ಬೆಂಗಳೂರು: ರಿಸರ್ವ್ ಬ್ಯಾಂಕ್ ಅನಾಣ್ಯೀಕರಗೊಳಿಸಿ ನಾಲ್ಕು ತಿಂಗಳುಗಳು ಕಳೆದ ನಂತರ ನಿಧಾನವಾಗಿ ವ್ಯಾಪಾರಸ್ಥರು ಮತ್ತು ಗ್ರಾಹಕರು ಇ-ವ್ಯಾಲೆಟ್ ನಿಂದ ನಗದು ವಹಿವಾಟಿನತ್ತ ಮರಳುತ್ತಿದ್ದಾರೆ.
ಹಳೆಯ 500 ಮತ್ತು 1000ದ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡ ನಂತರ ಜನರು ಹೆಚ್ಚೆಚ್ಚು ನಗದುರಹಿತ ವಹಿವಾಟು ನಡೆಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸುತ್ತಿದ್ದರೂ ಕೂಡ, ಕಳೆದ ಕೆಲ ವಾರಗಳಿಂದ ನಗದು ಸರಾಗವಾಗಿ ಬರುತ್ತಿರುವುದರಿಂದ ನಗದು ವಹಿವಾಟಿನತ್ತಲೇ ಮುಖ ಮಾಡುತ್ತಿದ್ದಾರೆ.
ಕ್ರೆಡಿಟ್, ಡೆಬಿಟ್ ಕಾರ್ಡುಗಳಿಗೆ ಶುಲ್ಕ ಹೇರಿಕೆ, ವಹಿವಾಟಿನಲ್ಲಿ ಆಗಾಗ ಉಂಟಾಗುತ್ತಿರುವ ವೈಫಲ್ಯ, ಕಂಪ್ಯೂಟರ್ ಸರ್ವರ್ ಸಮಸ್ಯೆ ಮೊದಲಾದವುಗಳಿಂದಾಗಿ ಜನರಿಗೆ ನಗದು ವಹಿವಾಟು ಸುಲಭವಾಗಿ ಕಾಣುತ್ತಿದೆ.
ಇನ್ನು ಕೆಲ ವ್ಯಾಪಾರಿಗಳು ನಗದುರಹಿತ ವಹಿವಾಟಿಗೆ ಅಷ್ಟೊಂದು ಒಲವು ತೋರುತ್ತಿಲ್ಲ ಎನ್ನುತ್ತಾರೆ ಗ್ರಾಹಕರು. ಮಾರಾಟ ಸುಗಮ ಪಾಯಿಂಟ್ ಗಳನ್ನು ಅನೇಕ ಅಂಗಡಿಗಳು ಹೊಂದಿದ್ದರೂ ಕೂಡ ಪ್ರತಿ ವಹಿವಾಟಿಗೆ ಬ್ಯಾಂಕು ಶುಲ್ಕ ಹೇರುವುದರಿಂದ ನಮ್ಮಲ್ಲಿ ಅಂಗಡಿಯವರು ಶೇಕಡಾ 3ರಷ್ಟು ಹೆಚ್ಚಿನ ಶುಲ್ಕ ವಿಧಿಸುವಂತೆ ಹೇಳುತ್ತಾರೆ. ನಾವು ಹೆಚ್ಚು ಹಣ ನೀಡಬೇಕಾದರೆ ಕಾರ್ಡು ಏಕೆ ಬಳಸಬೇಕು? ಎಂದು ಬೆಂಗಳೂರಿನ ಇಂದಿರಾ ನಗರದ ನಿವಾಸಿ ರಶ್ಮಿ ಎಸ್ ಕೇಳುತ್ತಾರೆ.
ಇನ್ನೊಂದೆಡೆ, ಸರ್ಕಾರ ವಹಿವಾಟು ಶುಲ್ಕವನ್ನು ತೆಗೆದುಹಾಕುವಂತೆ ವ್ಯಾಪಾರಿಗಳು ಸರ್ಕಾರವನ್ನು ಒತ್ತಾಯಿಸುತ್ತಾರೆ. ಸರ್ಕಾರ ನಗದುರಹಿತ ವಹಿವಾಟನ್ನು ಪ್ರೋತ್ಸಾಹಿಸುತ್ತದೆ ಎಂದಾದರೆ ಅದು ಬ್ಯಾಂಕುಗಳಿಗೆ ಜನರ ಹತ್ತಿರ ಹೆಚ್ಚು ವಹಿವಾಟು ವೆಚ್ಚವನ್ನು ಹೇರದಂತೆ ಆದೇಶ ನೀಡಬೇಕು. ನಮ್ಮ ಲಾಭ ಈಗಾಗಲೇ ಕಡಿಮೆಯಾಗಿರುತ್ತದೆ ಎನ್ನುತ್ತಾರೆ ಮಡಿವಾಳದ ಅಂಗಡಿಯೊಂದರ ಮಾಲೀಕ ಕೆ.ರಮೇಶ್. ವಹಿವಾಟುಗಳಲ್ಲಿ ವೈಫಲ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಕೆಲವು ಅಂಗಡಿ ಮಾಲೀಕರು ಸಂದೇಹದಲ್ಲಿದ್ದಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಮ್ ಹೇಳುವ ಪ್ರಕಾರ, ಅನಾಣ್ಯೀಕರಣ ಖಾಸಗಿ ಡಿಜಿಟಲ್ ವಾಲೆಟ್ ಕಂಪೆನಿಗಳಿಗೆ ಮಾತ್ರ ಲಾಭವಾಗಿದೆ. ನಗದುರಹಿತ ವಹಿವಾಟಿನಿಂದ ಅನೇಕ ಲಾಭಗಳಿದ್ದರೂ ಕೂಡ ಹೆಚ್ಚಿನ ಡಿಜಿಟಲ್ ನಗದು ವಾಲೆಟ್ ಗಳು ಅಷ್ಟು ಸುರಕ್ಷಿತವಲ್ಲ ಎನ್ನುತ್ತಾರೆ.