ಬಟಾಣಿ ಪರೋಟ

ರುಚಿಕರವಾದ ಬಟಾಣಿ ಪರೋಟ ಮಾಡುವ ವಿಧಾನ...
ಬಟಾಣಿ ಪರೋಟ
ಬಟಾಣಿ ಪರೋಟ
ಬೇಕಾಗುವ ಪದಾರ್ಥಗಳು...
  • ಬಟಾಣಿ (ಬೇಯಿಸಿದ್ದು)- 1 ಬಟ್ಟಲು
  • ಹಸಿಮೆಣಸಿನ ಕಾಯಿ - 2-3
  • ಶುಂಠಿ- ಸ್ವಲ್ಪ
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಗೋದಿ ಹಿಟ್ಟು - 2 ಬಟ್ಟಲು
  • ಜೀರಿಗೆ - ಅರ್ಧ ಚಮಚ
  • ಗರಂ ಮಸಾಲೆ ಪುಡಿ - ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಅಗತ್ಯಕ್ಕೆ ಅನುಗುಣವಾಗಿ
ಮಾಡುವ ವಿಧಾನ...
  • ಬೇಯಿಸಿ ನೀರು ತೆಗೆದ ಬಟಾಣಿ, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸಿನ ಕಾಯಿ ಹಾಗೂ ನೀರನ್ನು ಮಿಕ್ಸಿ ಜಾರ್'ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. 
  • ಪಾತ್ರಯೊಂದಕ್ಕೆ ಗೋದಿ ಹಿಟ್ಟು, ಜೀರಿಗೆ, ಗಂರಂ ಮಸಾಲೆ ಪುಡಿ, ಉಪ್ಪು ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಂಡು, ನಂತರ ರುಬ್ಬಿಕೊಂಡ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಸ್ವಲ್ಪವೇ ನೀರಿ ಹಾಕಿ ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು. 
  • ನಂತರ ಚಪಾತಿಯಾಕಾರಕ್ಕೆ ಲಟ್ಟಿಸಿಕೊಂಡು, ಒಲೆಯ ಮೇಲೆ ಹೆಂಚನ್ನು ಇಟ್ಟು ಎಣ್ಣೆ ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಬಟಾಣಿ ಪರೋಟ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com