ಆಗಾಗ್ಗೆ ರಜೆ ಕೇಳುತ್ತಿದ್ದಕ್ಕೆ ಅಡುಗೆ ಕೆಲಸಗಾರನನ್ನು ಕೊಂದಿದ್ದ ಮೂವರು ಆರೋಪಿಗಳ ಸೆರೆ

ಬೆಂಗಳೂರು : ರಜೆ ವಿಚಾರಕ್ಕೆ ಅಡುಗೆ ಕೆಲಸಗಾರನನ್ನು ಹತ್ಯೆಗೈದು ಶವ ಸುಟ್ಟು ಹಾಕಿದ್ದ ಮೂವರು ಆರೋಪಿಗಳನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಾಡುಬೀಸನಹಳ್ಳಿಯ ಸೆವೆನ್ ಹಿಲ್ಸ್ ಪೇಯಿಂಗ್ ಗೆಸ್ಟ್ ಕಟ್ಟಡದ ಮಾಲೀಕ ರಾಮಿರೆಡ್ಡಿ ( 52) ವ್ಯವಸ್ಥಾಪಕ ಮಹೇಶ್ ರೆಡ್ಡಿ (22) ಹಾಗೂ ಅಲ್ಲಿನ ನಿವಾಸಿ ವಿನೀತ್ ( 22) ಅವರನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದ ಕುಪ್ಪಂ ನಿವಾಸಿ ಮುರಳಿ (25) ಕೊಲೆಯಾದವರು. ಕೆಂಪಾಪುರ ರಸ್ತೆಯ ಚಲಘಟ್ಟದ ಏರ್ ವೀವ್ ಕಾಂಪೌಂಡ್ ಬಳಿ ಶನಿವಾರ ರಾತ್ರಿ 7-30 ರ ಸುಮಾರಿನಲ್ಲಿ ಅರೆಬೆಂದ ಸ್ಥಿತಿಯಲ್ಲಿದ್ದ ಶವವೊಂದು ಪತ್ತೆಯಾಗಿತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಮಾರತ್ತಹಳ್ಳಿ ಪೊಲೀಸರು , ಸಿಸಿಟಿವಿ ಕ್ಯಾಮರಾ ಹಾಗೂ ಕಾಂರಿನ ಮೇಲಿದ್ದ ಸ್ಟಿಕ್ಕರ್ ನ ಸುಳಿವಿನಿಂದ ಕೊಲೆ ರಹಸ್ಯ ಭೇದಿಸಿದ್ದಾರೆ.
ಪೆಟ್ರೋಲ್ ಪಂಪ್ ಬಳಿ ಆರೋಪಿಗಳು ಪೆಟ್ರೋಲ್ ಖರೀದಿಸಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು, ಅವರ ಮೊಬೈಲ್ ಪೋನ್ ಸಿಗ್ನಲ್ ಕೂಡಾ ಹೊಂದಾಣಿಯಾಗುತಿತ್ತು. ಮಹೇಶ್ ರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಕೊಲೆ ರಹಸ್ಯ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಹೇಶ್ ನೀಡಿದ ಮಾಹಿತಿ ಆಧಾರದ ಮೇಲೆ ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆಗ್ಗಾಗೆ ರಜೆ ಕೇಳುತ್ತಿದ್ದ ಮುರಳಿ ಏಪ್ರಿಲ್ 6 ರಂದು ರಜೆ ಕೇಳಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.
ಮುರಳಿ ವರ್ತನೆಯಿಂದ ಕುಪಿತಗೊಂಡ ವ್ಯವಸ್ಥಾಪಕ ಮಹೇಶ್ ರೆಡ್ಡಿ ಹಾಗೂ ಕಟ್ಟಡದ ನಿವಾಸಿ ವಿನೀತ್, ಕಟ್ಟಿಗೆಯಿಂದ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ವೈರ್ ನಿಂದ ಕೈ ಕಾಲು ಕಟ್ಟಿ ಶವವನ್ನು ಮೂಟೆಯಲ್ಲಿ ತುಂಬಿ ಕೊಠಡಿ ಸ್ವಚ್ಚಗೊಳಿಸಿದ್ದರು.
ನಂತರ ರಾತ್ರಿ ವಿನೀತ್ ಬಾಡಿಗೆ ಕಾರೊಂದು ತಂದು ಶವ ಹಾಕಿಕೊಂಡು ಹೋಗಿದ್ದರು. ನಂತರ ಏರ್ ವ್ಯೂವ್ ಕಾಂಪೌಂಡು ಬಳಿ ಶವಕ್ಕೆ ಬೆಂಕಿ ಸುಟ್ಟು ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


