ಫೆಮಿನಾ ಮಿಸ್ ಇಂಡಿಯಾ ಸೌತ್ 2017 ಗ್ರಾಂಡ್ ಫಿನಾಲೆಗೆ ರಾಜ್ಯದಿಂದ ರುಹಿಕಾ ದಾಸ್

ಎಫ್ ಬಿ ಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ದಕ್ಷಿಣ – 2017 ಸಮಾರಂಭವು ಬೆಂಗಳೂರಿನ ಹೊಟೇಲ್ ಕ್ರೌನ್ ಪ್ಲಾಜಾ ದಲ್ಲಿ ಮುಕ್ತಾಯವಾಯಿತು.
ಸೃಷ್ಠಿ ವ್ಯಾಕರಣಂ, ಶೆರಿನ್ ಸೆಠ್, ಸಿಮ್ರನ್ ಚೌಧರಿ, ಮನ್ನತ್ ಸಿಂಗ್, ರುಹಿಕಾ ದಾಸ್
ಸೃಷ್ಠಿ ವ್ಯಾಕರಣಂ, ಶೆರಿನ್ ಸೆಠ್, ಸಿಮ್ರನ್ ಚೌಧರಿ, ಮನ್ನತ್ ಸಿಂಗ್, ರುಹಿಕಾ ದಾಸ್
Updated on: 

ಬೆಂಗಳೂರು: ಎಫ್ ಬಿ ಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ದಕ್ಷಿಣ – 2017  ಸಮಾರಂಭವು ಅದ್ಭುತ ರೋಮಾಂಚಕ ಅನುಭವದೊಡನೆ ಬೆಂಗಳೂರಿನ ಹೊಟೇಲ್ ಕ್ರೌನ್ ಪ್ಲಾಜಾ ದಲ್ಲಿ ಮುಕ್ತಾಯವಾಯಿತು. ಈ ಫಿನಾಲೆಗೆ ಇದೊಂದು ಅದ್ಭುತ ಆತಿಥ್ಯದ ನೆಲೆಯಾಗಿತ್ತು. ಭಾರತದ ಅತಿ ಪ್ರತಿಷ್ಟಿತ ಮತ್ತು ವಿಶ್ವಾಸ ಗಳಿಸಿರುವ ಈ ಸೌಂದರ್ಯ ಸ್ಪರ್ಧೆಯು ದಕ್ಷಿಣ ವಲಯದ ೫ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣಗಳ ವಿಜೇತರನ್ನು ಆಯ್ಕೆ ಮಾಡಿದೆ. ಇದು ಜೂನ್ 2017 ರಲ್ಲಿ ನಡೆಯಲಿರುವ ಎಫ್ ಬಿಬಿ ಕಲರ್ಸ್ ಫೆಮಿನಾ ಸ್ಫರ್ಧೆಗೆ ಗ್ರ್ಯಾಂಡ್ ಫಿನಾಲೆಗೆ ನೇರ ಪ್ರವೇಶ ಗಿಟ್ಟಿಸುವ ಅವಕಾಶವಾಗಿದೆ.

ಈ ಸ್ಫರ್ಧೆಯಲ್ಲಿ ಬಾಲೆಯರು 3 ಕ್ಲಿಷ್ಟಕರ ಸುತ್ತುಗಳಲ್ಲಿ ಭಾಗವಹಿಸಿದ್ದರು.
•    ಮಾಡರ್ನ್ ಇಂಡಿಯಾ ಸುತ್ತು: ಈ ಮೊದಲ ಸುತ್ತಿನಲ್ಲಿ ಹುಡುಗಿಯರು ಮನಸೂರೆಗೊಂಡ ದಿರುಸುಗಳಲ್ಲಿ ಕಂಗೊಳಿಸಿದ್ದು, ಖ್ಯಾತ ವಿನ್ಯಾಸಕ ಶರವಣ್ ಕುಮಾರ್ ಇದನ್ನು ರಾಜ ಪೋಷಾಕಿನಂತೆ ಅದ್ಭುತವಾಗಿ ರೂಪಿಸಿದ್ದರು.
•    ಎಫ್ ಬಿ ಬಿ ಸುತ್ತು:  ಈ ಸುತ್ತಿನಲ್ಲಿ ಹುಡುಗಿಯರು ಎಫ್ ಬಿಬಿ ಪೋಷಾಕನ್ನು ಧರಿಸಿ ನೆರೆಮನೆಯ ಸುಂದರಿಯರೇ ಅಪ್ಸರೆಯರಂತೆ  ಶೋಭಿಸಿದರು. ಈ ಸಂಗ್ರಹವನ್ನು ವಿನ್ಯಾಸಕಾರರು ಇತ್ತೀಚಿನ ಶೈಲಿಯನ್ನು ಗಮನದಲ್ಲಿರಿಸಿ ಆಧುನಿಕ ಭಾರತದ ನಾರಿಯರ ಮನದಾಸೆಯನ್ನರಿತು ರೂಪಿಸಿದ್ದರು. ಈ ಸಂಗ್ರಹದಲ್ಲಿ ಭಾರತ ಸಂಜಾತ ಹೋಲಿ ಬ್ಯಾಗುಗಳು ನಮ್ಮ ವರ್ಣರಂಜಿತ ಸಂಸ್ರ್ಕ್ರುತಿ, ಉಲ್ಲಾಸ, ಉತ್ಸಾಹ ಮತ್ತು ಸಂಭ್ರಮವನ್ನು ಮೆರೆದವು.
•    ಈವೆನಿಂಗ್ ಗೌನ್ ಸುತ್ತು: ಭಾವನಾ ರಾವ್ ಅವರು ವಿನ್ಯಾಸಪಡಿಸಿದ್ದ ಸ್ವರ್ಣಾರಣ್ಯ – ಗೋಲ್ಡ್ ಫಾರೆಸ್ಟ್ ಸಂಗ್ರಹವನ್ನು ಹುಡುಗಿಯರು ತೊಟ್ಟು ಅನಂತ ವಿಶ್ವದ ತಾರೆಗಳಂತೆ, ನಕ್ಷತ್ರ ಪುಂಜಗಳಂತೆ  ಬಾನಿನ ಬೆಳಕಿನ ವೈಭವವನ್ನು ಪ್ರದರ್ಶಿಸಿದರು.

ಇದೇ ಮೊದಲ ಬಾರಿಗೆ ಈ ಸೌಂದರ್ಯ ಸ್ಫರ್ಧೆಯು ಪ್ರತಿ ವಲಯಕ್ಕೂ ಸ್ಪರ್ಧಿಗಳಿಗೆ  ಅವರಿಗೆ ಸೂಕ್ತವೆನಿಸಿದ ರೀತಿಯಲ್ಲಿ ಮಾರ್ಗ ದರ್ಶನ ಮಾಡುವ ವ್ಯವಸ್ಥೆಯಿತ್ತು. ದಕ್ಷಿಣ ವಲಯದ ಕಾರ್ಯನಿರ್ವಹಣೆಯನ್ನು ಮಿಸ್  ವರ್ಲ್ಡ್ ೨೦೦೮ ರನರಪ್  ಖ್ಯಾತಿಯ ಸೌಥ್ ಸಿರೆನ್ ಎಂದೇ ಹೆಸರಾಗಿರುವ ತಾರೆ ಮತ್ತು ರೂಪದರ್ಶಿ ಪಾರ್ವತಿ ಓಮನಕುಟ್ಟನ್ ಅವರು ನಡೆಸಿಕೊಟ್ಟರು.

ವಿಜೇತರ ಹೆಸರು --- ರಾಜ್ಯ
ರುಹಿಕಾ ದಾಸ್ --- ಕರ್ನಾಟಕ
ಸೃಷ್ಠಿ ವ್ಯಾಕರಣಂ --- ಆಂಧ್ರಪ್ರದೇಶ
ಶೆರಿನ್ ಸೆಠ್ --- ತಮಿಳುನಾಡು
ಮನ್ನತ್ ಸಿಂಗ್ --- ಕೇರಳ
ಸಿಮ್ರನ್ ಚೌಧರಿ --- ತೆಲಂಗಾಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com