ಕಡಲೆಬೇಳೆ ವಡೆ

ಕಡಲೆಬೇಳೆ ವಡೆ ಮಾಡುವ ವಿಧಾನ...
ಕಡಲೆಬೇಳೆ ವಡೆ
ಕಡಲೆಬೇಳೆ ವಡೆ
Updated on: 

ಬೇಕಾಗುವ ಪದಾರ್ಥಗಳು

  • ಕಡಲೆ ಬೇಳೆ - 2 ಕಪ್
  • ಪುದೀನ ಸೊಪ್ಪು - ಸ್ವಲ್ಪ
  • ಸಬ್ಬಕ್ಕಿ ಸೊಪ್ಪು - ಸ್ವಲ್ಪ
  • ಈರುಳ್ಳಿ - 6
  • ಶುಂಠಿ,ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ
  • ಉಪ್ಪು - ರುಚಿಗೆ ತಕ್ಕಷ್ಟು
  • ತೆಂಗಿನ ತುರಿ - ಸ್ವಲ್ಪ
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಚಕ್ಕೆ - ಸ್ವಲ್ಪ
  • ಹಸಿಮೆಣಸಿನ ಕಾಯಿ - ಸ್ವಲ್ಪ
  • ಎಣ್ಣೆ - ಕರಿಯಲು

ಮಾಡುವ ವಿಧಾನ...

  • ಕಡಲೆಬೇಳೆಯನ್ನು ನೀರಿನಲ್ಲಿ 2-4 ಗಂಟೆಗಳ ಕಾಲ ನೆನೆಹಾಕಬೇಕು.
  • ನಂತರ ನೆಂದ ಕಡಲೆಬೇಳೆಯನ್ನು ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು.
  • ಈ ರುಬ್ಬಿದ ಕಡಲೆಬೇಳೆಗೆ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳು ಪೇಸ್ಟ್, ಚಕ್ಕೆ ಪುಡಿ, ಕೊತ್ತಂಬರಿ ಸೊಪ್ಪು, ಪುದೀನ, ಸಬ್ಬಕ್ಕಿಸೊಪ್ಪು, ಉಪ್ಪು, ತೆಂಗಿನ ತುರಿ ಸೇರಿಸಿ ಚೆನ್ನಾಗಿಮಿಶ್ರಣ ಮಾಡಬೇಕು.
  • ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು.
  • ಎಣ್ಣೆ ಕಾದ ನಂತರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಚಪ್ಪಟೆಯಾಕಾರಕ್ಕೆ ತಟ್ಟೆ ಎಣ್ಣೆಗೆ ಹಾಕಿ ಕೆಂಪಗಾಗುವವರೆಗೆ ಕರಿದರೆ ಕಡಲೆಬೇಳೆ ವಡೆ ತಿನ್ನಲು ಸಿದ್ಧವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com