ಸೋಯಾ ಬೀನ್'ನ್ನು ತೊಳೆದು 10 ನಿಮಿಷ ಬಿಸಿ ನೀರಿನಲ್ಲಿ ನೆನೆ ಹಾಕಬೇಕು.
ನೆನೆದ ಸೋಯಾ ಬೀನ್ ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು.
ಮಿಕ್ಸಿ ಜಾರ್ ಒಂದಕ್ಕೆ ಹಸಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಇದನ್ನು ಸೋಯಾ ಬೀನ್ ಗೆ ಹಾಕಬೇಕು. ಈ ಮಿಶ್ರಣಕ್ಕೆ ಖಾರದ ಪುಡಿ, ಗರಂ ಮಸಾಲ ಪುಡಿ, ಮೊಸರು, ಕರಿ ಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆಗಳ ಕಾಲ ಬಿಡಬೇಕು.
ಒಲೆದ ಬಾಣಲೆಯಿಟ್ಟು ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಮಸಾಲೆಯೊಂದಿಗೆ ನೆನೆದ ಸೋಯಾ ಬೀನ್ ಅನ್ನು ಚಿನ್ನದ ಬಣ್ಣ ಬರುವವರೆಗೆ ಕರಿದರೆ ಸೋಯಾ ಬೀನ್ ಕಬಾಬ್ ತಯಾರಾಗುತ್ತದೆ.