ಬೆಂಗಳೂರು: ಯುವತಿ ಜೊತೆಗೆ ಅನುಚಿತ ವರ್ತನೆ: ವೈದ್ಯನ ಬಂಧನ, ಬಿಡುಗಡೆ

ಚಿಕಿತ್ಸೆ ಪಡೆಯಲೆಂದು ಕ್ಲಿನಿಕ್ ಗೆ ಹೋದ ಯುವತಿರ್ಯೋವಳ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ನಿವೃತ್ತ ಸರ್ಕಾರಿ ವೈದ್ಯರನ್ನು ಪೊಲೀಸರು ಬಂಧಿಸಿ , ನಂತರ ಬಿಡುಗಡೆ ಮಾಡಿದ್ದಾರೆ.
ವೈದ್ಯರ (ಸಾಂದರ್ಭಿಕ ಚಿತ್ರ)
ವೈದ್ಯರ (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಚಿಕಿತ್ಸೆ ಪಡೆಯಲೆಂದು ಕ್ಲಿನಿಕ್ ಗೆ ಹೋದ ಯುವತಿರ್ಯೋವಳ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ನಿವೃತ್ತ ಸರ್ಕಾರಿ ವೈದ್ಯರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು ಹೊರವಲಯ ಬ್ಯಾಡರಹಳ್ಳಿಯ ಅಂಜನಾನಗರದಲ್ಲಿ ಮೊನ್ನೆ ದಿನ ಈ ಘಟನೆ ನಡೆದಿದೆ. ಅಂಜನಾನಗರದ ಶಿವ ಕ್ಲಿನಿಕ್ ವೈದ್ಯ ಡಾ. ಬಿ. ಶಿವರಾಮ್  ಬಂಧಿಸಲಾಗಿದ್ದ ಆರೋಪಿ.

ಜ್ವರದಿಂದ ಬಳಲುತ್ತಿದ್ದ ಯುವತಿಯೋರ್ವಳು ಚಿಕಿತ್ಸೆಗೆಂದು ಕ್ಲಿನಿಕ್ ಗೆ ಹೋಗಿದ್ದಾಗ
ವೈದ್ಯ ಶಿವರಾಮ್, ಆಕೆಯನ್ನು ತಬ್ಬಿಕೊಂಡು ಮುತ್ತು ಕೊಟ್ಟಿದ್ದಾರೆ. ಗಾಬರಿಗೊಂಡ ಯುವತಿಯು ಕಿರುಚಿಕೊಂಡಿದ್ದರಿಂದ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಡಾಕ್ಟರ್  ನನ್ನು ಥಳಿಸಿ ಯುವತಿಯನ್ನು ರಕ್ಷಿಸಿದ್ದರು. ನಂತರ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವೈದ್ಯನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಿಂದ ಜಾಮೀನು ದೊರೆತ ಹಿನ್ನೆಲೆಯಲ್ಲಿ ವೈದ್ಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com