

ಸಿಹಿ ಇದೆ ಎಂದ ಮಾತ್ರಕ್ಕೆ ಬೇಕಾದಷ್ಟು ತಿಂದರೆ ತೊಂದರೆ ತಪ್ಪಿದ್ದಲ್ಲ. ಯಾಕೆಂದರೆ, ನಾವು ತಿನ್ನುವ ಆಹಾರದಲ್ಲಿ ಕಾರ್ಬೋಹೈಟ್ರೇಟ್ಗಳು ಸಮೃದ್ಧವಾಗಿರುತ್ತವೇನೋ ನಿಜ. ಆದರೆ, ಅಪಾಯವಂತೂ ಇದ್ದೇ ಇರುತ್ತದೆ.
ಉದಾಹರಣೆಗಾಗಿ ಬೆಳ್ತಿಗೆ ಅಕ್ಕಿ, ಆಲೂಗಡ್ಡೆ ಹಾಗೂ ಸಕ್ಕರೆ ಹೊಂದಿರುವ ತಿಂಡಿಗಳು ಮತ್ತು ಪಾನೀಯಗಳು, ಸಿಹಿ ತಿಂಡಿಗಳು ಮತ್ತು ಪಿಷ್ಟ ಹೊಂದಿರುವ ಕಾರ್ಬೊಹೈಡ್ರೇಟ್ಗಳು ಶರೀರಕ್ಕೆ ಶಕ್ತಿಯನ್ನು ನೀಡುತ್ತವೆ. ಹಾಗಂತ ಅವುಗಳನ್ನು ಅತಿಯಾಗಿ ಸೇವಿಸುವುದರಿಂದಾಗಿ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ಸಕ್ಕರೆಯಲ್ಲಿ ಕೇವಲ ಕ್ಯಾಲೋರಿಗಳಿವೆ ಹಾಗೂ ಯಾವುದೇ ವಿಟಮಿನ್ಗಳು, ಖನಿಜಾಂಶಗಳಿಲ್ಲ. ಒಂದು ಚಮಚದಲ್ಲಿ 16 ಕ್ಯಾಲೋರಿಗಳಷ್ಟು ಶಕ್ತಿ ಒದಗಿಸುತ್ತದೆ. ಹಾಗಾಗಿ, ಸಕ್ಕರೆ ಹೆಚ್ಚಾಗಿ ಸೇವಿಸುವುದರಿಂದ ಅದೊಂದು ಚಟವಾಗಿ ಪರಿಣಮಿಸುತ್ತದೆ. ಇದರಿಂದ ಯಾವುದೇ ಪೌಷ್ಟಿಕಾಂಶ ದೇಹಕ್ಕೆ ದೊರೆಯುವುದಿಲ್ಲ. ಕಾಲಕಳೆದಂತೆ ಗಂಭೀರವಾದ ಆರೋಗ್ಯ ಪರಿಣಾಮಗಳು ಉಂಟಾಗುತ್ತವೆ. ಅತಿಯಾದ ಸಕ್ಕರೆ ಸೇವನೆಯಿಂದ ಜಗತ್ತಿನಲ್ಲಿ ಪ್ರತಿವರ್ಷ 35 ದಶಲಕ್ಷ ಜನರು ಸಾವಿಗೀಡಾಗುತ್ತಾರೆ ಎಂಬುದು ಅದರ ಪರಿಣಾಮವನ್ನು ಸೂಚಿಸುತ್ತದೆ.
ಮದ್ಯ ಹಾಗೂ ತಂಬಾಕು ಸೇವನೆ ನಿಯಂತ್ರಿಸುವಂತೆ ಸಕ್ಕರೆ ಸೇವನೆಯನ್ನು ಕೂಡಾ ನಿಯಂತ್ರಿಸುವಲ್ಲಿ ಮುಂದಾಗಬೇಕು ಎಂದು ಕೆಲವು ಅಂತಾರಾಷ್ಟ್ರೀಯ ವಿಜ್ಞಾನಿಗಳು ಒತ್ತಾಯಿಸುತ್ತಿದ್ದಾರೆ. ಮದ್ಯಪಾನದಂತೆ ಸಕ್ಕರೆ ಕೂಡಾ ಲಿವರ್ಗೆ (ಜಠರಕ್ಕೆ) ಹಾನಿಯುಂಟು ಮಾಡುತ್ತದೆ. ಸಕ್ಕರೆಯನ್ನು ಕೊಳೆಯುವಂತೆ ಮಾಡುವ ಮದ್ಯವನ್ನು ತೆಗೆಯವ ಕಾರಣ, ಇದರಿಂದಲೇ ಅವುಗಳ ಸಂಬಂಧವನ್ನು ಅರಿತುಕೊಳ್ಳಬಹದು. ಹೆಚ್ಚುತ್ತಿರುವ ಸಕ್ಕರೆ ಸೇವನೆ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಭೀತಿಯನ್ನು ತಂದುದೊಡ್ಡಿದೆ ಎಂದು 'ನೇಚರ್' ಪತ್ರಿಕೆಯಲ್ಲಿ ವಿಜ್ಞಾನಿಗಳು ತಮ್ಮ ವಾದವನ್ನು ಮಂಡಿಸಿದ್ದಾರೆ.
ಏನೇನು ತೊಂದರೆ?