ಬಂಧಿತ ಪ್ರಮುಖ ಆರೋಪಿ ರಾಜು ಹಿರಿಯ ಪೊಲೀಸ್ ಅಧಿಕಾರಿಯ ಮೇಲೂ ದಾಳಿ ನಡೆಸಿದ್ದು, ಹಿರಿಯ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ ಪರಿಣಾಮ ರಾಜುಗೆ ಗಾಯಗಳಾಗಿವೆ. ಹತ್ಯೆಯ ಬೆನ್ನಲ್ಲೇ ರಾಜು, ಸಂದೀಪ್, ಕಾರ್ತಿಕ್, ಸಂತೋಷ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಆನೇಕಲ್ ಬಳಿಯಿರುವ ಕೆರೆಯಲ್ಲಿ ಮೀನುಗಾರಿಕೆ ನಡೆಸದಂತೆ ರಾಜು ತನ್ನನ್ನು ತಡೆದಿದ್ದರು ಇದನ್ನು ಪ್ರಶ್ನಿಸಿದ್ದಕ್ಕೆ ರಾಜು ಸಹೋದರರನ್ನು ಹರೀಶ್ ನಿಂದಿಸಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜು ತಮ್ಮ ಸಹೋದರರೊಟ್ಟಿಗೆ ಸೇರಿ ಹರೀಶ್ ಹತ್ಯೆಗೆ ಸಂಚು ರೂಪಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.