲ್ಲೂ ರಾಷ್ಟ್ರ ರಾಜಧಾನಿಯ ಜನತೆ ಕಮಲದ ಕೈ ಹಿಡಿದಿದ್ದಾರೆ.


ಉತ್ತರಾಖಂಡ


ಇಲ್ಲಿ ಅಚ್ಚರಿಯ ಫಲಿತಾಂಶ. ಕಳೆದ ಚುನಾವಣೆಯಲ್ಲಿ ಖಾತೆಯೇ ತೆರೆಯದ ಬಿಜೆಪಿಗೆ ಈ ಬಾರಿ ಎಲ್ಲ 5 ಸ್ಥಾನಗಳಲ್ಲೂ ಜಯಲಕ್ಷ್ಮಿ ಒಲಿದಿದ್ದಾಳೆ.


ಗೋವಾ


ಎರಡು ಲೋಕಸಭಾ ಸ್ಥಾನಗಳಲ್ಲೂ ಭರ್ಜರಿ ಗೆಲವು ಸಾಧಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.


ಮಧ್ಯಪ್ರದೇಶ


ಈ ಬಾರಿ 29ರಲ್ಲಿ 27 ಸ್ಥಾನಗಳು ಬಿಜೆಪಿ ಪಾಲಾಗಿವೆ. 5 ವರ್ಷಗಳ ಹಿಂದೆ ಬಿಜೆಪಿ ಇಲ್ಲಿ 16 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು.


ಜಮ್ಮು ಕಾಶ್ಮೀರ


ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಸಂಪೂರ್ಣವಾಗಿ ವಾಷ್‌ಔಟ್ ಆಗಿದೆ. ಇಲ್ಲಿ ಬಿಜೆಪಿಗೆ 2 ಸ್ಥಾನ ದೊರೆತರೆ, ಪಿಡಿಪಿಗೆ 3ರಲ್ಲಿ ಗೆಲವು ಸಾಧಿಸಿದೆ.


ಹಿಮಾಚಲಪ್ರದೇಶ


ಎಲ್ಲ ನಾಲ್ಕು ಸ್ಥಾನಗಳಲ್ಲೂ ಬಿಜೆಪಿ ಜಯ ಸಾಧಿಸಿದೆ.


ಉತ್ತರಪ್ರದೇಶ

ಬಿಜೆಪಿಗೆ ಅಭೂತಪೂರ್ವ ಗೆಲವು. ಹಿಂದೆಂದೂ ಕಂಡರಿಯದಂತೆ ಉತ್ತರಪ್ರದೇಶದಲ್ಲಿ ಬಿಜೆಪಿ ಭಾರಿ ಸಾಧನೆ ಮಾಡಿದೆ. ನಿರ್ಣಾಯಕ 80 ಸ್ಥಾನಗಳ ಪೈಕಿ 70 ರಲ್ಲಿ ಪಕ್ಷ ಗೆಲವಿನ ನಗೆ ಬೀರಿದೆ.


ಮಹಾರಾಷ್ಟ್ರ


ಬಿಜೆಪಿ-ಶಿವಸೇನೆ ಮೈತ್ರಿಕೂಟ ಉತ್ತಮ ಸಾಧನೆ ಮಾಡಿದೆ. 48ರ ಪೈಕಿ 44 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.