ವಿಧಾನಸೌಧ ವಜ್ರಮಹೋತ್ಸವ: ಮುರಿದ ಟೈಲ್ಸ್, ಮೇಲ್ಛಾವಣಿ ಸೋರಿಕೆ ಸೇರಿ ಹಲವು ವೈಫಲ್ಯಗಳು!

ರೂ.27 ಕೋಟಿ ವೆಚ್ಚದಲ್ಲಿ ಅದ್ದೂರಿ ಆಚರಣೆ ಪ್ರಸ್ತಾವದಿಂದಾಗಿ ವಿವಾದದಿಂದಲೇ ಆರಂಭಗೊಂಡಿದ್ದ ವಿಧಾನಸೌಧ ಕಟ್ಟಡದ ವಜ್ರಮಹೋತ್ಸವ ಬುಧವಾರ ಹಲವು ಸಮಸ್ಯೆಗಳು, ಎಡವಟ್ಟುಗಳೊಂದಿಗೆ ಪರ್ಯವಸಾನಗೊಂಡಿತು...
ವಿಧಾನಸೌಧ ವಜ್ರಮಹೋತ್ಸವದಲ್ಲಿ ಅತಿಥಿಗಳ ಸ್ವಾಗತಿಸಿದ ಮುರಿದ ಟೈಲ್ಸ್ ಗಳು, ಸೋರುತ್ತಿವ ಮೇಲ್ಛಾವಣಿ!
ವಿಧಾನಸೌಧ ವಜ್ರಮಹೋತ್ಸವದಲ್ಲಿ ಅತಿಥಿಗಳ ಸ್ವಾಗತಿಸಿದ ಮುರಿದ ಟೈಲ್ಸ್ ಗಳು, ಸೋರುತ್ತಿವ ಮೇಲ್ಛಾವಣಿ!
Updated on: 

ಬೆಂಗಳೂರು: ರೂ.27 ಕೋಟಿ ವೆಚ್ಚದಲ್ಲಿ ಅದ್ದೂರಿ ಆಚರಣೆ ಪ್ರಸ್ತಾವದಿಂದಾಗಿ ವಿವಾದದಿಂದಲೇ ಆರಂಭಗೊಂಡಿದ್ದ ವಿಧಾನಸೌಧ ಕಟ್ಟಡದ ವಜ್ರಮಹೋತ್ಸವ ಬುಧವಾರ ಹಲವು ಸಮಸ್ಯೆಗಳು, ಎಡವಟ್ಟುಗಳೊಂದಿಗೆ ಪರ್ಯವಸಾನಗೊಂಡಿತು. 

ರಾಜ್ಯದ ಇತಿಹಾಸದಲ್ಲಿಯೇ ಸ್ಮರಣೀಯವಾಗಬೇಕಿದ್ದ ಕಾರ್ಯಕ್ರಮ ಶೌಚಾಲಯ ಸಮಸ್ಯೆ, ಭದ್ರತಾ ವ್ಯವಸ್ಥೆ ವೈಫಲ್ಯ, ಗೊಂದಲಗಳಿಂದ ಪರದಾಡುವಂತಾಗಿತ್ತು. ಮುರಿದ ಟೈಲ್ಸ್ ಗಳು, ಸೋರುತ್ತಿರುವ ಮೇಲ್ಛಾವಣಿಗಳು ಅಥಿತಿಗಳನ್ನು ಸ್ವಾಗತಿಸಿತು. 

ಕೇವಲ ಮೇಲ್ನೋಟಕ್ಕೆ ವಿಧಾನಸೌಧ ವಜ್ರಮಹೋತ್ಸವ ಅದ್ದೂರಿಯಾಗಿ ಕಂಡು ಬಂದಂತಿತ್ತು. ಅದ್ದೂರಿ ಕಾರ್ಯಕ್ರಮಕ್ರಮಕ್ಕೆ ರೂ.10 ಕೋಟಿ ವೆಚ್ಚ ಮಾಡಿರುವ ಸರ್ಕಾರರ ಕೇವಲ ಹೊರಾಂಗಣ ಅಲಂಕಾರಕ್ಕಷ್ಟೇ ಮಹತ್ವವನ್ನು ನೀಡಿರುವುದು ಇದರಿಂದ ಬಹಿರಂಗಗೊಂಡಿದೆ. 

ವಿಧಾನಸೌಧದಲ್ಲಿರುವ ಶೌಚಾಲಯಗಳು ಕೆಲವು ಕಾರ್ಯನಿರ್ವಹಣೆಯಲ್ಲಿದ್ದರೆ, ಇನ್ನು ಶೌಚಾಲಯಗಳು ಕೆಟ್ಟ ಪರಿಸ್ಥಿತಿಯಲ್ಲಿದ್ದವು. ಇದರಿಂದ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ನೂರಾರು ಜನರು ಶೌಚಾಲಯಗಳಿಲ್ಲದೆ ಸಂಕಷ್ಟ ಎದುರಿಸುವಂತಾಗಿತ್ತು. 

ವಿಧಾನಸೌಧರಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಮಂಡಳಿಯ ಸದಸ್ಯರೊಬ್ಬರು ಮಾತನಾಡಿ, ವಿಧಾನಸೌಧದಲ್ಲಿರುವ ಶೌಚಾಲಯಗಳು ಬಹಳ ಕೆಟ್ಟದಾಗಿ ನಿರ್ವಹಣೆ ಮಾಡಲಾಗಿದೆ. ಮಾಲ್ ಗಳಲ್ಲಿರುವ ಶೌಚಾಲಯಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಹೋದರೂ ಆ ಶೌಚಾಲಯಗಳು ಸ್ವಚ್ಛವಾಗಿರುತ್ತದೆ. ಆದರೆ, ವಿಧಾನಸೌಧದ ಶೌಚಾಲಯಗಳ ಪರಿಸ್ಥಿತಿ ಏಕೆ ಹೀಗೆದೆ? ಎಂದು ಪ್ರಶ್ನಿಸಿದ್ದಾರೆ. 

ಇನ್ನು ನೆಲ ಮಹಡಿಯಲ್ಲಿರುವ ಮಹಿಳೆಯರ ಶೌಚಾಲಯ ಪರಿಸ್ಥಿತಿಗಳಂತೂ ಹೇಳ ತೀರದ ಪರಿಸ್ಥಿತಿಯಲ್ಲಿವೆ. ಒಡೆದಿರುವ ಟ್ಯಾಪ್ ಗಳು, ಮುರಿದ ಕೊಳವೆಗಳು ಕಂಡು ಬರುತ್ತಿವೆ. ಇನ್ನು ಬ್ಯಾಂಕ್ವೆಟ್ ಹಾಲ್ ಬಳಿಯಿರುವ ಶೌಚಾಲಯವಂತೂ ಕೊಳೆತು ನಾರುತ್ತಿವೆ.

ನಾವೇನು ಮಾಡಲು ಸಾಧ್ಯೆ? ವಿಧಾನಸೌಧದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದಾರೆ. ಇಲ್ಲಿರುವ ಬಹುತೇಕ ಶೌಚಾಲಯಗಳು ಬಂದ್ ಆಗಿರುತ್ತದೆ. ಶೌಚಾಲಯಗಳು ತೆರೆದಾಗ ಅವುಗಳ ಬಳಕೆ ಹೆಚ್ಚಾಗಿರುತ್ತದೆ ಎಂದು ಸಿಬ್ಬಂದಿಗಳು ಹೇಳಿಕೊಡಿದ್ದಾರೆ. 

ಕೇವಲ ಶೌಚಾಲಯಗಳಷ್ಟೇ ಅಲ್ಲ ವಿಧಾನ ಮಂಡಲ ಕೂಡ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ವಿಧಾನಮಂಡಲದ ಮೊದಲನೇ ಮಹಡಿಯ ಪ್ರವೇಶ ದ್ವಾರವನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಆದರೂ, ಸ್ಥಳದಲ್ಲಿ ಮುರಿದ ಪೀಠೋಪಕರಣಗಳನ್ನು ಬಿಸಾಡಲಾಗಿತ್ತು. 

ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಅಧಿಕಾರಿಗಳ ಕುರ್ಚಿಗಳು ಮುರಿದಿರುವುದು ಕಂಡು ಬಂದಿತ್ತು. ವಿಧಾನಸೌಧ ಕಟ್ಟಡ ಮುಂಭಾಗದ ಕಿಟಕಿಗಳು ಹಾಗೂ ಬಾಗಿಲುಗಳ ಮೇಲೆ ಧೂಳು ತುಂಬಿದ ಸ್ಥಿತಿಯಲ್ಲಿದ್ದವು. ನೆಲಕ್ಕೆ ಹಾಕಿದ್ದ ಟೈಲ್ಸ್ ಗಳು ಮುರಿದ್ದವು. 

ವಿಧಾನಸೌಧದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್)ಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಕಾರ್ಯಕ್ರಮ ನಿರ್ವಹಣೆಯ ಹೊಣೆ ಹೊತ್ತುಕೊಂಡಿದ್ದ ಭಾಸ್ಕರ್ ಮಾತನಾಡಿ, ಸರಕಾರದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ತಡವಾಗಿ ಕಾರ್ಯಕ್ರವನ್ನು ಆರಂಭಿಸಿತ್ತು. ಹೀಗಾಗಿ ಬಣ್ಣ ಹಾಗೂ ದುರಸ್ತಿ ಕಾರ್ಯಗಳು ತಡವಾಗಿತ್ತು. ವಿಧಾನಸೌಧದಲ್ಲಿದ್ದ ಶೌಚಾಲಯಗಳನ್ನು ಆಧುನಿಕ ಸೌಕರ್ಯಗಳೊಂದಿಗೆ ನವೀಕರಣ ಮಾಡಲಾಗುತ್ತಿತ್ತು. ಹೀಗಾಗಿ ಹಲವು ಶೌಚಾಲಯಗಳು ಬಂದ್ ಆಗಿದ್ದವು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com