ರಕ್ತದ ಗುಂಪಿಗೆ ತಕ್ಕದಾಗಿರಲಿ ಆಹಾರ

ರಕ್ತದ ಗುಂಪು ಆರೋಗ್ಯದ ಮೇಲೆ ಪರಿಣಾಮ ಬೀರುವ ಮುಖ್ಯ ಆನುವಂಶಿಕ ಅಂಶವಾಗಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ.
ಆರೋಗ್ಯವಂತ ರಕ್ತದ ಮಾದರಿ
ಆರೋಗ್ಯವಂತ ರಕ್ತದ ಮಾದರಿ
Updated on
ಹೊಸದಿಲ್ಲಿ: ರಕ್ತದ ಗುಂಪು ಆರೋಗ್ಯದ ಮೇಲೆ ಪರಿಣಾಮ ಬೀರುವ ಮುಖ್ಯ ಆನುವಂಶಿಕ ಅಂಶವಾಗಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ.
ಮುಖ್ಯವಾಗಿ ನಾಲ್ಕು ವಿಧದ ರಕ್ತ ಗುಂಪು- A, B, O, ಮತ್ತು AB ಇದ್ದು. ರಕ್ತದ ಗುಂಪಿನ ಪ್ರಕಾರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ವಿವಿಧ ರಕ್ತ ಗುಂಪುಗಳೊಂದಿಗಿನ ಜನರು ವಿಭಿನ್ನ ರೀತಿಯಲ್ಲಿ ಆಹಾರ ವನ್ನು ಜೀರ್ಣಿಸಿಕೊಳ್ಳುತ್ತಾರೆ.
ಕೆಲವು ಜನರು ಸುಲಭವಾಗಿ ತೂಕವನ್ನು ಕಳೆದುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ, ಕೆಲವರು ಅದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಇನ್ನು ಕೆಲವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಇತರರು ಆರೋಗ್ಯವಂತರಾಗುತ್ತಾರೆ. ರಕ್ತದ ಗುಂಪಿನ ಪ್ರಕಾರ, ವ್ಯಕ್ತಿಯ ಮನೋಭಾವ ಮತ್ತು ಮನೋಧರ್ಮವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
ರಕ್ತದ ಗುಂಪು ಮತ್ತು ಪೋಷಣೆಯ ಅಂಶಗಳ ನಡುವಿನ ಸಂಬಂಧದ ಮೇಲೆ ಬೆಳಾಕು ಚೆಲ್ಲಲು, ಮ್ಯೂಟೇಶನ್ ಡಯಟ್ ಕ್ಲಿನಿಕ್, ಗುರುಗ್ರಾಮ್ ನಲ್ಲಿ  ಡಯೆಟಿಷಿಯನ್  ಆಗಿರುವ ದೀಪಿಕಾ ದುವಾ ಅರೋರಾ ಇಲ್ಲಿ ಕೆಲವು ಅಮೂಲ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
'ಬ್ಲಡ್ ಟೈಪ್ ಡಯಟ್' ಎನ್ನುವುದು ನಿರ್ದಿಷ್ಟ ಆಹಾರವನ್ನು ಸೇವಿಸುವುದರ ಮೇಲೆ ಅವಲಂಬಿಸಿದೆ, ಅದು ಉತ್ತಮ ಜೀರ್ಣಕ್ರಿಯೆಗೆ ಅವಕಾಶ ನೀಡುತ್ತದೆ, ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರೋಗಗಳನ್ನು ತಡೆಗಟ್ಟುತ್ತದೆ, ತೂಕವನ್ನು ಕಳೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ವಿವಿಧ ಆಹಾರಗಳನ್ನು ತಿನ್ನುವುದರಿಂದ ದೇಹಕ್ಕೆ ವಿವಿಧ ಪೋಷಕಾಂಶಗಳು ಒದಗುತ್ತದೆ. 
ಮತ್ತೊಂದೆಡೆ, ರಕ್ತದ ಗುಂಪು ದೇಹದ ವಿಭಿನ್ನ ಪೋಷಕಾಂಶಗಳೊಂದಿಗೆ ಕೆಲಸ ಮಾಡುತ್ತದೆ. ಬ್ಲಡ್ ಗ್ರೂಪ್ ಡಯಟ್ ದೇಹ ಪ್ರಕಾರದಿಂದ ನಿರ್ಧಾರವಾಗುತ್ತದೆ.. ಮಧುಮೇಹ, ಮೂತ್ರಪಿಂಡದ ಸಮಸ್ಯೆ, ಜಿ ಐಟಿ, ಕೊಲೆಸ್ಟರಾಲ್, ಅಧಿಕ ರಕ್ತದೊತ್ತಡ ಮುಂತಾದ ನಮ್ಮ ಆನುವಂಶಿಕ ವೈದ್ಯಕೀಯ ಸಮಸ್ಯೆಗಳನ್ನು ನಿಯಂತ್ರಿಸಲು ರಕ್ತದ ಗುಂಪು ಆಹಾರವು ನಮಗೆ ಸಹಾಯ ಮಾಡುತ್ತದೆ "
ವಿವಿಧ ರಕ್ತದ ಗುಂಪುಗಳ ಪ್ರಕಾರ ಸೇವಿಸುವ ಆಹಾರದ ಪಟ್ಟಿ ಇಲ್ಲಿದೆ.
ರಕ್ತದ ಗುಂಪು: ಒ
ಮಾಂಸ, ಮೀನು, ಮೊಟ್ಟೆಗಳು, ಈರುಳ್ಳಿ, ಓಕ್ರಾ, ಬೆಳ್ಳುಳ್ಳಿ, ಶುಂಠಿ, ಚೆರ್ರಿಗಳು, ಇತ್ಯಾದಿ
ರಕ್ತದ ಗುಂಪು: ಎ
ಅಕ್ಕಿ, ಓಟ್ಸ್, ಪಾಸ್ಟಾ, ಕುಂಬಳಕಾಯಿ, ಕಾಳುಗಳು, ಅಂಜೂರದ ಹಣ್ಣು, ನಿಂಬೆಹಣ್ಣು, ಒಣದ್ರಾಕ್ಷಿ, ಹುರುಳಿ.ಗೋಧಿ ಆಧಾರಿತ ಸಸ್ಯಾಹಾರಿ ಆಹಾರ ಇತ್ಯಾದಿ
ರಕ್ತದ ಗುಂಪು: ಬಿ
ಹಸಿರು ತರಕಾರಿಗಳು, ಮೊಟ್ಟೆಗಳು, ಓಟ್ಸ್, ಹಾಲು ಉತ್ಪನ್ನ ಮತ್ತು ಪ್ರೊಟೀನುಗಳು ಒಳ್ಳೆಯದು.
ಬ್ಲಡ್ ಗ್ರೂಪ್: ಎಬಿ
ಸಮುದ್ರ ಆಹಾರ, ಮೊಸರು, ಮೇಕೆ ಹಾಲು, ಮೊಟ್ಟೆ, ಧಾನ್ಯಗಳು, ಓಟ್ಸ್,ಮೊಳಕೆಯೊಡೆದ ಗೋಧಿ, ಕೋಸುಗಡ್ಡೆ ಇತ್ಯಾದಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com