ಅಡುಗೆ

ದಿಢೀರ್ ರಸಂ ರೈಸ್ | Instant Rasam Rice Recipe in Kannada

ರುಚಿಕರವಾದ ದಿಢೀರ್ ರಸಂ ರೈಸ್ ಮಾಡುವ ವಿಧಾನ...

ದಿಢೀರ್ ರಸಂ ರೈಸ್ | Instant Rasam Rice Recipe in Kannada
ದಿಢೀರ್ ರಸಂ ರೈಸ್
Published On :

ಬೇಕಾಗುವ ಪದಾರ್ಥಗಳು...

ಅಕ್ಕಿ - 3/4 ಬಟ್ಟಲು

ತೊಗರಿ ಬೇಳೆ- 1/2 ಬಟ್ಟಲು

ಮೆಣಸು - 1 ಚಮಚ

ಜೀರಿಗೆ - 1 ಚಮಚ

ಕರಿಬೇವು - ಸ್ವಲ್ಪ

ಒಣಗಿದ ಮೆಣಸಿನಕಾಯಿ - 3

ಬೆಳ್ಳುಳ್ಳಿ - 6

ಎಣ್ಣೆ - 3 ಚಮಚ

ಸಾಸಿವೆ - ಸ್ವಲ್ಪ

ಜಜ್ಜಿದ ಬೆಳ್ಳುಳ್ಳಿ - 3

ಒಣ ಮೆಣಸಿನಕಾಯಿ - 2

ಟೊಮ್ಯಾಟೊ - 2 ಅಥವಾ 3

ಅರಿಶಿನ ಪುಡಿ - 1/2 ಚಮಚ

ರಸಂ ಪುಡಿ - 2 ಚಮಚ

ಹುಣಸೆ ರಸ - ನಿಂಬೆ ಗಾತ್ರದ ಹುಣಸೆ + 1/4 ಕಪ್ ನೀರು ಹಿಂಡಿ ರಸ ತಯಾರಿಸಿ

ಉಪ್ಪು - ರುಚಿಗೆತಕ್ಕಷ್ಟು

ಕೊತ್ತಂಬರಿ ಸೊಪ್ಪು - ಸ್ವಲ್ಪ

ಮಾಡುವ ವಿಧಾನ...

  • ಮೊದಲು ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು 30 ನಿಮಿಷಗಳ ನೆನೆಯಲು ಬಿಡಿ.

  • ನಂತರ ಕಾಳು ಮೆಣಸು ಜೀರಿಗೆ, ಕರಿಬೇವು, ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಒರಳಿಗೆ ಹಾಕಿ ಜಜ್ಜಿಕೊಳ್ಳಿ.

  • ಕುಕ್ಕರ್‌ನ್ನು ಒಲೆಯ ಮೇಲಿಟ್ಟು, ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಳಿಕ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನಕಾಯಿ ಸೇರಿಸಿ ಹುರಿಯಿರಿ.

  • ಕತ್ತರಿಸಿದ ಟೊಮ್ಯಾಟೊ ಸೇರಿಸಿ . ಅದು ಮೆತ್ತಗಾಗುವವರೆಗೆ ಬೇಯಿಸಿ. ಬಳಿಕ ಅರಿಶಿನ ಮತ್ತು ರಸಂ ಪುಡಿ, ಹುಣಸೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

  • ಬಳಿಕ ನೆನೆಸಿದ ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅಕ್ಕಿಗೆ 5 ಪಟ್ಟು ಹೆಚ್ಚಿಗೆ ನೀರು, ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿ ಚೆನ್ನಾಗಿ ಮಿಶ್ರಣ ಮಾಡಿ. ಕುಕ್ಕರ್ ಮುಚ್ಚಳ ಮುಚ್ಚಿ 4 ರಿಂದ 5 ಸೀಟಿ ಊದಿಸಿ. .ತಣ್ಣಗಾದ ನಂತರ, ತೆರೆದು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ರುಚಿಕರವಾದ ರಸಂ ರೈಸ್ ಸವಿಯಲು ಸಿದ್ಧ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.