ಮಗುವಿನ ತಾಯಿ ಅಂಗಿ ತೆಗೆದು ನೋಡಿದಾಗ ಖಾಸಗಿ ಅಂಗಗಳಲ್ಲಿ ತಿರುಚಿದ ಗಾಯಗಳಾಗಿ ಮಗುವಿಗೆ ನೋವಾಗುತ್ತಿದ್ದುದು ಗಮನಕ್ಕೆ ಬಂತು. ಮಗುವನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತವಾಗಿದೆ. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು. ನಿನ್ನೆ ಬೆಳಗ್ಗೆ ಬಂದು ಪೊಲೀಸರು ಶಾಲೆಯ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಯಾವುದೇ ಸಾಕ್ಷಿಗಳು ಸಿಗಲಿಲ್ಲ. ಮಗುವಿನಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಹೇಳಿದಾಗ ಬಸ್ ಚಾಲಕ ಆಶುತೋಷ್ ನ ಕಡೆ ಬೆರಳು ತೋರಿಸಿದಳು.