

ಬಾಯಿಗೂ ಹೊಟ್ಟೆಗೂ ಅವಿನಾಭಾವ ಸಂಬಂಧವಿದ್ದರೂ ಕೆಲವೊಮ್ಮೆ ಹೊಟ್ಟೆಗೆ ಬೇಕೆನಿಸುವುದು ಬಾಯಿಗೆ ಬೇಡವಾಗಿರುತ್ತದೆ. ಹೊಟ್ಟೆ ಬೇಡವೆನ್ನುವುದನ್ನು ಬಾಯಿ ಬೇಕೇ ಬೇಕು ಎನ್ನುತ್ತಿರುತ್ತದೆ. ಹೀಗಾಗಿಯೇ ಹಲವು ಕಾಯಿಲೆಗಳು ನಮಗೆ ಬಂದುಬಿಡುತ್ತವೆ.
ಆ್ಯಸಿಡಿಟಿ ಎಂಬುದೂ ಹೀಗೆ ಸಿಕ್ಕಸಿಕ್ಕ ಆಹಾರ ತಿನ್ನುವುದರಿಂದಲೇ ಆವರಿಸಿಕೊಳ್ಳುವ ಆರೋಗ್ಯ ಸಮಸ್ಯೆ. ಆ್ಯಸಿಡಿಟಿ 'ಹೊಟ್ಟೆಕಿಚ್ಚು' ಅಥವಾ 'ಹೊಟ್ಟೆಯುರಿ' ಎಲ್ಲ ಕಾಯಿಲೆಗಳಿಗೂ ಬುನಾದಿಯೂ ಹೌದು. ಆದ್ದರಿಂದಲೇ ಬಂದಿರುವ ಆ್ಯಸಿಡಿಟಿ ಹೋಗಲಾಡಿಸಲು ಮತ್ತು ಹತ್ತಿರ ಬರಲು ಸಿದ್ಧವಾಗಿರುವ ಈ ಹೊಟ್ಟೆಕಿಚ್ಚನ್ನು ಇನ್ನಷ್ಟು ದೂರ ಓಡಿಸಲು ಉತ್ತಮ ಆಹಾರ ಕ್ರಮದಿಂದ ಸುಲಭಸಾಧ್ಯ.