ಪೊಲೀಸ್ ಅಧಿಕಾರಿಯ ಹೆಸರಲ್ಲಿ ಗುರುತಿನ ಚೀಟಿ ಬಳಸಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ

ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿ ಖಾಸಗಿ ಸಂಸ್ಥೆಗಳಿಗೆ ಭದ್ರತಾ ವ್ಯವಸ್ಥೆ ಪರಿಶೀಲನೆ ನೆಪದಲ್ಲಿ ನುಗ್ಗಿ ಕಳ್ಳತನ ಮಾಡುತ್ತಿದ್ದ ಎಂಬಿಎ ಪದವೀಧರ ಸೇರಿ ಇಬ್ಬರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು...
ಬಂಧಿತ ಆರೋಪಿ ಇರ್ಫಾನ್ ಪಾಷಾ
ಬಂಧಿತ ಆರೋಪಿ ಇರ್ಫಾನ್ ಪಾಷಾ
Updated on
ಬೆಂಗಳೂರು: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿ ಖಾಸಗಿ ಸಂಸ್ಥೆಗಳಿಗೆ ಭದ್ರತಾ ವ್ಯವಸ್ಥೆ ಪರಿಶೀಲನೆ ನೆಪದಲ್ಲಿ ನುಗ್ಗಿ ಕಳ್ಳತನ ಮಾಡುತ್ತಿದ್ದ ಎಂಬಿಎ ಪದವೀಧರ ಸೇರಿ ಇಬ್ಬರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಬಿಟಿಎ ಲೇಔಟ್ 1ನೇ ಹಂತದ ಇರ್ಫಾನ್ ಪಾಷಾ ಹಾಗೂ ಕೋಲಾರದ ಅರ್ಬಾಜ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ. 
ಎಂಬಿಎ ಪದವೀಧರನಾಗಿದ್ದ ಪಾಷಾ ನಿರುದ್ಯೋಗಿಯಾಗಿದ್ದ. ಪೊಲೀಸ್ ಅಧಿಕಾರಿಯ ಉದ್ಯೋಗದ ಮೇಲೆ ಆಕರ್ಷಿತವಾಗಿದ್ದ ಪಾಷಾ, ನಕಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿ ಸುಲಭವಾಗಿ ಹಣ ಮಾಡಲು ನಿರ್ಧರಿಸಿದ್ದ. ಇದರಂತೆ ವಿಧಾನಸೌಧದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಸಂಬಂಧಿಕನೊಬ್ಬನ ಬಳಿಯಿದ್ದ ವಿಸಿಟಿಂಗ್ ಕಾರ್ಡ್ ಕಳ್ಳತನ ಮಾಡಿದ್ದ ಪಾಷಾ, ಮತ್ತೊಂದು ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿ ಅದರಲ್ಲಿ ಪೊಲೀಸ್ ಅಧಿಕಾರಿ ವೇಷದಲ್ಲಿರುವ ತನ್ನ ಫೋಟೋ, ಕರ್ನಾಟಕ ಸರ್ಕಾರದ ಲೋಗೋ, ಕಮೀಷನರ್ ಅವರ ಆಪ್ತ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಎಂಬ ವಿವರಗಳನ್ನು ಕಾರ್ಡ್ ನಲ್ಲಿ ಮುದ್ರಿಸಿದ್ದ. ಅಲ್ಲದೆ, ವಿಧಾನಸೌಧದ ಮೊದಲನೇ ಮಹಡಿಯಲ್ಲಿ (ಕೊಠಡಿ ಸಂಖ್ಯೆ 101) ತನ್ನ ಕಚೇರಿ ಇದ್ದು, ತನ್ನ ಸಂಪರ್ಕಿಸುವ ದೂರವಾಣಿ ಸಂಖ್ಯೆಗಳು ಹಾಗೂ ಇಮೇಲ್ ವಿಳಾಸವನ್ನು ಸಹ ಕಾರ್ಡ್ ನಲ್ಲಿ ವಿವರಿಸಿದ್ದ.

ಕೋರಮಂಗಲದ ಕೈಗಾರಿಕಾ ಪ್ರದೇಶದಲ್ಲಿ ಜಸ್ಟ್ ಡಯಲ್ ಕಂಪನಿಗೆ ಸೆ.16ರಕ ನಸುಕಿನ 2.30ರ ಸುಮಾರಿಗೆ ಪೊಲೀಸ್ ಸಮವಸ್ತ್ರದಲ್ಲಿ ಅಲ್ಲಿಗೆ ಹೋಗಿದ್ದ ಆರೋಪಿಗಳು, ನಾವು ಪೊಲೀಸ್ ಕಮಿಷನರ್, ನಿಮ್ಮ ಕಂಪನಿಯಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎಂದು ಸೆಕ್ಯೂರಿಟಿ ಗಾರ್ಡ್ ಗೆ ತಿಳಿಸಿದ್ದಾರೆ. 

ಈ ಮಾತನ್ನು ನಂಬಿದ ಸೆಕ್ಯುರಿಟಿ ಗಾರ್ಡ್, ಕಂಪನಿಯ ಕೀಗಳನ್ನು ಅವರಿಗೆ ನೀಡಿದ್ದಾನೆ. ಆನಂತರ ಒಳ ಹೋಗಿ ಕೈಗಡಿಯಾರ ಹಾಗೂ5 ಮೊಬೈಲ್ ಗಳನ್ನು ದೋಚಿದ ಆರೋಪಿಗಳು, ಪರಿಶೀಲನೆ ಮುಗಿಯಿತು. ನಾವಿನ್ನು ಹೊರಡುತ್ತೇವೆಂದು ಹೇಳಿ ಕೀ ಕೊಟ್ಟು ಹೊರಟು ಹೋಗಿದ್ದಾರೆ. 

ಈ ನಡೆ ಬಗ್ಗೆ ಶಂಕೆಗೊಂಡ ಕಾವಲುಗಾರ, ಕಂಪನಿ ಪ್ರಧಾನ ವ್ಯವಸ್ಥಾಪಕ ಎಂ.ನೂರುದ್ದೀನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಅವರು ಕಂಪನಿಗೆ ಬಂದು ಪರಿಶೀಲಿಸಿದಾಗ ಕಳ್ಳತನ ಸಂಗತಿ ಬೆಳಕಿಗೆ ಬಂದಿದೆ. ಬಳಿಕ ಕೋರಮಂಗಲ ಪೊಲೀಸಾ ಠಾಣೆಗೆ ದೂರು ನೀಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. 

ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಗಳ ವಿರುದ್ಧ ದರೋಡೆ ಪ್ರಕರಣವನ್ನು ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com