ಬೆಂಗಳೂರಿನ ಮುತ್ತೂಟ್ ಮಿನಿ ಫೈನಾನ್ಸ್ ನಲ್ಲಿ 90 ಲಕ್ಷ ರು ಮೌಲ್ಯದ ಚಿನ್ನ ಲೂಟಿ

ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿರುವ ಮುತ್ತೂಟ್ ಮಿನಿ ಗೋಲ್ಡ್ ಫೈನಾನ್ಸ್ ಅನ್ನು ಎರಡನೇ ಬಾರಿ ಟಾರ್ಗೆಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿರುವ ಮುತ್ತೂಟ್ ಮಿನಿ ಗೋಲ್ಡ್ ಫೈನಾನ್ಸ್ ಅನ್ನು ಎರಡನೇ ಬಾರಿ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು, ಶುಕ್ರವಾರ 90 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ನಿನ್ನೆ ಸಂಜೆ 7.30ರ ಸುಮಾರಿಗೆ ಪೊಲೀಸರ ಸೋಗಿನಲ್ಲಿ ಬಂದ ಆರೇಳು ಮಂದಿ ದುಷ್ಕರ್ಮಿಗಳು ಮುತ್ತೂಟ್ ಮಿನಿ ಗೋಲ್ಡ್ ಕಚೇರಿಯ ಮ್ಯಾನೇಜರ್ ನಾಗೇಂದ್ರಪ್ಪ ಅವರನ್ನು ಅಪಹರಿಸಿ, ಇಂದು ಬೆಳಿಗ್ಗೆ ಕೆಂಗೇರಿಯ ನೈಸ್ ರಸ್ತೆಯ ಬಳಿ ಕಾರಿನಿಂದ ಕೆಳಗಿಳಿಸಿ ಪರಾರಿಯಾಗಿದ್ದು, ಅವರಿಗಾಗಿ ಕುಂಬಳಗೋಡು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಇನ್ನೋವಾ ಕಾರಿನಲ್ಲಿ ಬಂದ ಆರೇಳು ಮಂದಿ ತಪಾಸಣೆ ನೆಪದಲ್ಲಿ ಒಳನುಗ್ಗಿ ಮ್ಯಾನೇಜರ್ ನಾಗೇಂದ್ರಪ್ಪನನ್ನು ಬೆದರಿಸಿ ಅಪಹರಿಸಿ ಕಚೇರಿಯಲ್ಲಿದ್ದ 90 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು ಚಿನ್ನಾಭರಣಗಳನ್ನು ದೋಚಿದ್ದಾರೆ. 
ಚಿನ್ನಾಭರಣಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದು, ರಾತ್ರಿಯೆಲ್ಲಾ ನಾಗೇಂದ್ರಪ್ಪನನ್ನು ಸುತ್ತಾಡಿಸಿ ಬೆಳಿಗ್ಗೆ ಕೆಂಗೇರಿಯ ನೈಸ್ ರಸ್ತೆಯ ಬಳಿ ಬಿಟ್ಟು ಹೋಗಿದ್ದಾರೆ. ನಾಗೇಂದ್ರಪ್ಪ ಅವರು ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿರುವ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಎಸ್ಪಿ ಚಂದ್ರಗುಪ್ತ ಅವರು ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com