ಫಿಫಾ ವಿಶ್ವಕಪ್ 2014

ಜಿಗಿದ ಜರ್ಮನಿ

ಜಿಗಿದ ಜರ್ಮನಿ
Published On :

ಜರ್ಮನಿ 1, ಫ್ರಾನ್ಸ್ 0
ರಿಯೋ ಡಿ ಜನೈರೋ:
ಮೊದಲಾರ್ಧ ಪಂದ್ಯದ 13ನೇ ನಿಮಿಷದಲ್ಲಿ ಮ್ಯಾಟ್ಸ್ ಹ್ಯೂಮೆಲ್ಸ್ ತಲೆಯಿಂದ ಗಳಿಸಿದ ಅದ್ಭುತ ಗೋಲಿನ ನೆರವಿನೊಂದಿಗೆ ಜರ್ಮನಿ ತಂಡ ಶುಕ್ರವಾರ ನಡೆದ ಮೊದಲ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿತು.
ಇದರೊಂದಿಗೆ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿತು.ಜರ್ಮನಿಗೆ ದೊರಕಿದ ಫ್ರೀ ಕಿಕ್‌ನಲ್ಲಿ ಟೋನಿ ಕ್ರೂಸ್ ಪಾಸ್ ಮಾಡಿದ ಚೆಂಡನ್ನು ತಲೆಯಿಂದ ಗೋಲು ಪೆಟ್ಟಿಗೆ ಸೇರುವಂತೆ ನೋಡಿಕೊಂಡರು ಹ್ಯೂಮೆಲ್.
ನಂತರ ಜರ್ಮನಿಯ ಮಿರಾಸ್ಲಾವ್ ಕ್ಲೋಸ್ ಅವರು ಪೆನಾಲ್ಟಿಗೆ ಮನವಿ ಮಾಡಿದರು, ಅದಕ್ಕೆ ರೆಫರೀ ಅನುಮತಿ ನೀಡಲಿಲ್ಲ. ಫ್ರಾನ್ಸ್‌ನ ಮ್ಯಾಥ್ಯೂ ಡೆಬುಚಿ ಅವರು ಮಿರಾಸ್ಲಾವ್ ಟಿ ಶರ್ಟ್ ಹಿಡಿದ ಹಿನ್ನೆಲೆಯಲ್ಲಿ ಪೆನಾಲ್ಟಿಗೆ ಮನವಿ ಮಾಡಿದ್ದರು.
ಇದನ್ನು ಬಿಟ್ಟರೆ ಫ್ರಾನ್ಸ್ ಸಹ ಪಂದ್ಯದ ಮೊದಲಾರ್ಧದಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತ್ತು.
ಉಭಯ ತಂಡಗಳು ಗುಣಮಟ್ಟದ ಪ್ರದರ್ಶನ ನೀಡಿದಾಗ್ಯೂ, ಫ್ರಾನ್ಸ್ ಅದೃಷ್ಟ ಸರಿ ಇರಲಿಲ್ಲ. ಕಾರಣ ಅದು ಗೋಲು ದಾಖಲಿಸಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು. ಫ್ರಾನ್ಸ್‌ನ ಮ್ಯಾಥ್ಯೂ ವಲ್ಬುಯನಾಸ್ ಅವರು ಗೋಲು ಗಳಿಸಲು ಮಾಡಿದ ಯತ್ನವನ್ನು ವಿಫಲಗೊಳಿಸುವಲ್ಲಿ ಜರ್ಮನಿಯ ಮ್ಯಾನ್ಯೂಲ್ ನ್ಯೂಯರ್ ಸೂಪರ್ ಪ್ರದರ್ಶನ ನೀಡಿದರು.
ನಂತರ ಮಮಾಡೌ ಸಾಖೋ ಅವರು ತಲೆಯಿಂದ ಹೊಡೆದ ಚೆಂಡು ಗೋಲುಪೆಟ್ಟಿಗೆಯ ಮೇಲೆ ಹರಿಯಿತು. ಇನ್ನು ಕರೀಮ್ ಬೆಂಜೆಮಾ ಅವರು ಹೊಡೆದ ಚೆಂಡು ನೇರವಾಗಿ ಗೋಲ್‌ಕೀಪರ್ ಕೈಸೇರಿತು.
ದ್ವಿತೀಯಾರ್ಧ ಪಂದ್ಯದಲ್ಲಿ ಉಭಯ ತಂಡಗಳಿಗೆ ಹಲವಾರು ಅವಕಾಶಗಳು ದೊರಕಿದವಾದರೂ, ಯಾವುದೇ ಆಟಗಾರರಿಗೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧ ಪಂದ್ಯದಲ್ಲಿ ಜರ್ಮನಿ ಪರ ಸುರ್ಲೆ ಮತ್ತು ಥಾಮಸ್ ಮುಲ್ಲರ್ ಅವರಿಗೆ ಗೋಲು ದಾಖಲಿಸುವ ಅವಕಾಶ ದೊರಕಿತ್ತಾದರೂ, ಅವರು ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.