2018 ರ ಬಿಜೆಪಿ ಚುನಾವಣಾ ಪ್ರಣಾಳಿಕೆಗೆ ಸಾರ್ವಜನಿಕರೂ ನೀಡಬಹುದು ಸಲಹೆ

Published On :
ಬೆಂಗಳೂರು: 2018ರ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ 17 ಮಂದಿ ಸದಸ್ಯರ ಪ್ರಣಾಳಿಕೆ ಸಮಿತಿ ರಚಿಸಿದೆ.
ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿ ಹೊಂದಿರುವ ಮಾಜಿ ಸಚಿವ ಸುರೇಶ್ ಕುಮಾರ್ ಪ್ರಣಾಳಿಕೆಯ ಅಂಶಗಳಿಗಾಗಿ ಸಾರ್ವಜನಿಕರಿಂದ ಸಲಹೆ ಪಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣದ ಖಾತೆಯಲ್ಲಿ ಬರೆದಿರುವ ಸುರೇಶ್ ಕುಮಾರ್, ನಮ್ಮ ಪ್ರಣಾಳಿಕೆ "ಸರ್ವ ಸ್ಪರ್ಷಿ-ಸರ್ವ ವ್ಯಾಪಿ" ಆಗಿ ನಾಡಿನ ಎಲ್ಲಾ ಕ್ಷೇತ್ರದ, ವರ್ಗಗಳ ಆಶೋತ್ತರಗಳನ್ನು ಪ್ರತಿಬಿಂಬಿಸಬೇಕೆನ್ನುವುದು ನಮ್ಮ ಹಂಬಲ. ಇದು "ನವ ಕರ್ನಾಟಕ" ನಿರ್ಮಾಣದ ದಿಕ್ಕಿನಲ್ಲಿ ನಾಡಿನ ಜನತೆಯ ಪ್ರಣಾಳಿಕೆ (ಜನರಿಂದ ಜನರಿಗಾಗಿ ಜನರ ಮೂಲಕ) ಆಗಬೇಕೆನ್ನುವುದು ನಮ್ಮ ಹೆಬ್ಬಯಕೆ. ಈ ಪ್ರಣಾಳಿಕೆಗೆ ನೀವೆಲ್ಲಾ ನಿಮ್ಮ ಕೊಡುಗೆಯನ್ನು ಸಲಹೆಗಳ ಮೂಲಕ ನೀಡಬೇಕು" ಎಂದು ಸಾರ್ವಜನಿಕರಿಗೆ ನಮ್ಮ ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ ಚುನಾವಣೆಯ ಸಮಯದಲ್ಲಿ ಅವಸರದಿಂದ ಕೂಡಿದ ಕಾರ್ಯ ಮಾಡಿ ಚುನಾವಣಾ ಪ್ರಣಾಳಿಕೆ ತಯಾರಿಸಿ ಮಾಧ್ಯಮಗಳ ಮೂಲಕ ಪ್ರಣಾಳಿಕೆ ಬಿಡುಗಡೆ ಮಾಡುವ ಯಾಂತ್ರಿಕ ಪದ್ಧತಿ ನಡೆದುಕೊಂಡು ಬಂದಿರುವುದಕ್ಕೆ ಇದು ಸಂಪೂರ್ಣ ಭಿನ್ನವಾಗಿರಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


