ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ನಿವಾಸದ ಮೇಲೂ ಐಟಿ ದಾಳಿ!

ತಮಿಳುನಾಡಿನಲ್ಲಿರುವ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಇತ್ತ ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ಅವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ನಡೆಸಿದ್ದಾರೆ.
ದೊಮ್ಮಲೂರಿನಲ್ಲಿರುವ ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ನಿವಾಸ
ದೊಮ್ಮಲೂರಿನಲ್ಲಿರುವ ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ನಿವಾಸ
ಬೆಂಗಳೂರು: ಅತ್ತ ತಮಿಳುನಾಡಿನಲ್ಲಿರುವ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಇತ್ತ ಎಐಎಡಿಎಂಕೆ ಕರ್ನಾಟಕ ಘಟಕದ  ಉಸ್ತುವಾರಿ ಪುಗಳೆಂದಿ ಅವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ನಡೆಸಿದ್ದಾರೆ.
ಬೆಂಗಳೂರಿನ ದೊಮ್ಮಲೂರು ಪ್ರದೇಶದಲ್ಲಿರುವ ಪುಗಳೆಂದಿ ನಿವಾಸದಲ್ಲಿ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. 
ಇನ್ನು ಅತ್ತ ಚೆನ್ನೈನಲ್ಲಿ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ಒಟ್ಟು 11 ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರ ಆಪ್ತೆಯಾಗಿದ್ದ ವಿಕೆ ಶಶಿಕಲಾ ಮತ್ತು  ಅವರ ಆಪ್ತರು, ಸಂಬಂಧಿಕರಿಗೆ ಸಂಬಂಧಿಸಿದ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆದಿದ್ದು, ಜಯಾ ಟಿವಿ, ಜ್ಯಾಝ್ ಸಿನಿಮಾ ಸೇರಿದಂತೆ ಒಟ್ಟು 11 ಪ್ರದೇಶಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಡೆಸಿ ದಾಖಲೆಗಳ  ಶೋಧ ನಡೆಸಿದ್ದಾರೆ.
ಮೂಲಗಳ ಪ್ರಕಾರ ಆದಾಯ ತೆರಿಗೆ ವಂಚನೆ ಸಂಬಂಧ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇದರೊಂದಿಗೆ ಅಕ್ರಮ ಆಸ್ತಿ ಸಂಬಂಧವೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ  ತೊಡಗಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com