

ಕಾರಿನಷ್ಟು ದೊಡ್ಡ ಹೃದಯವನ್ನು ಎಲ್ಲಾದರೂ ನೋಡಿದ್ದೀರಾ? ವಿಶ್ವದ ಅತಿದೊಡ್ಡ ಪ್ರಾಣಿಯಾದ ನೀಲಿ ತಿಮಿಂಗಿಲ(ಇವು 100 ಅಡಿಯಷ್ಟು ಬೆಳೆಯಬಲ್ಲವು)ದ ಹೃದಯವೊಂದನ್ನು ಕೆನಡಾದಲ್ಲಿ ಸಂರಕ್ಷಿಸಿಡಲಾಗಿದೆ.
ಕಳೆದ ವರ್ಷ ಸತ್ತ ತಿಮಿಂಗಿಲದ ಈ ಹೃದಯವು 180 ಕೆಜಿ ತೂಕವಿದ್ದು, 5 ಅಡಿ ಉದ್ದವಿದೆ. ಪ್ರತಿ ಹೃದಯ ಬಡಿತದ ವೇಳೆ ಇದರ ರಕ್ತನಾಳಗಳಲ್ಲಿ 60 ಗ್ಯಾಲನ್‍ನಷ್ಟು ರಕ್ತ ಹರಿಯತೊಡಗುತ್ತವೆ.
ಈಗ ಈ ಹೃದಯವನ್ನಿಟ್ಟುಕೊಂಡು ತಿಮಿಂಗಿಲದ ಹೃದಯದ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ ಕೆನಡಾ ವಿಜ್ಞಾನಿಗಳು.