ತಾರಾ ನನಗೆ ಹಿಂಸೆ, ಕಿರುಕುಳ ನೀಡಿದ್ದಾರೆ: ಮನೆಕೆಲಸದಾಕೆ ಆರೋಪ

ತನಗೆ ಮಾನಸಿಕ ಹಿಂಸೆ ನೀಡಿ ಸರಿಯಾಗಿ ಊಟ, ತಿಂಡಿಯನ್ನು ನೀಡದೆ ಕಿರುಕುಳ ನೀಡಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ನನ್ನ ಅಣ್ಣನನ್ನು ಕೆಲಸದಿಂದ ತೆಗೆದು...
ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ(ಸಂಗ್ರಹ ಚಿತ್ರ)
ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ(ಸಂಗ್ರಹ ಚಿತ್ರ)

ಬೆಂಗಳೂರು: ತನಗೆ ಮಾನಸಿಕ ಹಿಂಸೆ ನೀಡಿ ಸರಿಯಾಗಿ ಊಟ, ತಿಂಡಿಯನ್ನು ನೀಡದೆ ಕಿರುಕುಳ ನೀಡಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ನನ್ನ ಅಣ್ಣನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ವಿರುದ್ಧ ಶನಿವಾರ ಅವರ ಮನೆ ಕೆಲಸದಾಕೆ ತುಮಕೂರಿನಲ್ಲಿ ಆರೋಪ ಮಾಡಿದ್ದಾಳೆ.

ತುಮಕೂರಿನ ಗುಬ್ಬಿ ಮೂಲದ ಲತಾ ಎಂಬಾಕೆ ತಾರಾ ಅವರ ಮಗನನ್ನು ನೋಡಿಕೊಳ್ಳಲೆಂದು ಕೆಲ ವರ್ಷಗಳ ಹಿಂದೆ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಇತ್ತೀಚೆಗೆ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ರಜೆ ತೆಗೆದು ಊರಿಗೆ ಹೋಗಲು ಬಿಡುತ್ತಿರಲಿಲ್ಲ, ನನ್ನ ಗಂಡನ ಆಸ್ತಿ ಪಡೆಯುವ ಸಲುವಾಗಿ ಕೋರ್ಟ್‌ ಮೆಟ್ಟಿಲೇರಿದ್ದು ಈ ಸಲುವಾಗಿ ಕೋರ್ಟ್‌ಗೂ ತೆರಳಲು ಬಿಡುತ್ತಿರಲಿಲ್ಲ. ನನಗೆ ಸರಿಯಾಗಿ ಊಟ ತಿಂಡಿಯನ್ನೂ ನೀಡುತ್ತಿರಲಿಲ್ಲ. ರಾತ್ರಿ 12 ಗಂಟೆಯ ವರೆಗೆ ಕೆಲಸಮಾಡಬೇಕಾಗಿತ್ತು. ನಾನು ಕಳೆದ ಕೆಲ ದಿನಗಳಿಂದ ನೊಂದು ಕೆಲಸಕ್ಕೆ ಹೋಗಿಲ್ಲ. ಇದರಿಂದಾಗಿ ಸಿಟ್ಟಾದ ತಾರಾ ಅವರು ನನ್ನ ಅಣ್ಣ ಕಾಲೇಜ್‌ನ ಹಾಸ್ಟೇಲ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಆತನನ್ನು ಕೆಲಸದಿಂದ ವಜಾ ಗೊಳಿಸುವಂತೆ ಮಾಡಿದ್ದಾರೆ. ಎಂದು  ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.

ಆದರೆ ಲತಾಳ ಎಲ್ಲಾ ಆರೋಪಗಳನ್ನು ತಾರಾ ತಳ್ಳಿಹಾಕಿದ್ದಾರೆ. ಆಕೆಗೆ ಮಗುವನ್ನು ನೋಡಿಕೊಳ್ಳುವ ಕೆಲಸ ಮಾತ್ರ ನೀಡಿದ್ದೆ, ಬೇರೆ ಕೆಲಸ ಮಾಡಲು ಬೇರೆಯವರನ್ನು ನೇಮಿಸಿದ್ದೇನೆ. ಆಕೆಗೆ ಊಟ, ತಿಂಡಿ ನೀಡದೆ ಹಿಂಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com