

ಬೆಂಗಳೂರು, ಏಪ್ರಿಲ್, 2016 :- ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ 2016/2017ನ್ನು ವಿಜ್ಞಾನ ವರ್ಷವನ್ನಾಗಿ ಆಚರಿಸುತ್ತಿದ್ದು, 2016 ರ ಗ್ರೀನ್ ಟ್ಯಾಲೆಂಟ್ಸ್(ಹಸಿರು ಪ್ರತಿಭೆಗಳು) ಸಂಶೋಧನಾ ಸ್ಪರ್ಧೆಯನ್ನು 2009 ರಿಂದ ನಡೆಸುತ್ತಿದೆ. ಪ್ರತಿ ವರ್ಷ 25 ಯುವ ಸಂಶೋಧಕರನ್ನು ಗೌರವಿಸುತ್ತಿದೆ. ಹಲವಾರು ವಿಷಯಗಳಲ್ಲಿ ಸಂಶೋಧನೆ ನಡೆಸಿದ ಅನೇಕ ದೇಶಗಳ ಪ್ರತಿಭೆಗಳಿಗೆ ಈ ಗೌರವ ಲಭಿಸುತ್ತದೆ. ಈ ಬಾರಿ ಹವಾಮಾನ ಬದಲಾವಣೆ, ಮಾಲಿನ್ಯ, ಅತಿಯಾದ ಮೀನುಗಾರಿಕೆಗಳು `ಸಮುದ್ರ ಮತ್ತು ಸಾಗರ’ ಗಳ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಕುರಿತು ಸ್ಪರ್ಧೆಯ ಪ್ರವೇಶಗಳನ್ನು ಆಹ್ವಾನಿಸಲಾಗುತ್ತಿದೆ. ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲಿ ತೆರೆದಿದ್ದು ಎಲ್ಲರಿಗೂ ಗೆಲ್ಲಲು ಸಮಾನ ಅವಕಾಶಗಳಿರುತ್ತವೆ. ಸಂಪೂರ್ಣ ನಿಧಿ ಬೆಂಬಲ ಪಡೆದ ಜರ್ಮನಿ ಸಂದರ್ಶನದ ಅವಕಾಶ ಮತ್ತು ಎರಡು ವಾರಗಳ ವಿಜ್ಞಾನ ವೇದಿಕೆಯಲ್ಲಿ ಭಾಗವಹಿಸುವ ಆಹ್ವಾನವನ್ನು ಪ್ರಶಸ್ತಿಯ ಅಂಗವಾಗಿ ನೀಡಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ಅಗ್ರ ಮಟ್ಟದ ವಿಜ್ಞಾನ ಸಂಶೋಧನಾ ಸಂಸ್ಥೆಗಳಿಗೆ ಪ್ರವೇಶದ ಅವಕಾಶವೂ ಇರುತ್ತದೆ.
ತಮ್ಮ ಆಯ್ಕೆಯ ತಜ್ಞರೊಂದಿಗೆ ವೈಯಕ್ತಿಕ ಭೇಟಿ ಮತ್ತು ಕೆಲಸ ಮಾಡುವ ಅವಕಾಶ ಅಲ್ಲದೆ ಸಂಪೂರ್ಣ ನಿಧಿ ಬೆಂಬಲ ಪಡೆದ ಸಂಶೋಧನೆಯನ್ನು ಮೂರು ತಿಂಗಳ ಕಾಲ ವಿಜೇತರ ಆಯ್ಕೆಯ ಸಂಸ್ಥೆಗಳಲ್ಲಿ ನಡೆಸುವ ಸೌಲಭ್ಯ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸಲು ಮೇ 24, 2016 (ರಾತ್ರಿ 12 ಗಂಟೆ-ಸಿಇಟಿ) ಕೊನೆಯ ದಿನ. ಹೆಚ್ಚಿನ ವಿವರಗಳಿಗೆ www.greentalents.de ರಲ್ಲಿ ಸ್ಪರ್ಧೆಯ ವಿಭಾಗವನ್ನು ಸಂದರ್ಶಿಸಿ.