ಕೆಜಿಎಫ್‌ನ ಉರಿಗಂಪೇಟೆಯ ಮಂಜುನಾಥ್ ನಗರದಲ್ಲಿ ಸುಮಾರು 80 ಅಡಿ ಆಳ ಮತ್ತು ೧೦ ಅಡಿ ಅಗಲದ ಗುಂಡಿಯೊಂದು ಏಕಾಏಕಿ ನಿರ್ಮಾಣವಾಗಿದ್ದು, ಇಲ್ಲಿ ಭೂಕಂಪ ಸಂಭವಿಸಿದೆ ಎಂದು ಸ್ಥಳೀಯರು ಆತಂಕಗೊಂಡಿದ್ದರು. ಆದರೆ ಭೂಕಂಪನ ಅಳೆಯುವ ಎನ್‌ಐಆರ್‌ಎಂ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿ, ಇಲ್ಲಿ ಯಾವುದೇ ಭೂಕಂಪನ ನಡೆದಿಲ್ಲ. ಅದು ಮಳೆಯಿಂದಾಗಿ ಗುಂಡಿ ನಿರ್ಮಾಣವಾಗಿದೆ ಎಂದು ಸ್ಪಷ್ಟಪಡಿಸಿದೆ.