ಬೆಂಗಳೂರಿನಲ್ಲಿ ದಂಪತಿಗಳಿಬ್ಬರ ಬರ್ಬರ ಹತ್ಯೆ

ಬೆಂಗಳೂರಿನ ಬ್ಯಾಟರಾಯನಪುರದ ವಿನಾಯಕ ಶಾಲೆಯ ಬಳಿಯ ಇರುವ ಮನೆಯೊಂದರಲ್ಲಿ ಇಬ್ಬರು ದಂಪತಿಗಳನ್ನು ಮಾರಾಕಾಸ್ತ್ರಗಳಿಂದ...
ಕೊಲೆಯಾದ ದಂಪತಿ
ಕೊಲೆಯಾದ ದಂಪತಿ
Updated on: 
ಬೆಂಗಳೂರು: ಬೆಂಗಳೂರಿನ ಬ್ಯಾಟರಾಯನಪುರದ ವಿನಾಯಕ ಶಾಲೆಯ ಬಳಿಯ ಇರುವ ಮನೆಯೊಂದರಲ್ಲಿ ಇಬ್ಬರು ದಂಪತಿಗಳನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಳೆದ ಎರಡು ದಿನಗಳ ಹಿಂದೆಯೇ ಈ ಕೃತ್ಯ ನಡೆದಿದ್ದು, ನೆರೆ ಹೊರೆಯವರು ಇಂದು ಮನೆಯ ಬಳಿ ತೆರಳಿದಾಗ ದಂಪತಿಗಳಿಬ್ಬರು ಹತ್ಯೆಗೀಡಾಗಿರುವುದು ಬೆಳಕಿಗೆ ಬಂದಿದೆ.
ಹತ್ಯೆಗೀಡಾವರು ಜಿಕೆವಿಕೆಯ ನಿವೃತ್ತ ಉದ್ಯೋಗಿ ಮುನಿಯಪ್ಪ (68)ಮತ್ತು ಪತ್ನಿ ಲಕ್ಷ್ಮಮ್ಮ (60)ಎಂದು ತಿಳಿದು ಬಂದಿದೆ. ಇಬ್ಬರು ಮಕ್ಕಳಿಂದ ದೂರಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. 
ಕೋಡಿಗೆಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣಕಾಸಿನ ಉದ್ದೇಶಕ್ಕಾಗಿ ಕೊಲೆಗೈದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com