ಹಲಸಿನ ಕಾಯಿ ಕಬಾಬ್

ರುಚಿಕರ ಹಲಸಿನ ಕಾಯಿ ಕಬಾಬ್ ಮಾಡುವ ವಿಧಾನ...
ಹಲಸಿನ ಕಾಯಿ ಕಬಾಬ್
ಹಲಸಿನ ಕಾಯಿ ಕಬಾಬ್
Updated on: 

ಬೇಕಾಗುವ ಪದಾರ್ಥಗಳು

  • ಎಳೆ ಹಲಸಿನ ಕಾಯಿ - 1
  • ತೊಗರಿ ಬೇಳೆ - ಅರ್ಧ ಬಟ್ಟಲು
  • ಬೆಳ್ಳುಳ್ಳು - 6 ಎಸಳು
  • ಚಕ್ಕೆ, ಲವಂಗ - ಸ್ವಲ್ಪ
  • ಖಾರದ ಪುಡಿ - 1 ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - ಕರಿಯಲು
  • ಶುಂಠಿ - ಸ್ವಲ್ಪ
  • ಕತ್ತರಿಸಿದ ಈರುಳ್ಳು - ಸ್ವಲ್ಪ
  • ಅರಿಶಿಣ - ಸ್ವಲ್ಪ
ಮಾಡುವ ವಿಧಾನ...
  • ಹಲಸಿನ ಕಾಯಿಯ ಮೇಲಿರುವ ಸಿಪ್ಪೆಯನ್ನು ತೆಗೆಯೇಬೇಕು. ಒಳಗೆ ಸಿಕ್ಕಿದ ತಿರುಳನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು.
  • ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೇಳೆ ಹಾಗೂ ಕತ್ತರಿಸಿ ಹಲಸಿನ ಕಾಯಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
  • ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ 3-5 ನಿಮಿಷ ಬೇಯಿಸಬೇಕು. ನಂತರ ನೀರನ್ನು ಸೋಸಿಕೊಳ್ಳಬೇಕು.
  • ಚೆನ್ನಾಗಿ ಬೆಂದ ಹಲಸಿನಕಾಯಿಗೆ ಶುಂಠಿ, ಬೆಳ್ಳುಳ್ಳಿ ಪೇಟ್, ಚಕ್ಕೆ, ಲವಂಗ ಹಾಕಿ ನೀರು ಹಾಕದಂತೆ ರುಬ್ಬಿಕೊಳ್ಳಬೇಕು.
  • ಇದಕ್ಕೆ ಖಾರದ ಪುಡಿ, ಅರಿಶಿಣದ ಪುಡಿ ಹಾಗೂ ಕತ್ತರಿಸಿದ ಈರುಳ್ಳಿ ಹಾಗಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಹಾಗೂ ಸ್ವಲ್ಪ ಅಡುಗೆ ಸೋಡಾ, ನೀರು ಹಾಕೆ ಕಲಸಿಟ್ಟುಕೊಂಡಿರಬೇಕು.
  • ಒಲೆಯ ಮೇಲೆ ಬಾಣಲೆಯೊಂದನ್ನಿಟ್ಟು ಎಣ್ಣೆಯನ್ನು ಚೆನ್ನಾಗಿ ಕಾಯಿಸಬೇಕು.
  • ಎಣ್ಣೆ ಕಾದ ನಂತರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅದನ್ನು ಕಲಸಿಕೊಂಡ ಕಡಲೆಹಿಟ್ಟಿನೊಳಗೆ ಅದ್ದಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ಹಲಸಿನ ಕಾಯಿ ಕಬಾಬ್ ತಯಾರಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com