ಹಲಸಿನ ಹಣ್ಣಿನ ಕಡುಬು ಅಥವಾ ಕೊಟ್ಟಿಗೆ

ಹಲಸಿನ ಹಣ್ಣಿನ ಕೊಟ್ಟಿಗೆ ಮಾಡುವ ವಿಧಾನ...
ಹಲಸಿನ ಹಣ್ಣಿನ ಕೊಟ್ಟಿಗೆ ಅಥವಾ ಕಡುಬು
ಹಲಸಿನ ಹಣ್ಣಿನ ಕೊಟ್ಟಿಗೆ ಅಥವಾ ಕಡುಬು
Updated on: 


ಬೇಕಾಗುವ ಪದಾರ್ಥಗಳು

  • ಬೆಳ್ತಿಗೆ ಅಕ್ಕಿ 2-3 ಕಪ್
  • ಹಲಸಿನ ಹಣ್ಣಿನ ತೊಳೆ 6-7 ಕಪ್
  • ಬೆಲ್ಲ (ಬೇಕಾದರೆ)
  • ಏಲಕ್ಕಿ
  • ತೆಂಗಿನಕಾಯಿ ತುರಿ(ಬೇಕಾದರೆ)
  • ರುಚಿಗೆ ತಕ್ಕಷ್ಟು ಉಪ್ಪು
  • ಬಾಳೆಎಲೆ
ಮಾಡುವ ವಿಧಾನ:
  • ಬೆಳ್ತಿಗೆ ಅಕ್ಕಿಯನ್ನು 3ರಿಂದ 4 ಗಂಟೆ ನೆನೆಸಿ ನೀರನ್ನು ಬಸಿಯಬೇಕು.
  • ನಂತರ ಮಿಕ್ಸಿಯಲ್ಲಿ ಅಕ್ಕಿಯನ್ನು ಹಾಕಿ ಸ್ವಲ್ಪ ನೀರು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ಅಕ್ಕಿ ಹಿಟ್ಟು ನೀರಾಗಿರದೆ ಗಟ್ಟಿಯಾಗಿರಬೇಕು. ಅದನ್ನು ಒಂದು ಪಾತ್ರದಲ್ಲಿ ಹಾಕಿರಿ.
  • ಹಲಸಿನ ಹಣ್ಣಿನ ತೊಳೆ ಬಿಡಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು. ಮಿಕ್ಸಿಯಲ್ಲಿ ಒಂದೆರಡು ಸುತ್ತು ರುಬ್ಬಿಕೊಂಡರೂ ಪರವಾಗಿಲ್ಲ.
  • ಹೆಚ್ಚಿಕೊಂಡ ಹಣ್ಣಿನ ತೊಳೆಯನ್ನು ಅಕ್ಕಿ ಹಿಟ್ಟಿಗೆ ಹಾಕಿ. ಹೆಚ್ಚು ರುಚಿ ಮತ್ತು ಸಿಹಿ ಬರಲು ನಿಮಗೆ ಬೇಕಾದಷ್ಟು ಬೆಲ್ಲವನ್ನು ಹೆಚ್ಚಿಕೊಂಡು ಇದೇ ಹಿಟ್ಟಿಗೆ ಹಾಕಿ. ಹೆಚ್ಚು ಸುವಾಸನೆ ಬರಲು ಏಲಕ್ಕಿ ಪುಡಿಯನ್ನು ಹಾಕಿ. ನಿಮಗೆ ಬೇಕೆಂದರೆ ಸ್ವಲ್ಪ ತೆಂಗಿನ ಕಾಯಿ ತುರಿಯನ್ನು ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಂಡು ಹಾಕಿ.
  • ಕೊನೆಗೆ ಎಲ್ಲವನ್ನೂ ಒಟ್ಟಾಗಿ ಮಿಕ್ಸ್ ಮಾಡಿಕೊಳ್ಳಿ.
  • ನಾವು ಊಟಮಾಡುವಷ್ಟು ದೊಡ್ಡ ಗಾತ್ರದಲ್ಲಿ ಬಾಳೆ ಎಲೆಯನ್ನು ಕತ್ತರಿಸಿಕೊಂಡು ಸ್ಟೌವ್ ಮೇಲೆ ಎಲೆಯನ್ನು ಬಾಡಿಸಿಕೊಳ್ಳಿ. ನಂತರ ಬಾಳೆಎಲೆಯನ್ನು ಸ್ವಚ್ಛಗೊಳಿಸಿ.
  • ಹಿಟ್ಟಿನ ಮಿಶ್ರಣವನ್ನು ಒಂದೊಂದು ಬಾಳೆ ಎಲೆ ಮೇಲೆ ಎರಡೆರಡು ಸೌಟುಗಳಷ್ಟು ಹಿಟ್ಟನ್ನು ಹಾಕಿ ಮಡಿಚಿ ಕವುಚಿಟ್ಟು ಬೇಯಿಸಿ.
  • ಇದನ್ನು ಇಡ್ಲಿ ಪಾತ್ರದಲ್ಲಿ ಅಥವಾ ಕುಕ್ಕರ್ ಒಳಗಡೆ ಪಾತ್ರೆಯೊಂದನ್ನು ಇಟ್ಟು ಅದರೊಳಗೆ ಎದುರು ಬದಿರಾಗಿ ವಿಸಿಲ್ ಇಲ್ಲದೆ ಹಬೆಯಲ್ಲಿ ಸುಮಾರು 40 ನಿಮಿಷಗಳ ಕಾಲ ಬೇಯಿಸಿ.
  • ಕೊಟ್ಟಿಗೆ ಬಿಸಿ ಬಿಸಿ ಇರುವಾಗ ಅದರ ಮೇಲೆ ತುಪ್ಪ ಹಾಕಿ ತಿನ್ನಲು ರುಚಿಯಾಗಿರುತ್ತದೆ.
ಫೋಟೋ ಕೃಪೆ: ಒಪ್ಪಣ್ಣ.ಕಾಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com