ಜಿರಳೆಯ ಹಿಟ್ ಸ್ಪ್ರೇಯಿಂದ ಮಕ್ಕಳಿಗೆ ಕ್ಯಾನ್ಸರ್!

ಜಿರಳೆಗೇನೋ ಹಿಟ್ ಸ್ಪ್ರೇ ಹೊಡೆದ್ರಿ, ಅದು ಸತ್ ಹೋಯ್ತು. ಇದು ಹ್ಯಾಪಿ ವಿಚಾರ ಅಲ್ವೇ ಅಲ್ಲ. ಯಾಕೆ ಗೊತ್ತಾ? ಮನೆಯೊಳಗೆ ಹರಡುವ ಈ ಕೀಟನಾಶಕಗಳಿಂದ ಮಕ್ಕಳಿಗೆ ಕ್ಯಾನ್ಸರ್ ಬರುತ್ತೆ!..
ಜಿರಳೆಯ ಕೊಲ್ಲಲು ಬಳಕೆ ಮಾಡುವ ಸ್ಪ್ರೇ (ಸಂಗ್ರಹ ಚಿತ್ರ)
ಜಿರಳೆಯ ಕೊಲ್ಲಲು ಬಳಕೆ ಮಾಡುವ ಸ್ಪ್ರೇ (ಸಂಗ್ರಹ ಚಿತ್ರ)

ಜಿರಳೆಗೇನೋ ಹಿಟ್ ಸ್ಪ್ರೇ ಹೊಡೆದ್ರಿ, ಅದು ಸತ್ ಹೋಯ್ತು. ಇದು ಹ್ಯಾಪಿ ವಿಚಾರ ಅಲ್ವೇ ಅಲ್ಲ. ಯಾಕೆ ಗೊತ್ತಾ? ಮನೆಯೊಳಗೆ ಹರಡುವ ಈ ಕೀಟನಾಶಕಗಳಿಂದ ಮಕ್ಕಳಿಗೆ ಕ್ಯಾನ್ಸರ್ ಬರುತ್ತೆ!  ಹಾಗಂತ ಈಗ ಅಮೆರಿಕದ ಬೋಸ್ಟಾನ್ ತಜ್ಞರು ದೃಢೀಕರಿಸಿದ್ದಾರೆ.

ಇಂಥ ಸ್ಪ್ರೇ ವಾಸನೆ ಸೇವಿಸುವ, ಇದರ ಕಣ ಬೆರೆತ ಆಹಾರ ಸೇವಿಸುವ ಅನೇಕ ಮಕ್ಕಳಲ್ಲಿ ಲ್ಯೂಕೆಮಿಯಾ ಕೂಡ ಕಾಣಿಸಿಕೊಂಡಿದೆ. ಉಸಿರಾಟ ಇಲ್ಲವೇ ಆಹಾರದ ಮೂಲಕ ಮಕ್ಕಳ   ದೇಹವನ್ನು ಶೀಘ್ರವಾಗಿ ನುಗ್ಗುವ ಈ ರಾಸಾಯನಿಕಗಳು ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸುತ್ತವೆ. ಇವು ರಕ್ತಕ್ಕೆ ಸೇರಿಕೊಂಡರೆ ಕ್ಯಾನ್ಸರ್‍ಕಾರಕ ಲಿಂಫೋಮಾ ಗುಂಪುಗಳನ್ನು ಸೃಷ್ಟಿಸುತ್ತವಂತೆ.  ಇದರಿಂದ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು, ತೂಕ ಇಳಿಯುವುದು, ಕಡಿತ ಮುಂತಾದ ಲಕ್ಷಣಗಳು ಆರಂಭದಲ್ಲಿ ಕಾಣಿಸಿಕೊಳ್ಳಬಹುದು. ಸುಮಾರು 2 ವರುಷ ನಡೆದ ಸಂಶೋಧನೆಯಲ್ಲಿ 1,200  ಮಕ್ಕಳು ಇಂಥ ಬಾಲ್ಯಾವಸ್ಥೆಯ ಕ್ಯಾನ್ಸರ್‍ಗೆ ಗುರಿಯಾಗಿದ್ದರು. ಆ ಎಲ್ಲ ಮನೆಗಳಲ್ಲೂ ಜಿರಳೆನಿವಾರಕಗಳನ್ನು ಅತಿಹೆಚ್ಚು ಬಳಸಲಾಗುತ್ತಿತ್ತಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com