ಹೃದಯಾ

ಹೃದಯಾ
Updated on: 

ಭಾರತ ಜಗತ್ತಿನ ಹೃದಯ ರೋಗಗಳ ರಾಜಧಾನಿಯಾಗುವತ್ತ ದಾಪುಗಾಲಿಡುತ್ತಿದೆ. ಆದರೆ, ಕೈಗೆಟುಕದ ಹೃದಯ ಚಿಕಿತ್ಸೆಯಿಂದ ಹಾಗೂ ಜಾಗೃತಿ ಕೊರತೆ ಸೇರಿ ಶೇ.40ರಷ್ಟು ಮಂದಿ ಹೃದ್ರೋಗದಿಂದಲೇ ಮೃತರಾಗುತ್ತಿದ್ದಾರೆ.  ಈ ಸೂಕ್ಷ್ಮ ಸಮಸ್ಯೆಯನ್ನು ಮನಗೊಂಡ ಬಹುರಾಷ್ಟ್ರೀಯ ಔಷಧಿ ಕಂಪನಿ ಇಂಡಿಯಾ ಮೆಡ್ಟ್ರಾನಿಕ್ ಬೆಂಗಳೂರಿನ ಬನಶಂಕರಿಯ ಸಾಗರ್ ಹಾಸ್ಪಿಟಲ್ಸ್ ಸಹಯೋಗದಲ್ಲಿ ಹೆಲ್ದಿ ಹಾರ್ಟ್ಸ್ ಫಾರ್ ಆಲ್ (ಎಚ್ಎಚ್ಎಫ್ಎ) ಎಂಬ ಕಾರ್ಯಕ್ರಮವನ್ನು ಪರಿಚಯಿಸಿದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹೃದ್ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಕೈಗೆಟುಕುವ ಚಿಕಿತ್ಸೆ ದೊರೆಯುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಹೃದಯದಲ್ಲಿ ಅಳವಡಿಸುವ ಸ್ಟೆಂಟ್, ಪೇಸ್ ಮೇಕರ್, ಇಂಪ್ಲಾಂಟೇಬಲ್ ಕಾರ್ಡಿಯೋವರ್ಟರ್-ಡಿಫ್ರೈಬ್ರಿಲ್ಲೇಟರ್ (ಐಸಿಡಿ) ಮತ್ತು ಕಾರ್ಡಿಯಾಕ್ ರಿಸಿಂಕ್ರೊನೈಸೇಷನ್ ಥೆರಪಿ ಸೇರಿದಂತೆ ಮುಂತಾದ ಹೃದಯ ಚಿಕಿತ್ಸೆಗಳಿಗೆ ಈ ಕಾರ್ಯಕ್ರಮದ ಮೂಲಕ ಹಣಕಾಸು ನೆರವು ನೀಡಲಾಗುತ್ತದೆ. ಅಲ್ಲದೇ ಹೃದಯದ ತುರ್ತು ಚಿಕಿತ್ಸೆಗೆ ಸ್ಥಳದಲ್ಲೇ ಎಚ್ಎಚ್ಎಫ್ಎ ಸಾಲ ನೀಡುತ್ತಿದ್ದು, ಇದುವರೆಗೆ 150ಕ್ಕೂ ಹೆಚ್ಚು ಮಂದಿ ಇದರ ಲಾಭ ಪಡೆದಿದ್ದಾರೆ.  ಎಚ್ಎಚ್ಎಫ್ಎ ಸೌಲಭ್ಯಕ್ಕಾಗಿ ಸಂಪರ್ಕಿಸಿ: 18002095123.  

ಎಚ್ಎಚ್ಎಫ್ಎನಿಂದ ಸಾಲದ ಲಾಭವೇನು?
=  ಶೇ.0 ಬಡ್ಡಿ ಸಾಲ, ಮರುಪಾವತಿಸಲು 6 ತಿಂಗಳ ಅವಕಾಶ.
=  ದೀರ್ಘಕಾಲದ ಇಎಮ್ಐ ಕಂತುಗಳ ಸೌಲಭ್ಯವೂ ಲಭ್ಯ.
=  ಕನಿಷ್ಠ ದಾಖಲೆಗಳು.
=  3-24 ಗಂಟೆಗಳೊಳಗೆ ಸಾಲ.
=  ಅಡಮಾನದ ಅಗತ್ಯವಿಲ್ಲ.
=  ಪೂರ್ವಪಾವತಿ ಶುಲ್ಕವಿಲ್ಲ.

ಜನರು ಹೃದ್ರೋಗಗಳಿಗೆ ಒಳಗಾದಾಗ ಅರ್ಥಿಕ ಸಮಸ್ಯೆ ಹಾಗೂ ಜಾಗೃತಿ ಕೊರತೆಯಿಂದ ಬಹಳಷ್ಟು ಸಮಸ್ಯೆ ಅನುಭವಿಸುವಂತಾಗುತ್ತದೆ. ಶೇ.60-70ರಷ್ಟು ರೋಗಿಗಳು ಕೃಷಿಯನ್ನೇ ಆಧರಿಸಿದ್ದು, ನಿಗದಿತ ಮಾಸಿಕ ಆದಾಯ ಹೊಂದಿರುವುದಿಲ್ಲ. ಇಂಥವರಿಗೆ ಆಕರ್ಷಕ ಬಡ್ಡಿ ದರದಲ್ಲಿ ಇಎಂಐ ಕಂತಿನ ಸೌಲಭ್ಯವನ್ನು ಎಚ್ಎಚ್ಎಫ್ಎ ನೀಡುತ್ತದೆ.  
-ಕೆ.ಎಸ್.  ಕಿಶೋರ್, ಹೃದಯರೋಗ ತಜ್ಞ, ಸಾಗರ್ ಹಾಸ್ಪಿಟಲ್ಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com