ಕಾಸರಗೋಡು: ಸಂಭ್ರಮದ ಶ್ರೀಕೃಷ್ಣ ಸ್ಪರ್ಧೆ
ಕಾಸರಗೋಡು: ದ್ವಿತೀಯ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀ ಕೃಷ್ಣವೇಷ ಸ್ಪರ್ಧೆ ಮತ್ತು ಶ್ರೀರಾಮನಾಥ ಸಾಂಸ್ಕೃತಿಕ ಭವನದ 'ಸರಣಿ ಪಯಣ'ದ ಕನ್ನಡ ಜ್ಯೋತಿ ಹಸ್ತಾಂತರ ಕಾರ್ಯಕ್ರಮವು ಇಲ್ಲಿನ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಸಂಭ್ರಮದಿಂದ ಜರುಗಿತು.
ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಕೆ. ಸತ್ಯನಾರಾಯಣ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. 'ಸರಣಿ ಪಯಣ'ದ ಕನ್ನಡ ಜ್ಯೋತಿಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಬೆಳಗಿಸಿ ಶ್ರೀರಾಮನಾಥ ಸಾಂಸ್ಕೃತಿಕ ಭವನದ ಪ್ರಧಾನ ಸಂಚಾಲಕ ಕೆ. ಗುರುಪ್ರಸಾದ್ ಕೋಟೆಕಣಿಯವರಿಗೆ ಹಸ್ತಾಂತರಿಸಿದರು. ಕಾಸರಗೋಡು ಮಾಡಿ ನಗರಸಭಾ ಸದಸ್ಯ ಕೆ. ಗಣಪತಿ ಕೋಟೆಕಣಿ, ಕೆ. ವಿಷ್ಣು ಶ್ಯಾನುಭೋಗ್, ಪುರುಷೋತ್ತಮ ಎಂ. ನಾಯ್ಕ್, ಡಾ. ಜಯಶ್ರೀ ನಾಗರಾಜ್, ಪ್ರೇಮಲತಾ ಎಲ್ಲೋಜಿರಾವ್ ಶುಭ ಹಾರೈಸಿದರು. ಸರಣಿ ಕಾರ್ಯಕ್ರಮದ ನಿರ್ದೇಶಕ ಕೆ. ವಾಮನರಾವ್ ಬೇಕಲ್ ಸರಣಿ ಪಯಣದ ಉದ್ದೇಶವನ್ನು ತಿಳಿಸಿದರು. ವೀಣಾ ಪ್ರಸನ್ನ ಶ್ಯಾನುಭೋಗ್ ಮತ್ತು ರೂಪಾ ಸುರೇಶ್ ನಾಯ್ಕ್ ಪ್ರಾರ್ಥನೆ ಮಾಡಿದರು. ಸರಣಿ ಕಾರ್ಯಕ್ರಮದ ಪ್ರಧಾನ ಸಂಚಾಲಕ ಕೆ. ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ನಿರ್ದೇಶಕ ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಕೆ. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಪಿ. ಅಶೋಕನಗರ ವಂದಿಸಿದರು. ಕ್ರೀಡಾ ಪ್ರತಿಭೆ ಕು. ವೈಶಾಲಿ ಬಿ.ಕೆ. ಬೀರಂತಬೈಲುಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಳಿಕ ಕಾಸರಗೋಡು ಜಿಲ್ಲಾ ಮಟ್ಟದ ದ್ವಿತೀಯ ವರ್ಷದ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ತೀರ್ಪುಗಾರರಾಗಿ ಮುರಳೀಮಾಧವ ಮಧೂರು, ಕೆ. ಸತ್ಯನಾರಾಯಣತಂತ್ರಿ, ಕೆ. ವಿಷ್ಣು ಶ್ಯಾನುಭೋಗ್, ಮೋಹನ ಆಚಾರ್ಯ, ಪುಳ್ಕೂರು ಸಹಕರಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

