ಗೆಲವಿನ ರೂವಾರಿಗೆ ವೀರೋಚಿತ ಸ್ವಾಗತ

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಬಿಜೆಪಿಗೆ ಅಭೂತಪೂರ್ವ ಗೆಲವು ತಂದುಕೊಟ್ಟ ನರೇಂದ್ರಮೋದಿಗೆ ರಾಜಧಾನಿಯಲ್ಲಿ ಶನಿವಾರ ವಿರೋಚಿತ ಸ್ವಾಗತ ನೀಡಲಾಯಿತು.
ಮೂರು ದಶಕಗಳ ನಂತರ ಏಕಪಕ್ಷದ ಸರ್ಕಾರ ರಚನೆಗೆ ಕಾರಣಕರ್ತರಾದ ಮೋದಿ ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಯಿತು.
ಸುಮಾರು 16 ಕಿ.ಮೀ. ದೂರದ ವಿಜಯಯಾತ್ರೆಯುದ್ದಕ್ಕೂ ಜನರು ಜಯಘೋಷ ಮೊಳಗಿಸಿ, ಪಟಾಕಿ ಸಿಡಿಸಿ, ಪುಷ್ಪಧಾರೆಗಳೊಂದಿಗೆ ಅಭೂತಪೂರ್ವವಾಗಿ ಸ್ವಾಗತಿಸಲಾಯಿತು. ಸುರಕ್ಷಾ ದೃಷ್ಟಿಯಿಂದ ಗುಂಡುನಿರೋಧಕ ಕಾರಿನಲ್ಲಿ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಂಡ ಮೋದಿ, ಅಲ್ಲಲ್ಲಿ ಕಾರಿನಿಂದ ಹೊರಗಿಳಿದು ಜನರತ್ತ ಕೈಬೀಸುತ್ತಾ ಸಾಗಿದರು. ಕೆಲವೆಡೆ ಒಂದೆರಡು ನಿಮಿಷ ಮಾತನಾಡಿ ದೆಹಲಿ ಜನತೆಗೆ ವಂದಿಸಿದರು.
ದೆಹಲಿ ಪ್ರವೇಶಿಸಿ ಕಾರಿನಿಂದಿಳಿಯುತ್ತಿದ್ದಂತೆ ಪುಷ್ಪವರ್ಷಧಾರೆಯೆರೆಲಾಯಿತು. ಪ್ರಧಾನಿ ಹುದ್ದೆಗೇರಲು ರಾಜಧಾನಿಯತ್ತ ಆಗಮಿಸಿದ ಗುಜರಾತ್ನಲ್ಲಿ ಮುಖ್ಯಮಂತ್ರಿಯ ಸ್ವಾಗತಿಸಲು ಇಡೀ ದೆಹಲಿಯೇ ಒಂದಾಗಿ ನಿಂತಂತಿತ್ತು. ಮೋದಿ ಅವರನ್ನು ಬಿಜೆಪಿ ನಾಯಕರು ಹೂವಿನಗುಚ್ಛ ನೀಡಿ ಬರಮಾಡಿಕೊಂಡರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ವಿಮಾನ ನಿಲ್ದಾಣಕ್ಕೇ ಬಂದು ನಿಂತಿದ್ದರು.
ಕಾಂಗ್ರೆಸ್ಅನ್ನು ಧೂಳಿಪಟ ಮಾಡಿ ಗಾಂಧಿ ಕುಟುಂಬದ ಆಡಳಿತಕ್ಕೆ ತೆರೆ ಎಳೆದ ಮೋದಿ ಅವರ ವಿಜಯೋತ್ಸವ ನಡೆಯುತ್ತಿದ್ದ ಬಿಜೆಪಿ ಕಚೇರಿಯ ಕೆಲವೇ ಮೀಟರ್ಗಳ ಅಂತರದಲ್ಲಿದ್ದ ಗಾಂಧಿ ಕುಟುಂಬದ ನಿವಾಸ, ನಂ. 10 ಜನಪಥ್ನಲ್ಲಿ ನೀರವವಿತ್ತು. ಪಕ್ಷದ ಕಚೇರಿಗೆ ಪ್ರವೇಶಿಸುವ ಮುನ್ನ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದರು.
ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ದೆಹಲಿಯ ಜನತೆ ಎಲ್ಲ ಏಳು ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ, ದೆಹಲಿ ಜನರ ಹೃದಯ ವೈಶಾಲ್ಯಕ್ಕೆ ನಾನು ತಲೆಭಾಗಿದ್ದೇನೆ.
- ನರೇಂದ್ರ ಮೋದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


