ಮಟನ್ ಖೀಮಾವನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಹಾಕಿ. ನಂತರ ಇದಕ್ಕೆ ಮೊಸರು, ಅರಿಶಿಣದ ಪುಡಿ, ಖಾರದ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನೆನೆಯಲು ಬಿಡಿ.
15-20 ನಿಮಿಷವಾದ ಬಳಿಕ ಪಾತ್ರೆಯನ್ನು ಒಲೆಯ ಮೇಲಿಟ್ಟು. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಈರುಳ್ಳಿ ಹಾಕಿ ಕಂದು ಬಣ್ಣೆ ಬರುವವರೆಗೆ ಫ್ರೈ ಮಾಡಿ, ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ, ನಂತರ ಇದಕ್ಕೆ ಈ ಮೊದಲೇ ಮಿಶ್ರಣ ಮಾಡಿಟ್ಟುಕೊಂಡ ಖೀಮಾ ಹಾಕಿ. ಗರಂ ಮಸಾಲೆ, ದನಿಯಾ ಪುಡಿ, ಜೀರಿಗೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರ್ಧ ಗಂಟೆಗಳ ಬೇಯಲು ಬಿಡಿ. ಖೀಮಾ ಬೇಯುತ್ತಿದ್ದಂತೆ ಡ್ರೈ ಆಗುವ ರೀತಿಯಲ್ಲಿ ಕಂಡು ಬರುತ್ತದೆ. ನಂತರ ಅದನ್ನು ಕೆಳಗಿಳಿಸಿ.
ಮತ್ತೊಂದೆ ಮೈದಾ ಹಿಟ್ಟು, ಉಪ್ಪು, ನೀರು ಹಾಗೂ ಎಣ್ಣೆ ಹಾಕಿ ಪರೋಟಗೆ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟಿನಿಂದ ಉಂಡೆಗಳನ್ನು ತಯಾರಿಸಿಕೊಂಡು ಉಂಡೆಗಳ ಮಧ್ಯೆ ಹಳ್ಳ ಮಾಡಿ ಇದಕ್ಕೆ ಬೆಂದ ಖೀಮಾ ಮಸಾಲೆ ಪದಾರ್ಥವನ್ನು ಹಾಗಿ ಪುನಃ ಉಂಡೆ ಮಾಡಿ. ಚಪಾತಿಯಂತೆ ನಿಧಾನಕ್ಕೆ ತಟ್ಟಿ. ನಂತರ ಒಲೆಯ ಮೇಲೆ ತವಾ ಇಟ್ಟು ಪರೋಟವನ್ನು ಎರಡು ಬದಿಯಲ್ಲೂ ಚೆನ್ನಾಗಿ ಬೇಯಿಸಿದರೆ ಖೀಮಾ ಪರೋಟ ತಯಾರಾಗುತ್ತದೆ.