ಹೊರನಾಡು ಕನ್ನಡಿಗ

ಮುಂಬೈ ವಿವಿ ಕನ್ನಡ ವಿಭಾಗದಲ್ಲಿ ಸಾಹಿತ್ಯ ಸಂವಾದ

Published On :

ಮುಂಬಯಿ: ಇುದೇ ವರ್ಷ ಕಳೆದ ಸೆಪ್ಟೆಂಬರ್ 22ರಂದು ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಮುಂಬಯಿ ವಿವಿ ಕನ್ನಡ ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಜಾನಪದ ವಿದ್ವಾಂಸ ಡಾ. ಕಾಳೇಗೌಡ ನಾಗವಾರ ಹಾಗೂ ಖ್ಯಾತ ಗಮಕ ವಾಚಕ ಅಂಬಾತನಯ ಮುದ್ರಾಡಿ ಇವರ ಉಪನ್ಯಾಸ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮವು ಕಲೀನದಲ್ಲಿ ನಡೆಯಿತು.
ರೆವೆ. ಎಬ್ನೇಜರ್ ಜತ್ತನ್ನ ಅವರ ತುಳುವಿಗೆ ಬಾಸೆಲ್ ಮಿಷನ್ನರಿಗಳ ಕೊಡುಗೆ ಎನ್ನುವ ಚೊಚ್ಚಲ ಕೃತಿಯನ್ನು ಅಂಬಾಡಿತನಯ ಮುದ್ರಾಡಿಯವರು ಬಿಡುಗಡೆಗೊಳಿಸಿದರು. ರೆ.ವೆ. ಜತ್ತನ್ನ ಅವರು ಈ ಕೃತಿಯನ್ನು ಬರೆಯುವ ಪ್ರೇರಣೆ ತನಗೆ ಯಾಕೆ ಬಂತು ಎನ್ನುವುದನ್ನು ತಿಳಿಸಿದರು. ಮಧುಸೂದನರಾವ್ ಕೃತಿಯ ಪರಿಚಯವನ್ನು ಮಾಡಿಕೊಟ್ಟರು.   ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿಯ ಬಗ್ಗೆ ಡಾ. ಕಾಳೇಗೌಡ ನಾಗವಾರ ಮಾತನಾಡಿದರು.
ಅಂಬಾತನಯ ಮುದ್ರಾಡಿಯವರು ಕರ್ಣನನ್ನು ಕವಿ ಕುಮಾರವ್ಯಾಸ ಹ್ಯಾಗೆ ಚಿತ್ರಿಸಿದ್ದಾನೆ ಎಂಬುದನ್ನು ವಿವರಿಸಿದರು.
ಆಮೇಲೆ ನಡೆದ ಸಾಹಿತ್ಯ ಸಂವಾದದಲ್ಲಿ ವಿವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುವೆಂಪು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಉಪಾಧ್ಯ ಸ್ವಾಗತಿಸಿದರು. ಸಂಶೋಧನಾ ಸಹಾಯಕಿ ಪೂರ್ಣಿಮಾ ಶೆಟ್ಟಿ ನಿರೂಪಿಸಿದರು. ಅಶೋಕ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.