ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31 ರಂದು ಮೆಟ್ರೋ ಸಂಚಾರ ಅವಧಿಯನ್ನು ಮಧ್ಯರಾತ್ರಿ 2 ಗಂಟೆ ವರೆಗೂ ವಿಸ್ತರಿಸಲಾಗಿತ್ತು. ಬಿಎಂಆರ್ ಸಿಎಲ್ ಅಧಿಕಾರಿಗಳ ಪ್ರಕಾರ ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದ್ದು 33,106 ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಉಳಿದಂತೆ ಸಾಮಾನ್ಯ ಅವಧಿಯಲ್ಲಿ 1, 26, 890 ಜನರು ಸಂಚರಿಸಿದ್ದಾರೆ, ಇನ್ನು ಪರ್ಪಲ್ ಲೈನ್ ಹಾಗೂ ಗ್ರೀನ್ ಲೈನ್ ಮೆಟ್ರೋ ಮಾರ್ಗದಲ್ಲಿ (ಮಂತ್ರಿ ಸಂಪಿಗೆ ರಸ್ತೆಯಿಂದ ನಾಗಸಂದ್ರದ ವರೆಗೆ) 1, 59,996 ಜನರು ಪ್ರಯಾಣಿಸಿದ್ದಾರೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.