ಖಿನ್ನತೆಯಿಂದ ಮಹಿಳೆಯರಲ್ಲಿ ಸಾವಿನ ಅಪಾಯ ಹೆಚ್ಚು: ಅಧ್ಯಯನ

ಸಮಾಜದಲ್ಲಿ ಮಹಿಳೆಯರ ಬದಲಾಗುತ್ತಿರುವ ಪಾತ್ರಗಳು ಮತ್ತು ಅನೇಕ ಜವಾಬ್ದಾರಿಗಳು ಒತ್ತಡ ಮತ್ತು ಖಿನ್ನತೆ ಹೆಚ್ಚಾಗಿ ಸಾವಿನ ವಯಸ್ಸು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಸಮಾಜದಲ್ಲಿ ಮಹಿಳೆಯರ ಬದಲಾಗುತ್ತಿರುವ ಪಾತ್ರಗಳು ಮತ್ತು ಅನೇಕ ಜವಾಬ್ದಾರಿಗಳು ಒತ್ತಡ ಮತ್ತು ಖಿನ್ನತೆ ಹೆಚ್ಚಾಗಿ ಸಾವಿನ ವಯಸ್ಸು ಬೇಗ ಬರುತ್ತದೆ ಎಂದು ಅಧ್ಯಯನವೊಂದು ಹೇಳುತ್ತದೆ.
ಮಹಿಳೆಯರಲ್ಲಿ ಖಿನ್ನತೆ ಹೆಚ್ಚಾದಷ್ಟು ಸಾವು ಬೇಗನೆ ಬರುತ್ತದೆ. ಖಿನ್ನತೆ ಮತ್ತು ಸಾವು ಸಂಬಂಧ ಹೊಂದಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮನೆಯಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಪಾತ್ರ ಬದಲಾಗುತ್ತಿದೆ. ಮಹಿಳೆಯರ ಜವಾಬ್ದಾರಿ ಮತ್ತು ನಿರೀಕ್ಷೆಗಳು ಇಂದು ಅಧಿಕವಾಗುತ್ತಿವೆ ಎನ್ನುತ್ತಾರೆ ಒಟ್ಟಾವ ವಿಶ್ವವಿದ್ಯಾಲಯದ ಇಯಾನ್ ಕೊಲ್ ಮಾನ್.
ಉದಾಹರಣೆಗೆ 25 ವರ್ಷಕ್ಕೆ ಖಿನ್ನತೆ ಉಂಟಾದರೆ ವ್ಯಕ್ತಿಯ ಸರಾಸರಿ ಆಯಸ್ಸು 60 ವರ್ಷವಾಗುತ್ತದೆ. ಅವರ ಜೀವಿತಾವಧಿ 10ರಿಂದ 12 ವರ್ಷದಷ್ಟು ಕಡಿಮೆಯಾಗುತ್ತದೆ. ಕೆಲವು ವರ್ಷಗಳಲ್ಲಿ ಇದು ಪುರುಷರಿಗೆ ಅನ್ವಯವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಮಹಿಳೆಯರಿಗೂ ಅನ್ವಯವಾಗುತ್ತದೆ ಎನ್ನುತ್ತಾರೆ ಅಮೆರಿಕಾದ ರಾಷ್ಟ್ರೀಯ ಮಕ್ಕಳ ಆರೋಗ್ಯ ಮತ್ತು ಮಾನವ ಅಭಿವೃದ್ಧಿ ಕೇಂದ್ರದ ಸ್ಟೆಫನ್ ಗಿಲ್ ಮಾನ್.
ಅಧ್ಯಯನಕ್ಕೆ ತಂಡ 3410 ವಯಸ್ಕರ ಮಾನಸಿಕ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿತು. ಅಂಟ್ಲಾಂಟಿಕ್, ಕೆನಡಾ ಪ್ರದೇಶಗಳ ಜನರನ್ನು ಅಧ್ಯಯನಕ್ಕೊಳಪಡಿಸಲಾಯಿತು.
ಅಪೌಷ್ಟಿಕತೆ, ವ್ಯಾಯಾಮದ ಕೊರತೆ, ಮದ್ಯಪಾನ, ಧೂಮಪಾನ ಇತ್ಯಾದಿಗಳಿಂದ ಮಾನಸಿಕ ಖಿನ್ನತೆಗೆ ಅಲ್ಪ ಮಟ್ಟದಲ್ಲಿ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದ್ದರೂ ಕೂಡ ಖಿನ್ನತೆಗೆ ಜೀವನದ ಬೇರೆ ಕಾರಣಗಳು ಮುಖ್ಯವಾಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.
ಮನುಷ್ಯನ ಮನಸ್ಸಿನಲ್ಲಿ ವ್ಯತ್ಯಾಸಗಳಾದರೆ ಕುಟುಂಬ ವೈದ್ಯರು ಅದನ್ನು ಗುರುತಿಸಬೇಕು. ಸೂಕ್ತ ಕಾಲಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಇದರಿಂದ ಹೊರಬರಬಹುದು ಎಂದು ಸಂಶೋಧಕರು ತಿಳಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com