ಸ್ಟಾರ್ಟ್ ಅಪ್ ಗಳ ಕೇಂದ್ರವಾಗುತ್ತಿರುವ ಮೈಸೂರು

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ದೇಶದ ಸ್ಟಾರ್ಟ್ ಅಪ್ ಗಳ ಕೇಂದ್ರವಾಗಿ ಬದಲಾಗುತ್ತಿದ್ದು, ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ, ದುಬಾರಿ ಜೀವನ ಮತ್ತು ಹೆಚ್ಚಿದ ಸ್ಪರ್ಧೆಯಿಂದಾಗಿ ಹೊಸ ಉದ್ಯಮಿಗಳು ಮೈಸೂರಿನತ್ತ ವಿಮುಖರಾಗುತ್ತಿದ್ದಾರೆ...
ಮೈಸೂರು (ಸಂಗ್ರಹ ಚಿತ್ರ)
ಮೈಸೂರು (ಸಂಗ್ರಹ ಚಿತ್ರ)
Updated on: 

ಮೈಸೂರು: ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ದೇಶದ ಸ್ಟಾರ್ಟ್ ಅಪ್ ಗಳ ಕೇಂದ್ರವಾಗಿ ಬದಲಾಗುತ್ತಿದ್ದು, ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ, ದುಬಾರಿ ಜೀವನ ಮತ್ತು  ಹೆಚ್ಚಿದ ಸ್ಪರ್ಧೆಯಿಂದಾಗಿ ಹೊಸ ಉದ್ಯಮಿಗಳು ಮೈಸೂರಿನತ್ತ ವಿಮುಖರಾಗುತ್ತಿದ್ದಾರೆ.

ಬೆಂಗಳೂರು ಮತ್ತು ಹೈದರಾಬಾದ್ ನಂತಹ ಮೆಟ್ರೋ ನಗರಗಳಲ್ಲಿ ಜೀವನ ನಿರ್ವಹಣೆ ದುಬಾರಿಯಾಗುತ್ತಿದ್ದು, ಮೂಲಭೂತ ಸೌಕರ್ಯ ಕೊರತೆ ಕೂಡ ಎದ್ದು ಕಾಣುತ್ತಿದೆ. ಈ ಹಿನ್ನಲೆಯಲ್ಲಿ  ಹೊಸ ಉದ್ಯಮಿಗಳು ರಾಜಧಾನಿ ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಮೈಸೂರಿನತ್ತ ಆಕರ್ಷಿತರಾಗುತ್ತಿದ್ದಾರೆ. ಮೈಸೂರಿನ ಉತ್ತಮ ರಸ್ತೆಗಳು, ಮೈಸೂರು-ಬೆಂಗಳೂರು ಡಬಲ್  ಟ್ರಾಕ್ ರೈಲ್ವೇ ಹಳಿ, ಉತ್ತಮ ಮೂಲಭೂತ ಸೌಕರ್ಯ, ಕೈಗೆಟುಕುವ ದರದಲ್ಲಿ ಬಾಡಿಗೆ ಮನೆಗಳು, ಪ್ರವಾಸಿ ತಾಣ ಮತ್ತು ಕಡಿಮೆ ಟ್ರಾಫಿಕ್ ನಂತಹ ಪ್ರಮುಖ ಅಂಶಗಳು ಹೊಸ ಉದ್ಯಮಿಗಳು  ಮೈಸೂರಿನಲ್ಲಿ ಹೂಡಿಕೆ ಮಾಡಲ ಆಕರ್ಷಿಸುತ್ತಿವೆ.

ಶಿವಮೊಗ್ಗ ಮೂಲದ ಉದ್ಯಮಿಗಳಾದ ಸುಮಂತ್ ಮತ್ತು ಪ್ರಭು ಮತ್ತು ನಿಕಿಲ್ ಶೆಟ್ಟಿ ಎಂಬುವವರು ವೆಸ್ಟೋ ಎಂಬ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯನ್ನು ಮೈಸೂರಿನಲ್ಲಿ ಆರಂಭಿಸಿದ್ದು, ಹೊಸ  ಉದ್ಯಮದ ಬಂಡವಾಳ ಇಲ್ಲಿ ತಿಂಗಳಿಗೆ 10 ಸಾವಿರಕ್ಕಿಂತ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೇ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದರೆ, ಸ್ಪರ್ಧಾತ್ಮಕತೆ ಮತ್ತು ಇತರೆ  ವಿಚಾರಗಳಿಂದಾಗಿ ಈ ವೆಚ್ಚ ದುಪ್ಪಟಾಗುತ್ತಿತ್ತು. ಪ್ರಾಥಮಿಕ ಹಂತದಲ್ಲೇ ಬೆಂಗಳೂರಿನಲ್ಲಿ ದುಬಾರಿ ಹಣ ವ್ಯಯಿಸಬೇಕಾಗಿತ್ತು. ಹೀಗಾಗಿ ನಾವು ಮೈಸೂರನ್ನು ನಮ್ಮ ಉದ್ಯಮ ನಗರವನ್ನಾಗಿ  ಆಯ್ಕೆ ಮಾಡಿಕೊಂಡೆವು ಎಂದು ಹೇಳಿದ್ದಾರೆ.

ಇಂತಹುದೇ ಅಭಿಪ್ರಾಯವನ್ನು ಮಂಗಳೂರು ಮೂಲದ ನಕ್ಷಾ ಬಿಲ್ಡರ್ಸ್ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರತಿಭಾ ನಾಯಕ್ ಎಂಬುವವರು ವ್ಯಕ್ತಪಡಿಸಿದ್ದು, ಮೈಸೂರಿನಲ್ಲಿ ಹೊಸ  ಉದ್ಯಮಕ್ಕೆ ಹೆಚ್ಚು ಅವಕಾಶಗಳಿದ್ದು, ಇದೇ ಕಾರಣಕ್ಕಾಗಿ ಮೈಸೂರಿನಲ್ಲಿಯೇ ನಮ್ಮ ಕೇಂದ್ರ ಕಚೇರಿ ತೆರೆಯು ನಿರ್ಧರಿಸಿದೆವು ಎಂದು ಹೇಳಿದ್ದಾರೆ.

ಒಟ್ಟಾರೆ ತನ್ನ ಮೂಲಭೂತ ಸೌಕರ್ಯ ಮತ್ತು ಟ್ರಾಫಿಕ್ ಕಿರಿ ಕಿರಿ ರಹಿತ ಮೈಸೂರು ಇದೀಗ ಹೊಸ ಉದ್ಯಮಿಗಳ ಕೇಂದ್ರವಾಗಿ ಬದಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com