ಆಸ್ತಿ ವೈಷಮ್ಯ: ಸಹೋದರನ ಮೇಲೆ ಗುಂಡಿನ ದಾಳಿ

ಆಸ್ತಿ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಲಕ್ಷ್ಮೀಪುರಂ ಪ್ರದೇಶದಲ್ಲಿ ಮಂಗಳವಾರ...
ಆಸ್ತಿ ವೈಷಮ್ಯ: ಸಹೋದರನ ಮೇಲೆ ಗುಂಡಿನ ದಾಳಿ
ಆಸ್ತಿ ವೈಷಮ್ಯ: ಸಹೋದರನ ಮೇಲೆ ಗುಂಡಿನ ದಾಳಿ
Updated on: 

ಮೈಸೂರು: ಆಸ್ತಿ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಲಕ್ಷ್ಮೀಪುರಂ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬಿ.ವಿ. ವಿಕಾಸ್ ಅವರು ಉದ್ಯಮಿಯಾಗಿದ್ದು, ಹೋಟೆಲ್ ವೊಂದಕ್ಕೆ ಹೋಗಿ ಕಾರಿನಲ್ಲಿ ಮನೆಗೆ ಬರುತ್ತಿದ್ದ ವೇಳೆ ಸಹೋದರನೇ ಆಗಿದ್ದ ಬಿ.ವಿ. ವೈಭವ್ ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆಂದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಗುಂಡಿನ ದಾಳಿಗೊಳಗಾದ ಕಾರಿನ ಗಾಜಿನ ಪುಡಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಈ ವರೆಗೂ ಯಾವುದೇ ಗುಂಡನ್ನು ವಶಕ್ಕೆ ಪಡೆಯಲಾಗಿಲ್ಲ ಪೊಲೀಸರು ಮಾಹಿತಿ ನೀಡಿದ್ದಾರೆ.

ಆಸ್ತಿ ವಿವಾದ ಕುರಿತಂತೆ ವಿಕಾಸ್ ಹಾಗೂ ವೈಭವ್ ನಡುವೆ ಕಳೆದ 10 ವರ್ಷಗಳಿಂದಲೂ ವೈಷಮ್ಯವಿದೆ. ಬಹಿರಂಗವಾಗಿಯೇ ಇಬ್ಬರೂ ಒಬ್ಬರಿಗೊಬ್ಬರು ಜೀವ ಬೆದರಿಕೆಯನ್ನೂ ಹಾಕಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ.

ಮಂಗಳವಾರ ಮಧ್ಯರಾತ್ರಿ ವಿಕಾಸ್ ಅವರು ಊಟ ತರಲೆಂದು ತಮ್ಮ ನ್ಯಾನೋ ಕಾರಿನಲ್ಲಿ ರೈಲ್ವೆ ನಿಲ್ದಾಣದ ಬಳಿ ಹೋಗಿದ್ದಾರೆ. ಬಳ್ಳಾಲ್ ವೃತ್ತದ ಬಳಿ ಇರುವ ಬುದ್ಧ ವಿಹಾರದ ಬಳಿ ಬರುತ್ತಿದ್ದಂತೆಯೇ ವಿಕಾಸ್ ಅವರ ಮೊಬೈಲ್ ಗೆ ಬೆದರಿಕೆ ಸಂದೇಶವೊಂದು ಬಂದಿದೆ.

ಸಂದೇಶ ನೋಡಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಸಹೋದರ ವೈಭವ್ ಗುಂಡಿನ ದಾಳಿ ನಡೆಸಲು ಆರಂಭಿಸಿದ. ಇದರಂತೆ ಚಾಲಕ ಕುಳಿತಿದ್ದ ಭಾಗದಲ್ಲಿದ್ದ ಕಿಟಕಿಯ ಗಾಜುಗಳು ಪುಡಿಪುಡಿಯಾಯಿತು. ಕೂಡಲೇ ಕಾರಿನಿಂದ ಇಳಿದು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಹೋಗಿ ಘಟನೆಯ ಕುರಿತು ಮಾಹಿತಿ ನೀಡಿದೆ ಎಂದು ವಿಕಾಸ್ ಅವರು ಹೇಳಿದ್ದಾರೆ.

ಘಟನೆ ಕುರಿತಂತೆ ಮಾತನಾಡಿರುವ ಪೊಲೀಸ್ ಉಪ ಆಯುಕ್ತ ಹೆಚ್.ಟಿ. ಶೇಖರ್ ಅವರು, ದಾಳಿ ನಡೆಸಿದ ಕಾರಿನ ಗಾಜಿನ ಪುಡಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗುಂಡಿನ ದಾಳಿಯಿಂದಲೇ ಕಾರಿನ ಗಾಜು ಒಡೆದಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com