ಮುಂಬೈನಲ್ಲಿ 'ಸಂಭ್ರಮದ ಮಕ್ಕಳ ಮೇಳ'
ಮುಂಬೈ: ಪ್ರತಿಯೊಂದು ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯ. ಬಹುಮಾನ ಮುಖ್ಯವಲ್ಲ. ಮಕ್ಕಳಲ್ಲಿ ಆತ್ಮ ಸ್ಥೈರ್ಯ, ವಿಶ್ವಾಸ ನಂಬಿಕೆಯಂತಹ ಗುಣಗಳು ಬೆಳೆದರೆ ತಮ್ಮ ಪ್ರತಿಭೆಯನ್ನು ಎಲ್ಲಿಯೂ ಪ್ರದರ್ಶಿಸಬಹುದು ಎಂದು ನೃತ್ಯ ಕಲಾವಿದೆ ಅಂಕಿತಾ ಎನ್. ನಾಯ್ಕ ಹೇಳಿದರು. ಇತ್ತೀಚೆಗೆ ಕರ್ನಾಟಕ ಸಂಘ, ಮುಂಬೈಯಲ್ಲಿ ಮುಂಬಯಿ ನಗರ ಹಾಗೂ ಉಪನಗರಗಳ ಜನತೆಗೆ ನಡೆಸಿದ ವಿವಿಧ ಸ್ಪರ್ಧೆಗಳ 'ಮಕ್ಕಳ ಮೇಳ' ಉದ್ಘಾಟಿಸಿ ಮಾತನಾಡಿದರು.
ಮತ್ತೊರ್ವ ಪ್ರಶಸ್ತಿ ವಿಜೇತ ನೃತ್ಯ ಕಲಾವಿದೆ ಸೌಜನ್ಯ ಎ. ಬಿಲ್ಲವ ಮಾತನಾಡಿ, ಕರ್ನಾಟಕ ಸಂಘ ಪ್ರತಿ ವರ್ಷ ಮಕ್ಕಳ ಮೇಳ ಆಯೋಜಿಸುತ್ತಿರುವುದು ಅಭಿಮಾನದ ಸಂಗತಿ. ಎಳೆಯ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಒಳ್ಳೆಯ ವೇದಿಕೆ ಕಲ್ಪಿಸಿಕೊಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸಂಘದ ಉಪಾಧ್ಯಕ್ಷ ಬಿ.ಜಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯೆ ಎಸ್.ಕೆ. ಭವಾನಿ ಸ್ವಾಗತಿಸಿದರು. ಸಂಘದ ಮಹಿಳಾ ವಿಭಾಗದ ಸದಸ್ಯರು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ, ಸಂಘಟಕ ಸನತ್‌ಕುಮಾರ್ ಜೈನ್ ನಿರೂಪಿಸಿದರು. ಮರಿಯಪ್ಪ ನಾಟೇಕರ್ ವಂದಿಸಿದರು. ನಂತರ ವಿವಿಧ ಸ್ಪರ್ಧೆಗಳು ಜರುಗಿದವು.
ಸಮಾರೋಪ ಸಮಾರಂಭ: ಮಕ್ಕಳ ಮೇಳದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿರುವುದು ಸಂತಸದ ವಿಷಯ ಎಂದು ಸಂಘಟಕ, ಸಮಾಜ ಸೇವಕ ಶ್ರೀನಿವಾಸ್ ಪಿ.ಎಸ್. ಹೇಳಿದರು. ಮಕ್ಕಳ ಮೇಳದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಡಾ. ಜಿ.ಡಿ. ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌ. ಕಾರ್ಯದರ್ಶಿ ಡಾ. ಭರತ್‌ಕುಮಾರ್ ಪೊಲಿಪು ಸ್ವಾಗತಿಸಿದರು. ಗೌ. ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್ ಪರಿಚಯಿಸಿದರು. ಉಪಾಧ್ಯಕ್ಷ ಬಿ.ಜಿ. ನಾಯಕ್ ತೀರ್ಪುಗಾರರಿಗೆ ಹೂಗುಚ್ಛ ನೀಡಿ ಗೌರವಿಸಿದರು. ಪಿ.ಎಸ್. ವಿಜೇತ ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಎ.ವಿ. ಮೇಘರಾಜ್, ಎಸ್.ಕೆ. ಭವಾನಿ, ಬಾಲಕೃಷ್ಣ ನಿಡ್ವಣ್ಣಾಯ, ಸುಮಂಗಲಾ ಶೆಟ್ಟಿ, ಶ್ರೀನಿವಾಸ ಜೋಕಟ್ಟೆ, ಸುಶೀಲಾ ದೇವಾಡಿಗ, ಉಷಾಭಟ್, ರಂಜನಿ ಮೊಯಿಲಿ, ಶಿವಯೋಗಿ ಸಣ್ಣಮನಿ ಮೊದಲಾದವರು ಸಹಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

