ಆರೋಗ್ಯ-ಜೀವನಶೈಲಿ

ನಾವು ಸೇವಿಸುವ ಚಹಾ ಸುರಕ್ಷಿತವಲ್ಲ?

ನಾವು ಸೇವಿಸುವ ಚಹಾ ಸುರಕ್ಷಿತವಲ್ಲ?
Published On :

ಪದೇ ಪದೇ ಟೀ ಬ್ರೇಕ್ ಪಡೆಯುವವರು ನೀವಾಗಿದ್ದರೆ, ಸ್ವಲ್ಪ ನಿಲ್ಲಿ. ನೀವು ಕುಡಿಯುವ ಚಹಾ ಸುರಕ್ಷಿತವಲ್ಲ ಎನ್ನುತ್ತಿದೆ ಗ್ರೀನ್‌ಪೀಸ್ ಇಂಡಿಯಾ. ಹೌದು ನೀವು -ನಾವು ಸೇವಿಸುವ ಚಹಾದಲ್ಲಿ ಹತ್ತಾರು ಅಪಾಯಕಾರಿ ಕೀಟನಾಶಕ ಅಂಶಗಳಿವೆ ಎಂದು ಗ್ರೀನ್‌ಪೀಸ್ ಹೇಳುವ ಮೂಲಕ ಚಹಾ ಪ್ರಿಯರನ್ನು ದಿಗಿಲುಗೊಳಿಸಿದೆ.

ಈಗ ಗ್ರೀನ್‌ಪೀಸ್‌ನಿಂದ 'ಚಾಯ್ ಪೇ ಚರ್ಚಾ'

  • ದೇಶದ  ಪ್ರಮುಖ ಬ್ರ್ಯಾಂಡ್‌ಗಳ ಚಹಾಪುಡಿಯಲ್ಲಿ ಕೀಟನಾಶಕ ಅಂಶಗಳು ಪತ್ತೆ ಎಂದ ಗ್ರೀನ್‌ಪೀಸ್ ಇಂಡಿಯಾ
  • 45 ಬ್ರ್ಯಾಂಡ್‌ಗಳ ಚಹಾಪುಡಿಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂಥವು ಎಂದ ಸಂಸ್ಥೆ
ಗ್ರೀನ್‌ಪೀಸ್ ಸಂಸ್ಥೆ ವಾದವೇನು?
  • ಭಾರತದಲ್ಲಿ ಮಾರಾಟವಾಗುವ ಚಹಾಪುಡಿಗಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೀಟನಾಶಕ ಅಂಶವಿದೆ.
  • ಪ್ರಮುಖ ಬ್ರ್ಯಾಂಡ್‌ಗಳ ಚಹಾಪುಡಿಯಲ್ಲೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಪಾಯಕಾರಿ ಎಂದು ವರ್ಗೀಕರಣ ಮಾಡಿರುವ ಕೀಟನಾಶಕದ ಅಂಶಗಳು ಕಂಡು ಬಂದಿವೆ.
ಪರೀಕ್ಷೆ ಮಾದರಿ ಹಾಗೂ ಫಲಿತಾಂಶ?
  • ದೇಶಿಯ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿರುವ 11 ಚಹಾ ಕಂಪನಿಗಳಲ್ಲಿ 08 ಕಂಪನಿಗಳ ಸುಮಾರು 49 ಬ್ರ್ಯಾಂಡ್‌ಗಳ ಚಹಾ ಪುಡಿ ಪರೀಕ್ಷೆಗೆ.
  • ಮುಂಬೈ, ದೆಹಲಿ,ಕೋಲ್ಕತಾ ಹಾಗೂ ಬೆಂಗಳೂರು ನಗರಗಳಲ್ಲಿ ಈ ಮಾದರಿಗಳ ಸಂಗ್ರಹ.
  • ಯೂರೋಪ್‌ನಲ್ಲಿನ ಪ್ರಯೋಗಾಲದಲ್ಲಿ ಚಹಾ ಬ್ರ್ಯಾಂಡ್‌ಗಳ ಪರೀಕ್ಷೆ
  • ಶೇ.67ರಷ್ಟು ಸ್ಯಾಂಪಲ್‌ಗಳಲ್ಲಿ ಡಿಡಿಟಿ ಅಂಶ ಪತ್ತೆ
  • ಜೀವಕಂಟಕ 'ಮೋನೋಕ್ರೊಟೋಫಸ್‌' ಎಂಬ ಕೀಟನಾಶಕದ ಅಂಶ ಪತ್ತೆ
ದುಷ್ಪರಿಣಾಮಗಳೇನು?
  • ಎರಡು ವಿಧಗಳು. ತ್ವರಿತವಾಗಿ ದುಷ್ಪರಿಣಾಮ ಬೀರುವ ಮತ್ತು ನಿಧಾನಗತಿಯಲ್ಲಿ ದುಷ್ಪರಿಣಾಮ.
  • ತ್ವರಿತ ಪರಿಣಾಮ ಬೀರುವ ಕೀಟನಾಶಗಳಿಂದ ದೇಹಬಾಧೆ, ಉಸಿರಾಟದ ತೊಂದರೆ ಹಾಗೂ ಚರ್ಮ ರೋಗಗಳು.
  • ನಿಧಾನಗತಿಯ ದುಷ್ಪರಿಣಾಮ ಬೀರುವಂಥ ಕೀಟನಾಶಕಗಳಿಂದ ಹಾರ್ಮೋನುಗಳ ಅಸಮತೋಲನ ಹಾಗೂ ಜನನೇಂದ್ರಿಯಗಳ ಮೇಲೆ ಅಡ್ಡ ಪರಿಣಾಮ.
ಗ್ರೀನ್‌ಪೀಸ್ ಆಗ್ರಹವೇನು?
  • ಭಾರತೀಯ ಚಹಾ ಕೃಷಿಯು ಕೀಟನಾಶಕಗಳ ಆಧಾರದ ಮೇಲೆಯೇ ಅವಲಂಭಿಸುವುದು ಇನ್ನಾದರೂ ನಿಲ್ಲಲಿ.
  • ಚಹಾ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ, ಕೀಟನಾಶಕಗಳ ಹೊರತುಪಡಿಸಿದ ಚಹಾ ಕೃಷಿ ಬಗ್ಗೆ ಒಂದು ನೀಲನಕ್ಷೆ.
ಟೀ ಬೋರ್ಡ್ ಹೇಳೋದೇನು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.