ಡಿಪಿಎಸ್ ವಿದ್ಯಾರ್ಥಿಗಳಿಂದ 25 ಲಕ್ಷ ರೂ. ದೇಣಿಗೆ ಸಂಗ್ರಹ: ಹಿರಿಯ ನಾಗರಿಕರಿಗೆ ದೃಷ್ಟಿ ಭಾಗ್ಯ

ಸರಳವಾದ ಕ್ಯಾಟರ್ಯಾಕ್ಟ್ ಸರ್ಜರಿಗೂ ಹಣ ಹೊಂದಿಸಲಾಗದೇ ಅದೆಷ್ಟೋ ಹಿರಿಯ ನಾಗರಿಕರು ದೃಷ್ಟಿಯನ್ನು ಕಳೆದುಕೊಂಡು ಬದುಕುತ್ತಿದ್ದಾರೆ.
ಡಿಪಿಎಸ್ ಶಾಲಾ ವಿದ್ಯಾರ್ಥಿಗಳ ತಂಡ
ಡಿಪಿಎಸ್ ಶಾಲಾ ವಿದ್ಯಾರ್ಥಿಗಳ ತಂಡ
Updated on: 

ಬೆಂಗಳೂರು: ದೃಷ್ಟಿಗಿಂತ ದೊಡ್ಡ ಉಡುಗೊರೆ ಯಾವುದಿದೆ? ದುರದೃಷ್ಟವಶಾತ್ ಸರಳವಾದ ಕ್ಯಾಟರ್ಯಾಕ್ಟ್ ಸರ್ಜರಿಗೂ ಹಣ ಹೊಂದಿಸಲಾಗದೇ ಅದೆಷ್ಟೋ ಹಿರಿಯ ನಾಗರಿಕರು ದೃಷ್ಟಿಯನ್ನು ಕಳೆದುಕೊಂಡು ಬದುಕುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರಕರಣಕ್ಕೆ ಅನುಗುಣವಾಗಿ ಒಂದು ಕ್ಯಾಟರ್ಯಾಕ್ಟ್ ಸರ್ಜರಿಯ ವೆಚ್ಚ ಅಂದಾಜು 8000ರಿಂದ 12000 ರೂ.ಗಳಷ್ಟಿದೆ. ವಿದೇಶಿ ಲೆನ್ಸ್‍ಗಳನ್ನು ಬಳಸಿದರೆ ಇದರ ವೆಚ್ಚ 40000 ರೂ.ಗಳಾಗಬಹುದು.

ಆದರೆ ರೋಟರಿ ಬೆಂಗಳೂರು ಇಂದಿರಾನಗರ (ಆರ್‍ಬಿಐ) ಮತ್ತು ಗ್ಲೋಬ್ ಐ ಫೌಂಡೇಷನ್‍ ನಂಥ ಸೇವಾ ಸಂಸ್ಥೆಗಳ ನೆರವಿನಿಂದಾಗಿ ಕ್ಯಾಟರ್ಯಾಕ್ಟ್ ಸರ್ಜರಿಯ ವೆಚ್ಚ 3,800 ರೂ.ಗಳಿಗೆ ಇಳಿದಿದೆ. ಈ 3,800 ರೂ.ಗಲ್ಲಿ ಸರಕಾರದ ಸಹಾಯಧನ ಮತ್ತು ಇತರ ಸರ್ಜರಿಗಳಿಂದ ಆದಾಯ ಸುಮಾರು 2,800 ರೂ.ಗಳಷ್ಟಾಗುತ್ತದೆ. ಉಳಿದ 1000 ರೂ.ಗಳನ್ನು ಡಿಪಿಎಸ್ ಈಸ್ಟ್ ಮತ್ತು ಡಿಪಿಎಸ್ ಇ ಸಿಟಿ ಶಾಲೆಗಳ ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ 20000 ರೂ.ಗಳಷ್ಟು ಹಣವನ್ನು ಸಂಗ್ರಹಿಸಿದ್ದು, ಹೊಸಕೋಟೆ, ಕೋಲಾರ ಮತ್ತು ಚಿಂತಾಮಣಿಯಲ್ಲಿರುವ 20 ಹಿರಿಯ ನಾಗರಿಕರ ಸರ್ಜರಿಗಳಿಗೆ ನೆರವಾಗಿದ್ದಾರೆ. ಈ ವಿದ್ಯಾರ್ಥಿಗಳು 12 ವರ್ಷ ವಯಸ್ಸಿನ ಆಸುಪಾಸಿನಲ್ಲಿದ್ದು, ಕೆಲವು ವಿದ್ಯಾರ್ಥಿಗಳಂತೂ ಒಂದು ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ.

ಡಿಪಿಎಸ್ ಇ ಸಿಟಿ ಶಾಲೆಯ ಆಂದೋಲನ (DPS E-City campaign) ಕೊನೆಗೊಂಡಿದ್ದು, ವಿದ್ಯಾರ್ಥಿಗಳು 8.24 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದಾರೆ. ಡಿಪಿಎಸ್ ಈಸ್ಟ್ ಶಾಲೆಯ ಆಂದೋಲನ (DPS East campaign) ಇನ್ನೂ ಮುಂದುವರೆದಿದ್ದು ಇದುವರೆಗೆ 16.1 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ.

ಶಾಲೆಗಳು, FuelADream.com ಫುಯೆಲ್‍ಅಡ್ರೀಮ್ ಡಾಟ್ ಕಾಮ್ ನಂತಹ ದೇಣಿಗೆ ಸಂಗ್ರಹ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನೊಳಗೊಂಡ ಪಾಲುದಾರರ ನಡುವೆ ಸಹಯೋಗದ ವಿಶಿಷ್ಟ ಪರಿಕಲ್ಪನೆಯ ಸಮಾಜಸೇವೆ ಇದೆನಿಸಿಕೊಂಡಿದೆ. ಭಾರತದಲ್ಲಿ ವಿದ್ಯಾರ್ಥಿಗಳು ನಡೆಸಿದ ಅತಿದೊಡ್ಡ ಸಮಾಜ ಸೇವಾ ಆಂದೋಲನ ಇದಾಗಿದ್ದು, ವಿದ್ಯಾರ್ಥಿಗಳಿಗೆ ಡಿಪಿಎಸ್ ವಿಶೇಷ ಅವಕಾಶವೊಂದನ್ನು ಕಲ್ಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com