ಮೊದಲು ಬಾಣಲೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಬೇಕು. ನಂತರ ಸಾಸಿವೆ, ಹಸಿಮೆಣಸಿನ ಕಾಯಿ ಹಾಗೂ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಉಪ್ಪು, ದನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲಾ ಪುಡಿ, ಟೊಮೆಟೋ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಸ್ವಲ್ಪ ನೀರು ಹಾಕಿ ಮಸಾಲೆ ಗಟ್ಟಿಯಾಗುವವರೆಗೂ ಕುದಿಸಬೇಕು.
ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ನೀರು ಹಾಗೂ ಉಪ್ಪು ಹಾಕಿ ಮೊಟ್ಟೆಯನ್ನು ಬೇಯಿಸಿಕೊಳ್ಳಬೇಕು.
ಬೆಂದ ಮೊಟ್ಟೆಯನ್ನು ಅರ್ಧ ಭಾಗಕ್ಕೆ ಕತ್ತರಿಸಿ ಈಗಾಗಲೇ ತಯಾರು ಮಾಡಿಕೊಂಡ ಗ್ರೇವಿಗೆ ಮೊಟ್ಟೆಯನ್ನು ಹಾಕಿ ನಿಧಾನಗತಿಯಲ್ಲಿ ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಗ್ರೇವಿ ಸವಿಯಲು ಸಿದ್ಧ.