ಯಡವಟ್ಟಿಗೆ ಬೆಲೆ ತೆತ್ತ ಮೊರಾಕೋ, 1-0 ಅಂತರದಲ್ಲಿ ಇರಾನ್ ಗೆ ರೋಚಕ ಜಯ

ಫೀಫಾ ವಿಶ್ವಕಪ್ ಫುಟಬಾಲ್ ಟೂರ್ನಿ ಆರಂಭವಾಗಿ ಕೇವಲ 2 ದಿನಗಳು ಕಳೆದಿದ್ದು, ಈಗಾಗಲೇ ಟೂರ್ನಿ ಸಾಕಷ್ಟು ರೋಚಕತೆಯನ್ನು ಕಟ್ಟಿಕೊಟ್ಟಿದೆ. ಅಂತೆಯೇ ಸಾಕಷ್ಟು ಆಟಗಾರರು ಯಡವಟ್ಟುಗಳನ್ನು ಮಾಡಿಕೊಂಡಿದ್ದಾರೆ.
ಇರಾನ್ ಪರ ಗೋಲು ಭಾರಿಸಿದ ಮೊರಾಕೋ ತಂಡದ ಆಟಗಾರ ಅಜೀಜ್ ಬೌಹದ್ದೌಜ್
ಇರಾನ್ ಪರ ಗೋಲು ಭಾರಿಸಿದ ಮೊರಾಕೋ ತಂಡದ ಆಟಗಾರ ಅಜೀಜ್ ಬೌಹದ್ದೌಜ್
Updated on: 
ಮಾಸ್ಕೋ: ಫೀಫಾ ವಿಶ್ವಕಪ್ ಫುಟಬಾಲ್ ಟೂರ್ನಿ ಆರಂಭವಾಗಿ ಕೇವಲ 2 ದಿನಗಳು ಕಳೆದಿದ್ದು, ಈಗಾಗಲೇ ಟೂರ್ನಿ ಸಾಕಷ್ಟು ರೋಚಕತೆಯನ್ನು ಕಟ್ಟಿಕೊಟ್ಟಿದೆ. ಅಂತೆಯೇ ಸಾಕಷ್ಟು ಆಟಗಾರರು ಯಡವಟ್ಟುಗಳನ್ನು ಮಾಡಿಕೊಂಡಿದ್ದಾರೆ.
ಈ ಪಟ್ಟಿಗೆ ಇದೀಗ ಮೊರಾಕೋ ಆಟಗಾರನೋರ್ವ ಸೇರ್ಪಡೆಯಾಗಿದ್ದು, ಎದುರಾಳಿ ಆಟಗಾರ ಹೊಡೆದ ಚೆಂಡು ಗೋಲ್ ಪೋಸ್ಚ್ ನೊಳಗೆ ಹೋಗದಂತೆ ತಡೆಯಲು ಹೋಗಿ ತಾನೇ ಗೋಲ್ ಹಾಕಿಕೊಟ್ಟ ಘಟನೆ ನಿನ್ನೆ ಮೊರಾಕೋ ಮತ್ತು ಇರಾನ್ ನಡುವಿನ ಪಂದ್ಯದಲ್ಲಿ ನಡೆದಿದೆ. ಮೊರಾಕೋ ತಂಡದ ಪ್ರಮುಖ ಆಟಗಾರ ಅಜೀಜ್ ಬೌಹದ್ದೌಜ್ ಅವರು ಎದುರಾಳಿ ತಂಡದ ಪರ ಗೋಲ್ ಹಾಕಿಕೊಟ್ಟು ತಮ್ಮ ತಂಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಮಾತ್ರವಲ್ಲದೇ ತಂಡದ ಸೋಲಿಗೆ ಕಾರಣರಾಗಿದ್ದಾರೆ.
ಹೌದು.. ಫೀಫಾ ವಿಶ್ವಕಪ್ ಪಂದ್ಯಾಟದ ಮೂರನೇ ಪಂದ್ಯದಲ್ಲಿ ಮೊರಾಕೋ ಮತ್ತು ಇರಾನ್ ತಂಡಗಳು ಎದುರಾದವು,  ಈ ಪಂದ್ಯದಲ್ಲಿ ಇರಾನ್ ತಂಡ ಒಂದೂ ಗೋಲು ಬಾರಿಸದೇ ಮೊರಾಕ್ಕೋ ವಿರುದ್ಧ 1-0 ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತು. ಅರೆ ಒಂದೂ ಗೋಲು ದಾಖಲಿಸದ ಇರಾನ್ ಹೇಗೆ 1-0 ಅಂತರದಲ್ಲಿ ಗೆದ್ದು ಬೀಗಿತು? ಇದಕ್ಕೆ ಉತ್ತರ ಮೊರಾಕೋ ತಂಡದ ಸ್ಟೈಕರ್ ಅಜೀಜ್ ಬೌಹದ್ದೌಜ್. 
ಪಂದ್ಯ ಆರಂಭಗೊಂಡ 28 ನಿಮಿಷಗಳವರೆಗೆ ಎರಡೂ ತಂಡದಿಂದ ಒಂದೂ ಗೋಲ್ ದಾಖಲಾಗಿರಲಿಲ್ಲ. ಎರಡೂ ತಂಡಗಳ ಜಿದ್ದಾಜಿದ್ದಿಯ ನಡುವೆಯೂ 79 ನಿಮಿಷಗಳವರೆಗೆ ಗೋಲ್ ಪಟ್ಟಿ 0-0 ಆಗಿತ್ತು. ಪಂದ್ಯದ ವೇಳೆ ಅನೇಕ ಬಾರಿ ಗೋಲ್ ದಾಖಲಾಗುವ ಸನ್ನಿವೇಶ ಬಂದಿತ್ತಾದರೂ ಗೋಲ್ ಕೀಪರ್ ಗಳ ಕೈಚಳಕದಿಂದ ಚೆಂಡು ನೆಟ್ ಒಳಗೆ ಬೀಳಲಿಲ್ಲ. ಈ ಹಂತದಲ್ಲಿ ಇರಾನ್ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಚೆಂಡನ್ನು ಮೊರಾಕೋ ಗೋಲ್ ಪೋಸ್ಟ್ ನತ್ತ ತೆಗೆದುಕೊಂಡು ಹೋದರು. ಇರಾನ್ ತಂಡದ ಆಟಗಾರ ಗೋಲ್ ಪೋಸ್ಟ್ ನತ್ತ ಚೆಂಡನ್ನು ಒದ್ದಾಗ ಸಮೀರದಲ್ಲೇ ನಿಂತಿದ್ದ ಮೊರಾಕೋ ಆಟಗಾರ ಅಜೀಜ್ ಬೌಹದ್ದೌಜ್ ಅದನ್ನು ತಲೆಯಿಂದ ತಡೆಯುವ ಪ್ರಯತ್ನ ಮಾಡಿದರು. ಆದರೆ ಅವರು ತಡೆಯಲೆತ್ನಿಸಿದ ಚೆಂಡು ನೇರವಾಗಿ ಗೋಲ್ ಪೋಸ್ಟ್ ನೊಳಗೆ ಸೇರಿತ್ತು.
ಪರಿಣಾಮ ಇರಾನ್ ಪರ ಒಂದು ಗೋಲು ದಾಖಲಾಯಿತು. ಅಜೀಜ್ ಬೌಹದ್ದೌಜ್ ಮಾಡಿದ ಯಡವಟ್ಟಿನಿಂದಾಗಿ ಟೂರ್ನಿಯಲ್ಲಿ ಇರಾನ್ ಶುಭಾರಂಭ ಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com