ಫಿಫಾ ವಿಶ್ವಕಪ್ 2014

ಇಂದು ಉದ್ಘಾಟನಾ ಸಮಾರಂಭ

ಇಂದು ಉದ್ಘಾಟನಾ ಸಮಾರಂಭ
Published On :

ಕಾರ್ಯಕ್ರಮದ ವಿಶೇಷ

ಪಿಟ್‌ಬುಲ್, ಕ್ಲೌಡಿಯಾ ಜುಗಲ್ಬಂಧಿ: ಪಾಪ್ ಸಂಗೀತ ಕ್ಷೇತ್ರದ ತಾರೆಯರಾದ ಜೆನ್ನಿಫರ್ ಲೊಪೆಜ್, ಪಿಟ್‌ಬುಲ್ ಹಾಗೂ ಬ್ರೆಜಿಲ್‌ನ ಗಾಯಕಿ ಕ್ಲೌಡಿಯಾ ಲೈಟ್ಟೆ ವಿಶ್ವಕಪ್‌ನ ಗೀತೆಯಾದ 'ವಿ ಆರ್ ದ ಒನ್‌' ಹಾಡನ್ನು ನಿರ್ಮಿಸಿದ್ದು, ಜೂ.12ರಂದು ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಆದರೆ ಕಾರಣಾಂತರಗಳಿಂದ ಜೆನ್ನಿಫರ್ ಲೊಪೆಜ್ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ಪಿಟ್‌ಬುಲ್ ಹಾಗೂ ಕ್ಲೌಡಿಯಾ ಜತೆಗೆ ಬ್ರೆಜಿಲ್‌ನ ಬ್ಯಾಂಡ್ ಒಲೊಡೊಮ್ ಸಾಥ್ ನೀಡಲಿದ್ದಾರೆ.

    ಬೆಯೊನ್ಸ್ ಮತ್ತು ಪಾಲ್ ಮ್ಯಾಕರ್ಟ್ನಿ ಸಂಗೀತ ಕಾರ್ಯಕ್ರಮ: ಇದು ಫಿಫಾ ವಿಶ್ವಕಪ್‌ನ ಉದ್ಘಾಟನಾ ಸಮಾರಂಭದ ಮತ್ತೊಂದು ಆಕರ್ಷಕ ಕಾರ್ಯಕ್ರಮವಾಗಿದ್ದು, ಖ್ಯಾತ ಪಾಪ್ ಗಾಯಕರಾದ ಬೆಯೊನ್ಸ್ ಹಾಗೂ ಪಾಲ್ ಮ್ಯಾಕರ್ಟ್ನಿ ಒಂದಾಗಿ ಕಾರ್ಯಕ್ರಮ ನೀಡುತ್ತಿರುವುದು ನಿರೀಕ್ಷೆ ಹೆಚ್ಚಿದೆ.

    ಮೊಹಮದ್ ಅಸ್ಸಾಫ: ಪ್ಯಾಲೆಸ್ತೀನ್ ಐಡಲ್‌ನ ವಿಜೇತ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಹೆಸರು ಮಾಡಿರುವ ಗಾಯಕ ಮೊಹಮದ್ ಅಸ್ಸಾಫ ಅವರನ್ನು ಸಹ ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲು ಆಹ್ವಾನಿಸಲಾಗಿದೆ. ಹಾಗಾಗಿ ಉದ್ಘಾಟನಾ ಸಮಾರಂಭಕ್ಕೆ ಮತ್ತೊಂದು ವಿಶೇಷ ಸೇರ್ಪಡೆಗೊಂಡಂತಾಗಿದೆ.
    ಈ ಸಮಾರಂಭದಲ್ಲಿ 600 ನೃತ್ಯಗಾರರು ಪ್ರದರ್ಶನ ನೀಡಲಿದ್ದು, ಕಳೆದ 1 ತಿಂಗಳಿನಿಂದ ತಾಲೀಮು ನಡೆಸುತ್ತಿದ್ದಾರೆ. ಇದರಲ್ಲಿ ಸ್ಥಳೀಯ ಬ್ರೆಜಿಲ್ ಹಾಗೂ ದಕ್ಷಿಣ ಅಮೆರಿಕಾದ ಕಲಾವಿದರು ಭಾಗವಹಿಸುತ್ತಿದ್ದಾರೆ.
    ಈ ಕಾರ್ಯಕ್ರಮವನ್ನು ಬ್ರೆಜಿಲ್‌ನ ಜನತೆಗೆ, ಅಲ್ಲಿನ ಪರಿಸರಕ್ಕೆ, ಸಂಸ್ಕೃತಿಗೆ, ಅಲ್ಲಿನ ಫುಟ್ಬಾಲ್ ಕ್ರೀಡೆಗೆ ಅರ್ಪಿಸಲಾಗುತ್ತಿದೆ.
    ಈ ಸಮಾರಂಭ ಹಗಲಿನಲ್ಲಿ ನಡೆಯುವುದರಿಂದ ಪಟಾಕಿಗಳನ್ನು ಬಳಸಲಾಗುತ್ತಿಲ್ಲ.
    ಹಾಡು ಹಾಗೂ ನೃತ್ಯದ ಜತೆಗೆ ಏರೊಬ್ಯಾಟಿಕ್ ಜಿಮ್ನಾಸ್ಟಿಕ್, ಟ್ರ್ಯಾಂಫೊಲಿನಿಸ್ಟ್ಸ್, ಕೆಪೊಯೆರಾ ಹಾಗೂ ಸ್ಟಿಲ್ಟ್ ಡ್ಯಾನ್ಸ್ ಕಲಾವಿದರು, ತಮ್ಮ ಕೌಶಲ್ಯ ಅನಾವರಣ ಮಾಡಲಿದ್ದಾರೆ.

ಯಾರ ಮೇಲೆ ಏನು ನಿರೀಕ್ಷೆ?
ಫಿಫಾ 2014 ಬ್ರೆಜಿಲ್ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಇಂತದ್ದೇ ತಂಡ ಗೆಲ್ಲುತ್ತದೆ ಎಂದು ಈಗಾಗಲೇ ಫುಟ್ಬಾಲ್ ಪಂಡಿತರು, ವಿಶ್ಲೇಷಕರು, ಹವ್ಯಾಸಿ ಮತ್ತು ವೃತ್ತಿಪರ ಆಟಗಾರರು, ಅಭಿಮಾನಿಗಳು... ಹೀಗೆ ಪ್ರತಿಯೊಬ್ಬರು ತಮ್ಮದೇಯಾದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ತಂಡಗಳ ಬಲಾಬಲದ ತಾಳೆ ಹಾಕಿ ಚಾಂಪಿಯನ್ನರನ್ನು ನಿರ್ಧರಿಸುತ್ತಿದ್ದಾರೆ. ಈ ಬಾರಿ ಯಾವ್ಯಾವ ತಂಡಗಳು ಎಷ್ಟರಮಟ್ಟಿಗೆ ಪ್ರಶಸ್ತಿಯ ಹಾದಿಯಲ್ಲಿ ಮುಂದಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

  ಜರ್ಮನಿ 10
ಮೂರು ಬಾರಿ ವಿಶ್ವಚಾಂಪಿಯನ್ ಕಿರೀಟ ಧರಿಸಿರುವ ಜರ್ಮನಿ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ತಂಡಗಳಲ್ಲಿ ಒಂದು. ಅರ್ಹತಾ ಸುತ್ತಿನಲ್ಲಿ ಆಡಿದ 10 ಪಂದ್ಯಗಳಲ್ಲಿ 9ರಲ್ಲಿ ಗೆಲವು ದಾಖಲಿಸಿ ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ನಿರೀಕ್ಷೆ ಹೊಂದಿರುವ ಜರ್ಮನಿ ತಂಡ ಆತ್ಮ ವಿಶ್ವಾಸದಿಂದ ಪುಟಿಯುತ್ತಿದೆ. ಅಲ್ಲದೆ ಅರ್ಹತಾ ಸುತ್ತಿನಲ್ಲಿ (36) ಅತಿ ಹೆಚ್ಚು ಗೋಲು ದಾಖಲಿಸಿದ ತಂಡವಾಗಿದೆ. ಹಾಗಾಗಿ, ಜರ್ಮನಿ ಪರ ಫುಟ್ಬಾಲ್ ಪಂಡಿತರು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ.

   ಬ್ರೆಜಿಲ್ 10
ಇದುವರೆಗೂ 5 ಬಾರಿ (1958, 1962, 1970, 1994 ಹಾಗೂ 2002) ಪ್ರಶಸ್ತಿ ಗೆದ್ದು ಆಧಿಪತ್ಯ ಸಾಧಿಸಿರುವ ಬ್ರೆಜಿಲ್, ತನ್ನ ತವರು ಅಂಗಣದಲ್ಲಿ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಎಂಬುದರಲ್ಲಿ ಅನುಮಾನವಿಲ್ಲ. ಅಲ್ಲದೆ ಈ ತಂಡ ಬಹುತೇಕ ಫುಟ್ಬಾಲ್‌ನ ಮಹತ್ವದ ಎಲ್ಲಾ ಆವೃತ್ತಿಗಳಲ್ಲೂ ಭಾಗವಹಿಸಿದೆ. ಹಾಗಾಗಿ ಮುಂಬರುವ ಕಾಳಗದಲ್ಲಿ ಬಲಿಷ್ಠ ತಂಡವಾಗಿ ಬಿಂಬಿತವಾಗಿದೆ. ಅಂತೆಯೇ ಬ್ರೆಜಿಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಸ್ಪೇನ್ 10
ಹಾಲಿ ಚಾಂಪಿಯನ್ ಎಂಬ ಪಟ್ಟದೊಂದಿಗೆ ಕಣಕ್ಕಿಳಿಯಲಿರುವ ಸ್ಪೇನ್, ಪ್ರಶಸ್ತಿ ಉಳಿಸಿಕೊಳ್ಳುವ ಆತ್ಮ ವಿಶ್ವಾಸದಲ್ಲಿದೆ. ಇನ್ನು ಅರ್ಹತಾ ಸುತ್ತಿನಲ್ಲಿ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದು, ಈ ಬಾರಿಯು ಅತ್ಯುತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣದಿಂದ ಕೂಡಿದ್ದು, ಬೆಟ್ಟಿಂಗ್ ಜಾಲದ ಪ್ರಕಾರ ಗೆಲ್ಲುವ ಕುದೆರೆಯಾಗಿದೆ.

ಬೆಲ್ಜಿಯಂ 08
ಹಲವು ವರ್ಷಗಳಿಂದ ಒಂದು ಸುಭದ್ರ ತಂಡವಾಗಿ ಮೂಡಿಬಂದಿರುವ ಬೆಲ್ಜಿಯಂ ಈ ಬಾರಿ ಅಚ್ಚರಿ ತಂಡವಾಗಿದೆ. ಪ್ರತಿಭಾನ್ವಿತ ಆಟಗಾರ ಎಡೆನ್ ಹಜಾರ್ಡ್ ಸಾರಥ್ಯದಲ್ಲಿ ಕಣಕ್ಕಿಳಿಯಲಿದ್ದು, ರೊಮೆಲು ಲುಕಾಕ ಸೇರಿದಂತೆ ಇತರೆ ಅತ್ಯುತ್ತಮ ಪ್ರತಿಭೆಗಳನ್ನು ತಂಡ ಹೊಂದಿದೆ. ಯುವ ಆಟಗಾರರಿಂದ ಕೂಡಿರುವ ಈ ತಂಡ, ಪಂದ್ಯಾವಳಿಯಲ್ಲಿ ಡಾರ್ಕ್ ಹಾರ್ಸ್ ಆಗಿ ಬಿಂಬಿತವಾಗಿದೆ. ಹಾಗಾಗಿ ತಂಡ ಅಚ್ಚರಿಯ ಫಲಿತಾಂಶ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.