

ಕಾಲಚಕ್ರ ಹಿಂದೆ ತಿರುಗುತ್ತಿದೆ!
ಅರೆರೇ.. ಇದೇನಿದು 21ನೇ ಶತಮಾನದಲ್ಲಿದ್ದುಕೊಂಡು ಇಂಥ ಮಾತೆಂದು ಹುಬ್ಬೇರಿಸಬೇಡಿ. ಮನುಷ್ಯನ ಕಾಯಿಲೆಗಳು ಹೆಚ್ಚಾದಂತೆ ಅದಕ್ಕೆ ಕಂಡುಹಿಡಿಯುವ ಮದ್ದುಗಳಿಗೇನೂ ಕೊರತೆ ಇಲ್ಲ. ಆದರೂ, 'ಇಂಗ್ಲಿಷ್ ಸಹವಾಸ ಸಾಕು, ಆಯುರ್ವೇದವೇ ಬೇಕು' ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆಯುರ್ವೇದ ಚಿಕಿತ್ಸಾ ಕೇಂದ್ರಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ಬೆಂಗಳೂರಿನಂಥ ಮಹಾನಗರಗಳಲ್ಲೂ ಜನ ಇಂಗ್ಲಿಷ್ ಮದ್ದು ಬಿಟ್ಟು ಪುರಾತನ ಕಾಲದ ಆಯುರ್ವೇದದತ್ತ ಹೊರಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ 'ಪೆಂಟಾಕೇರ್' ಬೆಂಗಳೂರಿನ ವಿಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಸಜ್ಜಿತವಾದ ಕಟ್ಟಡ ಹಾಗೂ ಪರಿಕರಗಳ ಮೂಲಕ ರೋಗಿಗಳ ಮಾನಸಿಕ ಸ್ಥೈರ್ಯ ವೃದ್ಧಿಸುವ ಜತೆಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ.
ಏನಿದು ಪೆಂಟಾಕೇರ್?
ಇದೊಂದು ಆಯುರ್ವೇದ ಚಿಕಿತ್ಸಾ ಕೇಂದ್ರ. ಡಾ. ನಿರಂಜನ ಮೂರ್ತಿ ಇದರ ವ್ಯವಸ್ಥಾಪಕ ನಿರ್ದೇಶಕರು. 'ಹಿಮಾಲಯನ್ ಡ್ರಗ್ಸ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರ್ತಿ ಅಲ್ಲಿನ 'ಅವ್ಯವಸ್ಥೆ'ಗೆ ಬೇಸತ್ತು ಹೊರಬಂದಾಗ ಹುಟ್ಟಿಕೊಂಡ ಸಂಸ್ಥೆ. ಇಂಗ್ಲಿಷ್ ಮದ್ದಿನ ಅಬ್ಬರದ ನಡುವೆ ಆಯುರ್ವೇದಕ್ಕೆ ಒಂದು ವಿಶಿಷ್ಟ ಸ್ಥಾನ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಇವರಿಗೆ ಚಿಕಿತ್ಸಾ ಕೇಂದ್ರದಲ್ಲಿ ನಾಲ್ಕಾರು ಜನ ಹೆಗಲು ಕೊಟ್ಟಿದ್ದಾರೆ.
ಏನೇನು ಚಿಕಿತ್ಸೆ?
ಬಹಳಷ್ಟು ಜನರು ಆಯುರ್ವೇದ ಚಿಕಿತ್ಸಾ ಪದ್ಧತಿಯ ಕೇಂದ್ರಗಳು ಎಂದರೆ ಕೇವಲ ಮಸಾಜ್ಗಾಗಿ ಇರುವ ಕೇಂದ್ರಗಳು ಎಂಬ ಭಾವನೆ ಬೆಳೆಸಿಕೊಂಡಿದ್ದಾರೆ. ಆದರೆ, ಪೆಂಟಾಕೇರ್ ಚಿಕಿತ್ಸಾ ಕೇಂದ್ರದಲ್ಲಿ ಕೇವಲ ಮಸಾಜ್ಗಾಗಿ ಬರುವವರಿಗೆ ಯಾವುದೇ ಚಿಕಿತ್ಸೆ ನೀಡಲಾಗುವುದಿಲ್ಲ. ಹಾಗಂತ ಇಲ್ಲಿ ಪಂಚಕರ್ಮ ಪದ್ಧತಿಯನ್ನು ಅನುಸರಿಸಲಾಗುವುದಿಲ್ಲ ಅಂತಲ್ಲ. ಯಾವ ರೋಗಿಗೆ ಅವಶ್ಯಕತೆ ಇದೆಯೋ ಅಂಥವರಿಗೋಸ್ಕರ ಮಾತ್ರ ಮಸಾಜ್ ಮಾಡಲಾಗುತ್ತದೆ. ಶುದ್ಧ ಆಯುರ್ವೇದ ಚಿಕಿತ್ಸೆ ಬಹಳಷ್ಟು ಪರಿಣಾಮಕಾರಿ. ಚರಕ ಬರೆದಿರುವ ಮೂಲ ಗ್ರಂಥ ಹಾಗೂ ಈ ಕ್ಷೇತ್ರದಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸಾ ಪದ್ಧತಿಯನ್ನು ರೂಪಿಸುವುದು ಪೆಂಟಾಕೇರ್ನ ವಿಶೇಷತೆ. ಜತೆಗೆ ಆರೋಗ್ಯ ಸಮಸ್ಯೆಗಳಾದ ಆರ್ಥರೈಟೀಸ್, ಸಕ್ಕರೆ ಕಾಯಿಲೆ, ಬೊಜ್ಜು, ಬಂಜೆತನ, ಮಂದ ಬುದ್ಧಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೌಲ್ಯಾಧಾರಿತ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಇವರಿಂದಲೇ ಮದ್ದು...
ಸಾಮಾನ್ಯವಾಗಿ ಆಯುರ್ವೇದ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ಬಳಿಕ ಔಷಧಿಯನ್ನು ಬೇರೆ ಕಡೆ ಬರೆದುಕೊಡಲಾಗುತ್ತದೆ. ಆದರೆ, ಮೂರ್ತಿಯವರಿಗೆ ಅನ್ಯ ಕಂಪನಿಗಳ ಮೇಲೆ ವಿಶ್ವಾಸವಿಲ್ಲ. ಹೀಗಾಗಿ ಅವರೇ 'ಪೆಂಟಾಕೇರ್' ಹೆಸರಿನಲ್ಲಿ ಆಯುರ್ವೇದ ಮದ್ದು ತಯಾರಿಸುತ್ತಾರೆ. ರೋಗಿಗಳಿಗೆ ಅವಶ್ಯಕವಾದ ಮಾತ್ರೆಗಳನ್ನು ತಯಾರಿ ಚಿಕಿತ್ಸೆ ಪಡೆದ ಬಳಿಕ ನೀಡುತ್ತಾರೆ. ಇದಕ್ಕೆ ಪ್ರತ್ಯೇಕ ವೆಚ್ಚ ನಿಗದಿ ಮಾಡಲಾಗುತ್ತದೆ. ಹಾಗಂತ ಹೊರೆಯಾಗುವುದಿಲ್ಲ. ಇಲ್ಲಿ ತಯಾರಿಸಿದ ಆಯುರ್ವೇದದ ಔಷಧವನ್ನು ವಿದೇಶಗಳಿಗೂ ಕಳಿಸುತ್ತಾರೆ.
ಮಸಾಜ್ ಮಾಡಿ ಎಂದರೆ ಬುದ್ಧಿ ಹೇಳಿ ಕಳಿಸ್ತಾರೆ!
ಬೆಂಗಳೂರಿನಂಥ ನಗರದಲ್ಲಿ ಒತ್ತಡದಿಂದ ಹೊರಬರಲು ಜನತೆ ಮಸಾಜ್ ಮಾಡಿಸಿಕೊಳ್ಳಲು ಆಯುರ್ವೇದ ಚಿಕಿತ್ಸಾ ಕೇಂದ್ರಗಳಿಗೆ ತೆರಳುವುದು ಸಾಮಾನ್ಯ. ಆದರೆ, ಪೆಂಟಾಕೇರ್ಗೆ ಮಸಾಜ್ ಮಾಡಿ ಎಂದು ಬರುವವರಿಗೆ ಮೂರ್ತಿಯವರು ಬುದ್ಧಿ ಹೇಳಿ ವಾಪಸ್ ಕಳುಹಿಸುತ್ತಾರೆ. ಮಸಾಜ್ ಎಂದು ಬಂದವರ ದೇಹಾರೋಗ್ಯದ ಬಗ್ಗೆ ಪರೀಕ್ಷಿಸಿ ಅಗತ್ಯವಿಲ್ಲದಿದ್ದರೆ ಅವರಿಗೆ ಪಂಚಕರ್ಮದ ಬಗ್ಗೆ ತಿಳಿ ಹೇಳುತ್ತಾರೆ. ವಿನಾಕಾರಣ ಮಸಾಜ್ ಮಾಡಿಸಿಕೊಳ್ಳುವುದು ಸರಿಯಲ್ಲ. ಅದಕ್ಕೆ ಕೈಗೊಳ್ಳಬೇಕಾದ ಪೂರಕ ಕ್ರಮಗಳ ಬಗ್ಗೆ ವಿವರಿಸುತ್ತಾರೆ. ಅಗತ್ಯವಿದ್ದರೆ ಆಯುರ್ವೇದ ಮಾತ್ರೆ ಕೊಡುತ್ತಾರೆ.
ಮೌಲ್ಯಾಧಾರಿತ ಹಾಗೂ ಶುದ್ಧ ಆಯುರ್ವೇದ ಪದ್ಧತಿ ಪ್ರಚುರಪಡಿಸುವ ಮತ್ತು ಅದರ ಮೂಲಕ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವುದು ಪೆಂಟಾಕೇರ್ನ ಉದ್ದೇಶ. ಇದಕ್ಕಾಗಿ ನಮ್ಮಲ್ಲಿ ವಿಶೇಷ ತಂಡವಿದೆ. ಗುಣಮಟ್ಟ ಹಾಗೂ ಸುರಕ್ಷೆಯಲ್ಲಿ ರಾಜಿಯ ಮಾತೇ ಇಲ್ಲ.
- ಡಾ. ನಿರಂಜನ್ ಮೂರ್ತಿ, ಪೆಂಟಾಕೇರ್ವ್ಯವಸ್ಥಾಪಕ ನಿರ್ದೇಶಕ
- ಚನ್ನು ಮೂಲಿಮನಿ