

ಬೆಂಗಳೂರು: ನಾಲ್ಕು ಸಲದ ಡಬ್ಲ್ಯುಡಬ್ಲುಇ ವಲ್ರ್ಡ್ ಹೆವಿವೇಟ್ ಚಾಂಪಿಯನ್ ಆಗಿರುವ ಅಲ್ಬರ್ಟ್ ಡೆಲ್ ರಿಯೊ 3 ದಿನಗಳ ವಿಶೇಷ ಭಾರತ ಭೇಟಿಯ ಅಂಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ನಗರದಲ್ಲಿ ಸ್ಥಳೀಯ ಅಭಿಮಾನಿಗಳ ಜೊತೆ ಸಮಯ ಕಳೆದು ಮಾತುಕತೆ ನಡೆಸಿದರು.
ನಗರದ ಗರುಡ ಮಾಲ್‍ನಲ್ಲಿ ಅಲ್ಬರ್ಟ್ ಅಭಿಮಾನಿಗಳನ್ನು ಭೇಟಿ ಮಾಡಿದರು. ಜೊತೆಗೆ ಡಬ್ಲ್ಯುಡಬ್ಲ್ಯುಇ 2ಕೆ17 ಆಟವನ್ನು ಬಿಡುಗಡೆಗೊಳಿಸಿದರು. ಡಬ್ಲ್ಯುಡಬ್ಲ್ಯುಇ ಅಭಿಮಾನಿಗಳೊಂದಿಗೆ ಗರುಡ ಮಾಲ್ ತುಂಬಿ ತುಳುಕುತ್ತಿತ್ತು.
ಇದಕ್ಕು ಮೊದಲು ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಭಾರತದ ವಿಶೇಷ ಒಲಿಂಪಿಕ್ ತಂಡವನ್ನು ಭೇಟಿ ಮಾಡಿದರು. ವಿಶೇಷ ಮಕ್ಕಳ ಜೊತೆ ಕ್ರಿಕೆಟ್ ಆಡಿದರು. ಈ ಸಂದರ್ಭದಲ್ಲಿ ವಿಶೇಷ ಒಲಿಂಪಿಕ್ ತಂಡದ ಸ್ಥಳೀಯ ನಿರ್ದೇಶಕ ವಸಂತ್ ಕುಮಾರ್ ಶೆಟ್ಟಿ ಹಾಜರಿದ್ದರು.
ಈ ವೇಳೆ ಮಾತನಾಡಿದ ಅಲ್ಬರ್ಟ್ ರಿಯೊ, ಭಾರತ ಒಂದು ಶ್ರೇಷ್ಠ ರಾಷ್ಟ್ರ. ಇಲ್ಲಿನ ಅಭಿಮಾನಿಗಳ ಪ್ರೀತಿಯಿಂದ ಮನಸು ತುಂಬಿ ಬಂದಿದೆ. ಬೆಂಗಳೂರಿನಲ್ಲಿ ನಿಜಕ್ಕು ಉತ್ತಮ ಸಮಯ ಕಳೆದಿರುವೆ. ಸ್ಪೆಷಲ್ ಒಲಿಂಪಿಕ್ಸ್ ಭಾರತ ಮಕ್ಕಳನ್ನು ಭೇಟಿ ಮಾಡಿರುವುದು ಒಂದು ವಿಶೇಷ ಹಾಗೂ ಸ್ಫೂರ್ತಿದಾಯಕ ಅನುಭವ ಎಂದರು.