ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ಕೈ ಹಿಡಿದ ರೊನಾಲ್ಡೋ 'ಹ್ಯಾಟ್ರಿಕ್ ಗೋಲ್'

ಫುಟ್ ಬಾಲ್ ದಂತಕಥೆ ರೊನಾಲ್ಡೋ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ಪ್ರಬಲ ಸ್ಪೇನ್ ವಿರುದ್ಧ 3-3 ರಲ್ಲಿ ರೋಚಕ ಡ್ರಾ ಸಾಧಿಸಿದೆ.
ಪೋರ್ಚುಗಲ್ ಅನ್ನು ಸೋಲಿನಿಂದ ಪಾರು ಮಾಡಿದ ರೊನಾಲ್ಡೋ
ಪೋರ್ಚುಗಲ್ ಅನ್ನು ಸೋಲಿನಿಂದ ಪಾರು ಮಾಡಿದ ರೊನಾಲ್ಡೋ
Updated on: 
ಮಾಸ್ಕೋ: ಫುಟ್ ಬಾಲ್ ದಂತಕಥೆ ರೊನಾಲ್ಡೋ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ಪ್ರಬಲ ಸ್ಪೇನ್ ವಿರುದ್ಧ 3-3 ರಲ್ಲಿ ರೋಚಕ ಡ್ರಾ ಸಾಧಿಸಿದೆ.
ಮಾಸ್ಕೋದಲ್ಲಿ ನಡೆದ ಫೀಫಾ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ನಿನ್ನೆ ಫುಟ್ ಬಾಲ್ ಕ್ಷೇತ್ರದ ಮದಗಜಗಳು ಹೋರಾಟ ನಡೆಸಿದ್ದವು. ಪ್ರಬಲ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ ಕ್ಷಣದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರೂ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು.
ಪಂದ್ಯದಲ್ಲಿ ಆರಂಭಿಕ ಯಶಸ್ಸು ಸಾಧಿಸಿದ ಹೊರತಾಗಿಯೂ ಪೋರ್ಚುಗಲ್ ತಂಡ ಅಕ್ಷರಶಃ ಸೋಲಿನ ಸುಳಿಗೆ ಸಿಲುಕಿತ್ತು. ಅಂತಮ ಕ್ಷಣದ ವೇಳೆ 2-3ರಲ್ಲಿ ಸ್ಪೇನ್ ವಿರುದ್ಧ ಭಾರಿ ಹಿನ್ನಡೆ ಕಂಡಿತ್ತು. ಆದರೆ ಪಂದ್ಯದ 88ನೇ ನಿಮಿಷದಲ್ಲಿ ದೊರೆತ ಫ್ರೀ ಕಿಕ್ ಅವಕಾಶವನ್ನು ಅದ್ಬುತವಾಗಿ ಬಳಕೆ ಮಾಡಿಕೊಂಡ ರೊನಾಲ್ಡೋ ಗೋಲ್ ಸಾಧಿಸುವ ಮೂಲಕ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗುವಂತೆ ಮಾಡಿದರು. ಅಲ್ಲಿಯವರೆಗೂ ಗೆಲುವಿನ ವಿಶ್ವಾಸದಲ್ಲಿದ್ದ ಸ್ಪೇನ್ ಗೆ ರೊನಾಲ್ಡೋ ಫ್ರೀ ಕಿಕ್ ಗೋಲ್ ನಿಜಕ್ಕೂ ಆಘಾತವನ್ನುಂಟು ಮಾಡಿತ್ತು.
ಸ್ಪೇನ್‌ ಕಡೆಯಿಂದ ಡಿಯಾಗೋ ಕೋಸ್ಟಾ (24, 55ನೇ ನಿಮಿಷ) ಹಾಗೂ ನಾಚೋ (56ನೇ) ನಿಮಿಷದಲ್ಲಿ ಗೋಲು ಬಾರಿಸಿದ್ದರು. ಪರಿಣಾಮ 3-3 ಗೋಲುಗಳಿಂದ ಸ್ಪೇನ್-ಪೋರ್ಚುಗಲ್ ಸಮಬಲ ಸಾಧಿಸಿದವು. ರೊನಾಲ್ಡೋ ಬಾರಿಸಿದ ಹ್ಯಾಟ್ರಿಕ್ ವಿಶ್ವಕಪ್ ಇತಿಹಾಸದಲ್ಲಿ 51ನೇ ಹ್ಯಾಟ್ರಿಕ್ ಆಗಿದೆ.
ರೊನಾಲ್ಡೋಗೆ 55ನೇ ಹ್ಯಾಟ್ರಿಕ್ ಗೋಲ್
ಇನ್ನು ಫುಟ್ ಬಾಲ್ ದಂತಕಥೆ ರೊನಾಲ್ಡೋಗೆ ಇದು ತಮ್ಮ ವೃತ್ತಿ ಜೀವನದ 55ನೇ ಹ್ಯಾಟ್ರಿಕ್ ಗೋಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com