

ಬೆಂಗಳೂರು: ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ನಯನ್ ಚಟರ್ಜಿ, ಭಾನುವಾರ ನಡೆದ ಜೆಕೆ ಟೈರ್ ಎಫ್‍ಎಂಎಸ್‍ಸಿಐ ನ್ಯಾಷನಲ್ ರೋಟಕ್ಸ್ ಕಾರ್ಟಿಂಗ್ ಚಾಂಪಿಯನ್‍ಶಿಪ್ 2016ರಲ್ಲಿ 3ನೇ ಸ್ಥಾನ ಗಳಿಸಿದ್ದಾರೆ.
ಇದು ಚಟರ್ಜಿ ಸಹೋದರರಿಗೆ ಶುಭದಿನ. ನಯನ್ ಜೊತೆಗೆ ಅವರ ತಮ್ಮ ಮ್ರಿನಲ್ ಮೊದಲ ಮ್ಯಾಕ್ಸ್ ಅವಧಿಯಲ್ಲಿ 7ನೇ ಸ್ಥಾನದಲ್ಲಿ ರೇಸ್ ಮುಗಿಸಿದರು.
‘ನನ್ನ ಸ್ಟೀರಿಂಗ್ ಹುಕ್ ಮೇಲಿತ್ತು. ತಿರುಗಿಸಲು ಕಷ್ಟವಾಗುತ್ತಿತ್ತು. ಪ್ರತಿ ಸಲ ನಾನು ಸ್ಟೀರಿಂಗ್ ತಿರುಗಿಸಿ ಚಕ್ರವನ್ನು ನೋಡುತ್ತಿದೆ’ ಎನ್ನುತ್ತಾರೆ ನಯನ್.
ಮೆಕೊ ಮೋಟಾರ್‍ಸ್ಪೋಟ್ರ್ಸ್ ಮಾರ್ಗದರ್ಶಕ ಮತ್ತು ಅಂತಾರಾಷ್ಟ್ರೀಯ ಚಾಲಕ ಅರ್ಮನ್ ಇಬ್ರಾಹಿಂ ಪ್ರತಿಕಿಯಿಸಿ, ಹೀಗಾದಾಗ ಚಾಲನೆ ಕಷ್ಟ. ಚಾಲಕ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾನೆ. ನೀವು ಕಾರು ನಿಯಂತ್ರಿಸುವುದು ಅಸ್ಥಿರವಾಗಿರುತ್ತದೆ. ಆದರೆ ನಯನ್ ಅದನ್ನು ನಿರ್ವಹಿಸಿ ಪೋಡಿಯಂ ಫಿನಿಷ್‍ನಲ್ಲಿ ಬಂದಿದ್ದಾರೆ ಎಂದರು.
ಮೊದಲ ಲ್ಯಾಪ್‍ನಲ್ಲಿ 6ನೇ ಸ್ಥಾನದಲ್ಲಿದ್ದರು ನಂತರ ನಯನ ಪೋಡಿಯಂ ಫಿನಿಷ್‍ನಲ್ಲಿ ಬರಲು ಯಶಸ್ವಿಯಾಗಿದ್ದಾರೆ.
ನಯನ್ ಚಟರ್ಜಿ ಅಂತಾರಾಷ್ಟ್ರೀಯ ಕಾರ್ಟ್ ರೇಸರ್ ಆಗಿದ್ದು, ಕಷ್ಟದ ರೇಸ್‍ಗಳಲ್ಲಿ ಭಾಗವಹಿಸುವುದು ಇವರ ಆಸಕ್ತಿ. 2013ರಿಂದ ಹಿರಿಯರ ವಲಯದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಈವರೆಗೆ 28 ರಾಷ್ಟ್ರೀಯ ಟ್ರೋಫಿಗಳನ್ನು ಮೋಟಾರ್‍ಸ್ಪೋಟ್ರ್ಸ್‍ನಲ್ಲಿ ಗೆದ್ದಿದ್ದಾರೆ.
ಇವರು ಹೈದ್ರಾಬಾದ್‍ನಲ್ಲಿ ಜೂ.24-26ರವರೆಗೆ ನಡೆಯಲಿರುವ ಜೆಕೆ ಟೈರ್ ಎಫ್‍ಎಂಎಸ್‍ಸಿಐ ನ್ಯಾಷನಲ್ ರೋಟಕ್ಸ್ ಕಾರ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲಿದ್ದಾರೆ.