ನಮ್ಮ ದೇಹ ದಕ್ಷ ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. ಸಾಮಾನ್ಯ ವ್ಯಕ್ತಿಗಳು ತಾವು ಸೇವಿಸುವ ಆಹಾರಕ್ಕೆ ಪ್ರತಿಕ್ರಿಯಿಸುವುದಿಲ್ಲ. ಆದಾಗ್ಯೂ, ಕೆಲವೊಂದು ಆಹಾರದಲ್ಲಿನ ಪ್ರೋಟಿನ್ ಗಳು ದೇಹಕ್ಕೆ ಹೊಂದಿಕೊಳ್ಳುವುದಿಲ್ಲ. ಇದರಿಂದಾಗಿ ಆಹಾರದ ಅಲರ್ಜಿ ಉಂಟಾಗುತ್ತದೆ. ಇದಕ್ಕೆ ಚಿಕಿತ್ಸೆ ಇಲ್ಲ. ಆದರೆ, ನಿರ್ದಿಷ್ಟ ಅಲರ್ಜಿಯನ್ನು ತಪ್ಪಿಸಬಹುದು ಎಂದು ರೈನ್ ಬೊ ಮಕ್ಕಳ ಆಸ್ಪತ್ರೆಯ ಮಕ್ಕಳ ಅಲರ್ಜಿಸ್ಟ್ ಡಾ. ಸುರೇಶ್ ನಟರಾಜನ್ ಹೇಳಿದ್ದಾರೆ.