ಅಸ್ತಮಾನತೆ

ಗರ್ಭಿಣಿಗೆ ಅಸ್ತಮಾ ಇದ್ದರೆ, ಶ್ವಾಸನಾಳವು ಮತ್ತಷ್ಟು ಸಂವೇದನಾಶೀಲವಾಗಿ, ಸುಲಭವಾಗಿ ಉರಿಯೂತಕ್ಕೆ ತುತ್ತಾಗುತ್ತದೆ...
ಅಸ್ತಮಾನತೆ
Updated on: 

ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳು ಒಂದಾ.. ಎರಡಾ..? ಅವರ ಆರೋಗ್ಯದ ಬಗ್ಗೆ ಎಷ್ಟೆಲ್ಲ ಕಾಳಜಿ ವಹಿಸಿದರೂ ಯಾವುದಾದರೂ ಸಮಸ್ಯೆಗಳು ಇದ್ದೇ ಇರುತ್ತವೆ. ಇಂಥವುಗಳ ಪೈಕಿ ಅಸ್ತಮಾವೂ ಒಂದು. ಭಾರತದಲ್ಲಿ ಶೇ.7ರಿಂದ 8 ಗರ್ಭಿಣಿಯರಿಗೆ ಅಸ್ತಮಾ ಕಾಡುತ್ತದೆ ಎನ್ನುತ್ತದೆ ವೈದ್ಯಕೀಯ ವರದಿ.
ಗರ್ಭಿಣಿಗೆ ಅಸ್ತಮಾ ಇದ್ದರೆ, ಶ್ವಾಸನಾಳವು ಮತ್ತಷ್ಟು ಸಂವೇದನಾಶೀಲವಾಗಿ, ಸುಲಭವಾಗಿ ಉರಿಯೂತಕ್ಕೆ ತುತ್ತಾಗುತ್ತದೆ. ವೇದನೆಯೂ ಆಕ್ರಮಿಸಬಹುದು. ಇದರಿಂದ ಅವು ಕಿರಿದಾಗಿ, ಇನ್ನಷ್ಟು ಸಿಂಬಳ ಮತ್ತು ಕಫ ಉತ್ಪತ್ತಿಯಾಗಬಹುದು. ಅಸ್ತಮಾ ಗರ್ಭಿಣಿಯ ಮೇಲೆ ಪರಿಣಾಮ ಬೀರುವುದಲ್ಲದೆ, ಭ್ರೂಣವು, ತಾಯಿಯಿಂದ ಪಡೆಯುವ ಆಮ್ಲಜನಕ ಪ್ರಮಾಣದ ಮೇಲೂ ಪರಿಣಾಮ ಬೀರಬಹುದು!
ಗರ್ಭಿಣಿಗೆ ಅಸ್ತಮಾ ಅತ್ಯಂತ ಸಾಮಾನ್ಯ ಶ್ವಾಸಕೋಶ ಸಂಬಂಧಿತ ಸಮಸ್ಯೆ. ಅಸ್ತಮಾದ ಪರಿಣಾಮಗಳು, ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತವೆ. ಮಗುವಿಗೆ ಅಥವಾ ನಿರೀಕ್ಷಿಸುತ್ತಿರುವ ತಾಯಿಗೆ, ಯಾವುದೇ ಹಾನಿಯಾಗದಿರಲು ಅಸ್ತಮಾವನ್ನು ನಿಯಂತ್ರಿಸಬೇಕು. ಅಸ್ತಮಾ ನಿಯಂತ್ರಣದಲ್ಲಿಲ್ಲದ್ದಿದರೆ, ಇದು ತಾಯಿಯ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಚಿಕಿತ್ಸೆ ಹೇಗೆ?

  •     ಅಸ್ತಮಾಪೀಡಿತ ಗರ್ಭಿಣಿಯರು ಉರಿಯೂತವನ್ನು ನಿಯಂತ್ರಿಸಲು ಮತ್ತು ಅಸ್ತಮಾವನ್ನು ನಿವಾರಿಸಲು ಒಂದು ಕಾರ್ಯ ಯೋಜನೆಯನ್ನು ಹೊಂದಿರಬೇಕು.
  •     ಗರ್ಭ ಧರಿಸಿರುವ ಕಾಲ ಪೂರ್ತಿ ನಿಗದಿತ ಅಸ್ತಮಾ ಚಿಕಿತ್ಸೆ ಮುಂದುವರಿಸಬೇಕು.
  •     ಭ್ರೂಣದ ಮೇಲೆ ಅಸ್ತಮಾ ಅಡ್ಡ ಪರಿಣಾಮ ಬೀರುವುದಕ್ಕಿಂತ ಸುರಕ್ಷಿತ ವೈದ್ಯರ ಸಲಹೆಯಿಲ್ಲದೆ, ಸೂಚಿಸಿರುವ ಔಷಧಿ ಪಡೆಯಬಾರದು.
  •     ತಾಯಿಯು, ಅಸ್ತಮಾ ಔಷಧಿಯನ್ನು ಬದಲಾಯಿಸಲು ಪ್ರಸವವಾಗುವವರೆಗೂ ಕಾಯಬೇಕಾಗಬಹುದು.
ನಿಯಂತ್ರಣ ವಿಧಾನ
  •     ಮನೆಯನ್ನು ಧೂಳಿನಿಂದ ಮುಕ್ತವಾಗಿಡಿ. ನಿಯಮಿತವಾಗಿ ಹಾಸಿಗೆ ಹೊದಿಕೆಗಳನ್ನು ಬದಲಾಯಿಸುತ್ತಿರಿ.
  •     ಸಾಧ್ಯವಾದಷ್ಟು ಮನೆ ಒಳಗೆ ಮತ್ತು ಹೊರಗೆ, ಧೂಳು, ಜಿರಳೆ ಇರದಂತೆ ನೋಡಿಕೊಳ್ಳಿ.
  •     ತುಪ್ಪಳ ಅಥವಾ ಗರಿಗಳಿರುವ ಸಾಕುಪ್ರಾಣಿಗಳಿಂದ ದೂರವಿರಿ.
  •     ನೆಗಡಿ, ಮೂಗು ಸೋರುವಿಕೆ, ಫ್ಲ್ಯೂಗಳು ಅಸ್ತಮಾವನ್ನು ಉದ್ರೇಕಿಸಬಹುದು.
  •     ಅಸ್ತಮಾ ಋತುಮಾನ ಆಧಾರಿತ ಅಂಶಗಳಿಂದ ಆರಂಭವಾದರೆ, ಉದಾ: ಪರಾಗ (ಪೋಲನ್) ಬೀಜಕಗಳು, ಮನೆಯೊಳಗೆ ಇರಲು ಪ್ರಯತ್ನಿಸಿ ಅಥವಾ ಹೊರ ಹೋಗುವಾಗ ಒಂದು ಮುಖವಾಡವನ್ನು ಧರಿಸಿ.
  •     ಕೆಲವಲ್ಲಿ ತೀವ್ರ ಥಂಡಿ ಹವೆ ಅಥವಾ ತಂಪಾದ ಪೇಯಗಳನ್ನು ಸೇವಿಸುವುದರಿಂದ ಅಸ್ತಮಾ ಪ್ರಾರಂಭವಾಗುತ್ತದೆ. ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಿ, ಬೆಚ್ಚಗಿರಲು ಪ್ರಯತ್ನಿಸಿ ಮತ್ತು ಸುಖೋಷ್ಣವಾದ ಪೇಯವನ್ನು ಸೇವಿಸಿ.
  •     ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ಬಣ್ಣಗಳು, ತುಂಬಿಟ್ಟ ಆಹಾರ ಪದಾರ್ಥಗಳಿಂದ ಅಸ್ತಮಾಕ್ಕೆ ಕಾರಣವಾಗುತ್ತದೆ.
  •     ತೀವ್ರ ವಾಸನೆಯಿರುವ, ಸುಗಂಧಗಳು, ಡಿಯೋಡ್ರೆಂಟ್‌ಗಳು, ಸ್ವಚ್ಛ ಮಾಡುವ ದ್ರವ್ಯಗಳು, ಪೇಂಟ್‌ಗಳಿಂದ ದೂರವಿರಿ.
  •     ಅಡುಗೆ ಪುಡಿಗಳು, ಮರದ ಹೊಟ್ಟು, ನುಣ್ಣನೆಯ ಸಾಂಬಾರ ಪದಾರ್ಥಗಳು ಮತ್ತು ಮುಖದ ಪೌಡರ್‌ನಂಥ ಸೂಕ್ಷ್ಮ ಪುಡಿಗಳಿಂದ ದೂರವಿರಿ.
  •     ಧೂಮಪಾನವಷ್ಟೇ ಅಲ್ಲ, ಅಡುಗೆ ಮನೆಯ ಹೊಗೆ ವಾತಾವರಣದ ಕಲುಷಿತ, ಸಿಡಿ ಮದ್ದುಗಳ ಹೊಗೆ, ಅಗರಬತ್ತಿಗಳಿಂದಲೂ ದೂರವಿರಿ.
  •     ಕೆಲವರಲ್ಲಿ, ಒತ್ತಡ ಮತ್ತು ತಳಮಳವೂ ಅಸ್ತಮಾಕ್ಕೆ ಕಾರಣವಾಗಬಹುದು.
ಲಕ್ಷಣಗಳೇನು?
  •     ರಾತ್ರಿಯಲ್ಲಿ ಅಥವಾ ಮುಂಜಾನೆ ಅಥವಾ ತಾಯಿ ವ್ಯಾಯಾಮ ಮಾಡಿದಾಗ ತೀವ್ರವಾಗುವ ಕೆಮ್ಮು.
  •     ಮೇಲುಸಿರು (ಉಬ್ಬಸ)
  •     ಉಸಿರು ಹಿಡಿತ
  •     ಎದೆಯಲ್ಲಿ ಹಿಡಿದಂತಾಗುವುದು
  •     ಆಮ್ಲ ಮರುಕಳಿಕೆ
ತೊಂದರೆಗಳೇನು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com