ಹೀಗೆ ಮಾಡಿ: ಸಾಲಂಬ ಶೀರ್ಷಾಸನ ಸ್ಥಿತಿಗೆ ಬಂದು, ಕಾಲುಗಳನ್ನು ಸಾಧ್ಯವಾದಷ್ಟು ಅಗಲಿಸಬೇಕು. ನಂತಕ ಬಲಗಾಲನ್ನು ಮುಂದಕ್ಕೆ ಚಾಚಿ, ಎಡಗಾಲನ್ನು ಹಿಂದಕ್ಕೆ ಚಾಚಬೇಕು. ಇದಾದ ನಂತರ ಉಸಿರು ಹೊರಕ್ಕೆ ಬಿಟ್ಟು, ಎಡಗಡೆಯಿಂದ ಬಲಗಡೆಗೆ ಕಾಲುಗಳನ್ನು ತಿರುಗಿಸುತ್ತಾ ಬೆನ್ನೆಲುಬನ್ನು ಎಡಕ್ಕೆ 90 ಡಿಗ್ರಿಗಳಷ್ಟು ತಿರುಗಿಸಬೇಕು. ನಂತರ ಉಸಿರು ಹೊರ ಬಿಟ್ಟು ಮತ್ತು ಸಾಲಂಬ ಶೀರ್ಷಾಸನ ಸ್ಥಿತಿಗೆ ಮರಳಬೇಕು. ನಂತರ ಇದೇ ಪ್ರಕ್ರಿಯೆಯನ್ನು ಎಡಗಾಲಕ್ಕೂ ಅನ್ವಯಿಸಿ ಪರಿವೃತ್ತೈಕಪಾದ ಶೀರ್ಷಾಸನ ಪೂರ್ತಿಗೊಳಿಸಬೇಕು. ನಂತರ ಕಾಲುಗಳನ್ನು ಕೆಳಕ್ಕೆ ಬಿಟ್ಟು ಸಹಜ ಸ್ಥಿತಿಗೆ ಮರಳಬೇಕು.
ಪ್ರಯೋಜನ: ಮೂತ್ರಕೋಶ, ಮೂತ್ರಪಿಂಡ ಚೈತನ್ಯಗೊಳ್ಳಲು ಈ ಆಸನ ಸಹಾಯಕ. ಅಲ್ಲದೆ, ಕಾಲುಗಳ ಸ್ನಾಯುಗಳು ಬಲಗೊಳ್ಳಲು ನೆರವಾಗುತ್ತದೆ.